ಪ್ರತಿಯೊಬ್ಬರು ಒಂದಲ್ಲ ಒಂದು ಕ್ಷಣದಲ್ಲಿ ಯಾವುದಾದರೂ ಒಂದು ಕೋಪಕ್ಕೆ (Anger) ಒಳಗಾಗುತ್ತೇವೆ. ಎಷ್ಟೇ ತಾಳ್ಮೆವಹಿಸಿದರೂ ಕೆಲವು ವೇಳೆ ಬುದ್ದಿ ಕೋಪಕ್ಕೆ ತುತ್ತಾಗಿ ಅನರ್ಥಗಳಾಗುತ್ತವೆ. ಆದರೆ, ಕೆಲವರು ಪ್ರತಿ ಚಿಕ್ಕ ಚಿಕ್ಕ ವಿಷಯಕ್ಕೂ ಇದು ಈ ರೀತಿ ಕೋಪಗೊಳ್ಳುತ್ತಾರೆ. ಇಂತಹ ಅವರ ಸಿಟ್ಟಿನ ಸ್ವಭಾವಕ್ಕೆ ಕೆಲವೊಮ್ಮೆ ಅವರ ರಾಶಿಫಲವೂ (Zodiac Sign) ಕಾರಣವಾಗುತ್ತದೆ. ಅಂತಹ ಕೆಲವು ರಾಶಿಗಳ ಪರಿಚಯ ಇಲ್ಲಿದೆ.
ಕನ್ಯಾ ರಾಶಿ: ಎಲ್ಲಾ ವಿಷಯದಲ್ಲೂ ತುಂಬಾ ಟೀಕೆ ಮಾಡುವ ಸ್ವಭಾವ ಇವರಾದಾಗಿರುತ್ತದೆ. ತಮ್ಮ ಬಗ್ಗೆ ಮಾತ್ರವಲ್ಲದೇ ಎಲ್ಲರ ಬಗ್ಗೆ ಕೂಡ ಹೆಚ್ಚು ಆಕ್ಷೇಪ ಹೊಂದಿರುತ್ತಾರೆ. ಯಾರೇ ತಪ್ಪು ಮಾಡಿದರೂ ಸಹಿಸದ ಇವರು, ಬೇಗ ತಮ್ಮ ಮೂಡ್ ಕೆಡಿಸಿಕೊಳ್ಳುತ್ತಾರೆ.
2/ 5
ಕಟಕ: ಕೋಪಗೊಂಡರು ಅದನ್ನು ಅವರು ಸುಲಭವಾಗಿ ತೋರಿಸುವುದಿಲ್ಲ. ಸಂಬಂಧದಲ್ಲಿ ಸುರಕ್ಷತೆಯನ್ನು ಬಯಸುವ ಕಾರಣಕ್ಕೆ ಅವರು ಯಾವುದೇ ಈ ರೀತಿಯ ಭಾವನೆ ಅಭಿವ್ಯಕ್ತಿ ಪಡಿಸುವುದಿಲ್ಲ. ಒಳಗೊಳಗೆ ಆದರೆ ಅಭದ್ರತಾ ಭಾವದಿಂದ ಇವರು ಸಂಕಟ ಪಡುತ್ತಾರೆ. ತುಂಬಾ ಸೂಕ್ಮಮತಿಗಳಾಗಿರುವ ಇವರು ಜನರೊಟ್ಟಿಗೆ ಬೇರೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ.
3/ 5
ಮೀನ ರಾಶಿ: ಸಂಬಂಧಗಳ ಒಟ್ಟಿಗೆ ಸದಾ ಬದುಕಲು ಇಷ್ಟಪಡುವ ಇವರು, ಬೇಗ ಕೋಪಗೊಂಡು ಅನರ್ಥ ಮಾಡಿಕೊಳ್ಳುತ್ತಾರೆ. ಯಾವುದೇ ಸಂಬಂಧವಾಗಲಿ ತಮ್ಮಿಂದ ದೂರ ಆಗಬಾರದು ಎಂದು ಬಯಸುತ್ತಾರೆ. ಸಂಬಂಧದಲ್ಲಿ ಮಾತುಕತೆಗೆ ಹೆಚ್ಚಿನ ಪ್ರಾಶಸ್ತ್ಯ ಎಂಬುದನ್ನು ನಂಬಿರುತ್ತಾರೆ.
4/ 5
ಸಿಂಹ ರಾಶಿ: ತಮ್ಮ ಸಂಗಾತಿಗಳ ವಿಷಯದಲ್ಲಿ ಬದ್ಧತೆಯನ್ನು ಹೊಂದಿರುವ ಇವರು ಅವರ ವಿಷಯದಲ್ಲಿ ಸುಲಭವಾಗಿ ಸಿಟ್ಟಿಗೆ ಬುದ್ದಿಕೊಡುತ್ತಾರೆ. ತಮ್ಮ ಸಂಗಾತಿ ಬಗ್ಗೆ ಇತರೆ ಯಾರು ಆಪ್ತವಾಗಿರುವುದನ್ನು ಇವರು ಇಷ್ಟ ಪಡುವುದಿಲ್ಲ. ಇದರಿಂದಾಗಿ ಇವರು ಸಾಕಷ್ಟು ತೊಂದರೆ ಅನುಭವಿಸುವಂತೆ ಆಗುತ್ತದೆ.
5/ 5
ವೃಶ್ಚಿಕ ರಾಶಿ: ಸಿಕ್ಕಾಪಟ್ಟೆ ನಂಬಿಕೆಯನ್ನು ಬೇಡುವ ವ್ಯಕ್ತಿತ್ವ ಈ ರಾಶಿಯವರದು. ಸಂಬಂಧದಲ್ಲಿ ಒಂದು ಚೂರು ತಪ್ಪಾದಾರೂ ಸಹಿಸುವುದಿಲ್ಲ. ಯಾವುದೇ ವಿಚಾರದಲ್ಲೂ ಶೇರ್ ಮಾಡುವ ಮನೋಭಾವ ಹೊಂದಿರದ ಇವರು ಭಾವನಾತ್ಮಕವಾಗಿ ಬೇಗ ಕೋಪಕ್ಕೆ ಒಳಗಾಗುತ್ತಾರೆ