ಕನ್ಯಾ ರಾಶಿ: ಈ ರಾಶಿಗೆ ಸೇರಿದ ಹುಡುಗಿಯರು ಎಲ್ಲಾ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡುತ್ತಾರಂತೆ. ಅವರ ಕೆಲಸದ ವೇಗ ಇತರರಿಗಿಂತ ದುಪ್ಪಟ್ಟಿರುತ್ತದೆ. ಇದರೊಂದಿಗೆ ನಿಗದಿತ ಸಮಯದೊಳಗೆ ತಮ್ಮ ಗುರಿಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಹುಡುಗಿಯರು ಯೋಜನೆಗಳನ್ನು ರೂಪಿಸುವಲ್ಲಿ ನಿಸ್ಸೀಮರು ಎನ್ನಲಾಗುತ್ತದೆ. ಮನೆಯಿಂದ ಕಛೇರಿಯವರೆಗೆ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಾರೆ
ವೃಶ್ಚಿಕ ರಾಶಿ: ಈ ರಾಶಿಯ ಹುಡುಗಿಯರು ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳುತ್ತಾರೆ. ಅವರು ಎಲ್ಲಾ ಸಂದರ್ಭಗಳಲ್ಲಿ ಒಂದೇ ರೀತಿ ಇರುತ್ತಾರೆ. ಈ ಹುಡುಗಿಯರು ತಮ್ಮ ಮನೆ, ತಮ್ಮ ಕಚೇರಿ, ಮಕ್ಕಳು-ಗಂಡನ ಬಗ್ಗೆ ಸಂಪೂರ್ಣ ಗಮನವನ್ನು ನೀಡುವ ಮೂಲಕ ತಮ್ಮ ಗುರಿ ತಲುಪುತ್ತಾರೆ. ವೈಫಲ್ಯಕ್ಕೆ ಹೆದರುವುದಿಲ್ಲ. ಅವರು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.