ಪೂಜಾ ಮಂದಿರದಲ್ಲಿ ಇರುವ ವಸ್ತುಗಳು ನಿಮ್ಮ ಮನೆಯನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ. ಪ್ರತಿದಿನ ದೇವರ ಮನೆಯನ್ನು ಸ್ವಚ್ಛ ಮಾಡಿ, ಪೂಜೆ ಮಾಡುವುದರಿಂದ ಸಂತೋಷ ಮತ್ತು ಧನಾತ್ಮಕ ವಾತಾವರಣ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಸ್ಥಳವು ಯಾವಾಗಲೂ ಉತ್ತರ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿರುವ ಪೂಜಾ ಕೋಣೆಯು ಯಾವಾಗಲೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಶ್ರೀ ಚಿಹ್ನೆ: ಶ್ರೀ ಚಿಹ್ನೆಯನ್ನು ತಾಯಿ ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶ್ರೀ ಚಿಹ್ನೆಯನ್ನು ಬಿಡಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ನೀವು ಇದನ್ನು ಸಿಂಧೂರ ಅಥವಾ ಕೇಸರಿಯನ್ನು ಮಿಶ್ರಣ ಮಾಡಿ ಬಿಡಿಸಬಹುದು. ಇದನ್ನು ಬಿಡಿಸುವುದರಿಂದ ಮನೆಯಲ್ಲಿ ಯಾವತ್ತೂ ಸಂಪತ್ತಿಗೆ ಕೊರತೆಯಾಗುವುದಿಲ್ಲ ಮತ್ತು ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚುತ್ತದೆ.