Black Thread: ಈ ರಾಶಿಯವರಿಗೆ ಕಪ್ಪು ದಾರವೇ ಕಂಟಕ, ಸಮಸ್ಯೆ ಕಡಿಮೆ ಆಗೋ ಬದ್ಲು ಜಾಸ್ತಿ ಆಗುತ್ತೆ
Black Thread: ನಮ್ಮಲ್ಲಿ ಬಹಳಷ್ಟು ಜನ ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಕೆಲವರು ಚೆಂದ ಕಾಣುತ್ತದೆ ಎಂದು ಇದನ್ನು ಧರಿಸಿದರೆ, ಇನ್ನು ಕೆಲವರು ದೃಷ್ಟಿ ಬೀಳುವುದನ್ನ ತಪ್ಪಿಸಲು ಧರಿಸುತ್ತಾರೆ. ಆದರೆ ಎಲ್ಲರೂ ಕಪ್ಪು ದಾರವನ್ನು ಧರಿಸಬಾರದು. ಯಾವ ರಾಶಿಯವರು ಕಪ್ಪು ದಾರ ಧರಿಸಬಾರದು ಎಂಬುದು ಇಲ್ಲಿದೆ,
ನಿಮ್ಮ ಮನೆಯ ಸುತ್ತ ಮುತ್ತಲಿರುವ ಕೆಲವರು ಮತ್ತು ಸ್ನೇಹಿತರು ಕೈ ಕಾಲುಗಳಿಗೆ ಕಪ್ಪು ದಾರವನ್ನು ಧರಿಸಿರುವುದನ್ನು ನೀವು ನೋಡಿರುತ್ತೀರಿ. ಮಕ್ಕಳು ಮಾತ್ರವಲ್ಲ, ದೊಡ್ಡವರೂ ಸಹ ಕೈಕಾಲಿಗೆ ಈ ಕಪ್ಪು ದಾರವನ್ನು ಧರಿಸುತ್ತಾರೆ.
2/ 7
ಕೆಲವರು ತಮ್ಮ ಅಂದ ಹೆಚ್ಚಾಗುತ್ತದೆ, ಲುಕ್ ನೀಡುತ್ತದೆ ಎಂದು ಕಟ್ಟಿಕೊಂಡರೆ, ಇನ್ನೂ ಕೆಲವರು ಯಾವುದೇ ರೀತಿಯ ಹಾನಿಯಾಗದಂತೆ ಈ ದಾರ ಕಟ್ಟಿಕೊಳ್ಳುತ್ತಾರೆ. ಯಾರ ಕೆಟ್ಟ ಕಣ್ಣು ತಮ್ಮ ಮೇಲೆ ಬೀಳಬಾರದು ಎಂದು ಇದನ್ನು ಕಟ್ಟಲಾಗುತ್ತದೆ.
3/ 7
ಆದರೆ ಎಲ್ಲರೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ. ಕೆಲವು ರಾಶಿಯ ಜನರು ಕೈ ಹಾಗೂ ಕಾಲಿಗೆ ಈ ಕಪ್ಪು ದಾರವನ್ನು ಕಟ್ಟಿಕೊಂಡರೆ ಅಪಾಯವಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 7
ಮೇಷ ರಾಶಿ: ಈ ಮೇಷ ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಮಂಗಳ ಗ್ರಹದ ಬಣ್ಣ ಕೆಂಪು. ಅಲ್ಲದೇ ಈ ಗ್ರಹಕ್ಕೆ ಕಪ್ಪು ಬಣ್ಣ ಎಂದರೆ ಆಗುವುದಿಲ್ಲ. ಆದ್ದರಿಂದ ಮೇಷ ರಾಶಿಯವರು ಕಪ್ಪು ದಾರ ಅಥವಾ ಕಪ್ಪು ಬಟ್ಟೆಯನ್ನು ಧರಿಸಿದರೆ ಮಂಗಳ ಗ್ರಹದ ಕೋಪಕ್ಕೆ ಗುರಿಯಾಗುತ್ತಾರೆ.
5/ 7
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಏಕೆಂದರೆ ವೃಶ್ಚಿಕ ರಾಶಿಯನ್ನೂ ಸಹ ಮಂಗಳ ಗ್ರಹ ಆಳುತ್ತದೆ. ಹಾಗಾಗಿ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಸಮಸ್ಯೆಗಳು ಉಂಟಾಗಬಹುದು ಎನ್ನಲಾಗುತ್ತದೆ.
6/ 7
ಮಂಗಳನ ಬಣ್ಣ ಕೆಂಪಾಗಿರುವುದರಿಂದ ಮೇಷ ಮತ್ತು ವೃಶ್ಚಿಕ ರಾಶಿಯವರು ಕಪ್ಪು ಬಟ್ಟೆ ಧರಿಸಬಾರದು. ಈ ದಾರ ಕಟ್ಟಿಕೊಂಡರೆ ಜೀವನದಲ್ಲಿ ಸಾಲು ಸಾಲಾಗಿ ಸಮಸ್ಯೆಗಳು ಬರುತ್ತದೆ. ಕಷ್ಟಗಳು ಕಡಿಮೆ ಆಗುವುದಿಲ್ಲ. ಹಾಗಾಗಿ ಕಪ್ಪು ಬದಲು ಕೆಂಪು ದಾರ ಕಟ್ಟಿಕೊಳ್ಳಿ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)