ನಮ್ಮ ಅಂಗೈಯಲ್ಲಿ ಹಲವಾರು ರೀತಿಯ ರೇಖೆಗಳಿವೆ, ಅದರಲ್ಲಿ ಕೆಲವು ಶುಭ ಮತ್ತು ಕೆಲವು ಅಶುಭ ರೇಖೆಗಳಿವೆ. ಶುಭ ರೇಖೆಗಳು ಜೀವನದಲ್ಲಿ ಯಶಸ್ಸು ಹಾಗೂ ಸಂತೋಷವನ್ನು ಹೆಚ್ಚಿಸುತ್ತದೆ. ಅಶುಭ ರೇಖೆಗಳು ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಅಶುಭ ರೇಖೆಗಳಿದ್ದರೆ ಎಷ್ಟೇ ಕಷ್ಟಪಟ್ಟರೂ ಸಹ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎನ್ನಲಾಗುತ್ತದೆ.
ರೇಖೆ ಕಟ್ ಆಗಿದ್ದರೆ: ನಿಮ್ಮ ಕೈನಲ್ಲಿರುವ ಯಾವುದೇ ರೇಖೆ ಕಟ್ ಆಗಿದ್ದರೆ ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾರ್ಟ್ ಲೈನ್, ಲೈಫ್ ಲೈನ್ ಮತ್ತು ಹೆಡ್ ಲೈನ್ ಇದರಲ್ಲಿ ಯಾವುದೇ ರೇಖೆ ಕಟ್ ಆಗಿದ್ದರೂ ಸಹ ಒಂದೆಲ್ಲಾ ಒಂದು ಸಮಸ್ಯೆ ಬರಲಿದೆ ಎಂದರ್ಥ. ಉದಾಹರಣೆಗೆ ಹಾರ್ಟ್ ಲೈನ್ ಕಟ್ ಆಗಿದ್ದರೆ ವೈವಾಹಿಕ ಬದುಕಿನಲ್ಲಿ ಕೇವಲ ಸಮಸ್ಯೆಗಳಿರುತ್ತದೆ, ಡಿವೋರ್ಸ್ ಸಹ ಆಗಬಹುದು ಎನ್ನಲಾಗುತ್ತದೆ.