Zodiac Sign: ಇತರರನ್ನು ನೋಡಿ ಹೊಟ್ಟೆ ಕಿಚ್ಚು ಪಡುವುದು ಈ ರಾಶಿಯವರ ಗುಣವಂತೆ
ಪ್ರತಿಯೊಬ್ಬರು ಒಂದಲ್ಲ ಒಂದು ಕ್ಷಣದಲ್ಲಿ ಯಾವುದಾದರೂ ಒಂದು ವಿಷಯಕ್ಕೆ ನಮ್ಮ ಜೊತೆಗಿರುವವರ ಬಗ್ಗೆ ಹೊಟ್ಟೆ ಕಿಚ್ಚು (jealous) ಪಟ್ಟಿರುತ್ತೇವೆ. ನಮ್ಮ ಪ್ರೀತಿ ಪಾತ್ರರು ಬೇರೆಯವರ ಜೊತೆ ಹೆಚ್ಚು ಆಪ್ತವಾದಾಗ, ಇಷ್ಟವಾದ ವಸ್ತು ಬೇರೆಯವರ ಕೈ ಸೇರಿದಾಗ ಈ ರೀತಿ ಕೆಲವು ಸಂದರ್ಭದಲ್ಲಿ ಬೇಸರವಾಗಿ ಹೊಟ್ಟೆ ಕಿಚ್ಚು ಪಡುವುದು ಸಾಮಾನ್ಯ. ಆದರೆ, ಕೆಲವರು ಪ್ರತಿ ಚಿಕ್ಕ ಚಿಕ್ಕ ವಿಷಯಕ್ಕೂ ಇದು ನಮ್ಮ ಬಳಿ ಅವರ ಬಳಿ ಇದೆಯಲ್ಲಾ ಎಂದು ಹೊಟ್ಟೆ ಕಿಚ್ಚು ಪಡುತ್ತಾರೆ. ಇಂತಹ ಅವರ ಬುದ್ದಿಗೆ ಕೆಲವೊಮ್ಮೆ ಅವರ ರಾಶಿಫಲವೂ (Zodiac Sign) ಕಾರಣವಾಗುತ್ತದೆ. ಅಂತಹ ಕೆಲವು ರಾಶಿಗಳ ಪರಿಚಯ ಇಲ್ಲಿದೆ.
ಕಟಕ: ಹೊಟ್ಟೆ ಕಿಚ್ಚು ಪಟ್ಟರು ಅದನ್ನು ಅವರು ಸುಲಭವಾಗಿ ತೋರಿಸುವುದಿಲ್ಲ. ಸಂಬಂಧದಲ್ಲಿ ಸುರಕ್ಷತೆಯನ್ನು ಬಯಸುವ ಕಾರಣಕ್ಕೆ ಅವರು ಯಾವುದೇ ಈ ರೀತಿಯ ಭಾವನೆ ಅಭಿವ್ಯಕ್ತಿ ಪಡಿಸುವುದಿಲ್ಲ. ಒಳಗೊಳಗೆ ಆದರೆ ಅಭದ್ರತಾ ಭಾವದಿಂದ ಇವರು ಸಂಕಟ ಪಡುತ್ತಾರೆ. ತುಂಬಾ ಸೂಕ್ಮಮತಿಗಳಾಗಿರುವ ಇವರು ಜನರೊಟ್ಟಿಗೆ ಬೇರೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ
2/ 5
ಸಿಂಹ ರಾಶಿ: ತಮ್ಮ ಸಂಗಾತಿಗಳ ವಿಷಯದಲ್ಲಿ ಬದ್ಧತೆಯನ್ನು ಹೊಂದಿರುವ ಇವರು ಅವರ ವಿಷಯದಲ್ಲಿ ಸುಲಭವಾಗಿ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತಾರೆ. ತಮ್ಮ ಸಂಗಾತಿ ಬಗ್ಗೆ ಇತರೆ ಯಾರು ಆಪ್ತವಾಗಿರುವುದನ್ನು ಇವರು ಇಷ್ಟ ಪಡುವುದಿಲ್ಲ. ಇದರಿಂದಾಗಿ ಇವರು ಸಾಕಷ್ಟು ತೊಂದರೆ ಅನುಭವಿಸುವಂತೆ ಆಗುತ್ತದೆ.
3/ 5
ಕನ್ಯಾ ರಾಶಿ: ಎಲ್ಲಾ ವಿಷಯದಲ್ಲೂ ತುಂಬಾ ಟೀಕೆ ಮಾಡುವ ಸ್ವಭಾವ ಇವರಾದಾಗಿರುತ್ತದೆ. ತಮ್ಮ ಬಗ್ಗೆ ಮಾತ್ರವಲ್ಲದೇ ಎಲ್ಲರ ಬಗ್ಗೆ ಕೂಡ ಹೆಚ್ಚು ಆಕ್ಷೇಪ ಹೊಂದಿರುತ್ತಾರೆ. ಯಾರೇ ತಪ್ಪಿ ಮಾಡಿದರೂ ಸಹಿಸದ ಇವರು, ಬೇಗ ತಮ್ಮ ಮೂಡ್ ಕೆಡಿಸಿಕೊಳ್ಳುತ್ತಾರೆ.
4/ 5
ವೃಶ್ಚಿಕ ರಾಶಿ: ಸಿಕ್ಕಾಪಟ್ಟೆ ನಂಬಿಕೆಯನ್ನು ಬೇಡುವ ವ್ಯಕ್ತಿತ್ವ ಈ ರಾಶಿಯವರದು. ಸಂಬಂಧದಲ್ಲಿ ಒಂದು ಚೂರು ತಪ್ಪಾದಾರೂ ಹತಾಶೆಗೆ ಒಳಗಾಗುತ್ತಾರೆ. ಯಾವುದೇ ವಿಚಾರದಲ್ಲೂ ಶೇರ್ ಮಾಡುವ ಮನೋಭಾವ ಹೊಂದಿರದ ಇವರು ಭಾವನಾತ್ಮಕವಾಗಿ ಬೇಗ ಅಸೂಯೆಗೆ ಒಳಗಾಗುತ್ತಾರೆ.
5/ 5
ಮೀನ ರಾಶಿ: ಸಂಬಂಧಗಳ ಒಟ್ಟಿಗೆ ಸದಾ ಬದುಕಲು ಇಷ್ಟಪಡುವ ಇವರು, ಬೇಗ ಅಸೂಯೆಗೆ ಒಳಗಾಗುತ್ತಾರೆ. ಯಾವುದೇ ಸಂಬಂಧವಾಗಲಿ ತಮ್ಮಿಂದ ದೂರ ಆಗಬಾರದು ಎಂದು ಬಯಸುತ್ತಾರೆ. ಸಂಬಂಧದಲ್ಲಿ ಮಾತುಕತೆಗೆ ಹೆಚ್ಚಿನ ಪ್ರಾಶಸ್ತ್ಯ ಎಂಬುದನ್ನು ನಂಬಿರುತ್ತಾರೆ.