Vastu Plants: ಈ ಗಿಡಗಳನ್ನು ಅಪ್ಪಿ-ತಪ್ಪಿ ಮನೆಯ ಒಳಗೆ ಇಟ್ಟುಕೊಳ್ಳಬೇಡಿ
Vastu Plants Gives Bad Luck: ನಾವು ವಾಸ್ತು ಪ್ರಕಾರ ಮನೆಯಲ್ಲಿ ಕೆಲವೊಂದು ಗಿಡಗಳನ್ನು ಇಟ್ಟುಕೊಳ್ಳುತ್ತೇವೆ. ಅವುಗಳಿಂದ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂದು ನಂಬುತ್ತೇವೆ. ಆದರೆ ಕೆಲವೊಂದು ಗಿಡಗಳು ನಮಗೆ ಸಮಸ್ಯೆ ಉಂಟು ಮಾಡುತ್ತದೆ. ಆ ಗಿಡಗಳು ಯಾವುವು ಎಂಬುದು ಇಲ್ಲಿದೆ.
ಕ್ಯಾಕ್ಟಸ್ ಗಿಡ ವಾಸ್ತುಶಾಸ್ತ್ರ ಮತ್ತು ಫೆಂಗ್ ಶೂಯಿಯ ಪ್ರಕಾರ ಈ ಕ್ಯಾಕ್ಟಸ್ ಗಿಡ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ತರುತ್ತದೆ. ಅದರ ಚೂಪಾದ ಮುಳ್ಳು ಕೆಟ್ಟ ಶಕ್ತಿಯನ್ನು ಹರಡುತ್ತದೆ ಎನ್ನಲಾಗುತ್ತದೆ. ಈ ಗಿಡ ಕುಟುಂಬದಲ್ಲಿ ಒತ್ತಡ ಮತ್ತು ಆತಂಕವನ್ನು ಸೃಷ್ಟಿ ಮಾಡುತ್ತದೆ.
2/ 8
ಬೋನ್ಸಾಯ್ ಗಿಡ ಬೋನ್ಸಾಯ್ ಗಿಡಗಳು ನೋಡಲು ಸುಂದರವಾಗಿದ್ದರೂ ಸಹ ಇದನ್ನು ಮನೆಯಲ್ಲಿ ಇಡುವುದು ಅಶುಭ ಎನ್ನಲಾಗುತ್ತದೆ. ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ ಎನ್ನುತ್ತಾರೆ ವಾಸ್ತುತಜ್ಞರು.
3/ 8
ಹತ್ತಿ ಗಿಡ ಹತ್ತಿ ಗಿಡಗಳನ್ನು ನಾವು ಮನೆಯಲ್ಲಿ ಬೆಳೆಸಿದ ನಮಗೆ ಸುಂದರವಾಗಿ ಕಾಣುತ್ತದೆ. ಬಿಳಿ ಹೂವುಗಳು ಹಿಮದ ರೀತಿಯ ಭಾವನೆ ಕೊಡುತ್ತದೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಇದು ಒಳ್ಳೆಯದಲ್ಲ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಅಪಾಯ ಎನ್ನುತ್ತಾರೆ.
4/ 8
ಮೆಹೆಂದಿ ಮೆಹೆಂದಿ ಗಿಡಗಳು ಬಹುತೇಕರ ಮನೆಯಲ್ಲಿ ಇರುತ್ತದೆ. ಆದರೆ ಇದನ್ನು ಮನೆಯ ಒಳಗೆ ಇಟ್ಟುಕೊಳ್ಳಬಾರದು. ಇದು ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮನೆಯಿಂದ ಸ್ವಲ್ಪ ಅಡಿಗಳ ದೂರದಲ್ಲಿ ಬೇಕಾದರೆ ನೆಡಬಹುದು.
5/ 8
ಒಣಗಿದ ಗಿಡ ನಾವು ಕೆಲವೊಮ್ಮೆ ಗಿಡಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಗಿಡಗಳು ಬಾಡಿ ಹೋಗುತತ್ವೆ ಅಥವಾ ಸಾಯುತ್ತವೆ. ಈ ರೀತಿಯ ಗಿಡಗಳನ್ನು ನಾವು ಇಟ್ಟುಕೊಳ್ಳುವುದು ಮನೆಗೆ ಒಳ್ಳೆಯದಲ್ಲ.
6/ 8
ಹುಣಸೆ ಮರ ಅಲ್ಲದೇ, ಮನೆಯ ತೋಟದಲ್ಲಿ ಹುಣಸೆ ಗಿಡವನ್ನು ನೆಟ್ಟರೆ ಅದು ಕುಟುಂಬದ ಸದಸ್ಯರ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಇದನ್ನು ಅಪ್ಪಿ-ತಪ್ಪಿ ಮೆಹೆಂದಿ ಗಿಡದ ಪಕ್ಕದಲ್ಲಿ ನೆಟ್ಟರೆ ಸಮಸ್ಯೆಗಳು ಜಾಸ್ತಿ ಎನ್ನಲಾಗುತ್ತದೆ.
7/ 8
ಬಿದಿರು ಫೆಂಗ್ ಶೂಯಿಯ ಪ್ರಕಾರ ಬಿದಿರಿನ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಾಗಿದ್ದರೂ ಸಹ, ವಾಸ್ತು ಪ್ರಕಾರ ಇದು ಅಪಾಯ. ಭಾರತದಲ್ಲಿ ಸಾವಿನ ಸಮಯದಲ್ಲಿ ಬಿದಿರನ್ನು ಬಳಕೆ ಮಾಡುವುದರಿಂದ, ಇದನ್ನು ಮನೆಯ ಒಳಗೆ ಇಟ್ಟುಕೊಳ್ಳಬಾರದು.
8/ 8
ಖರ್ಜೂರದ ಗಿಡ ಖರ್ಜೂರದ ಗಿಡವನ್ನು ನಾವು ಮನೆಯಲ್ಲಿ ಇಟ್ಟುಕೊಂಡರೆ ನಮಗೆ ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ ಎನ್ನಲಾಗುತ್ತದೆ. ಇದು ಸುಲಭವಾಗಿ ಬೆಳೆಯುತ್ತದೆ, ಆದರೆ ನಮ್ಮ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.