ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಇರಿಸಲಾದ ಪ್ರತಿಯೊಂದು ವಸ್ತುವಿನ ದಿಕ್ಕು ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿರುವ ವಸ್ತುಗಳು ವಾಸ್ತು ಶಾಸ್ತ್ರದ ಪ್ರಕಾರ ಇದ್ದರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ಇಟ್ಟಿರುವ ವಸ್ತುಗಳು ಮಾತ್ರವಲ್ಲ ಬಾಗಿಲುಗಳು ವಾಸ್ತು ಪ್ರಕಾರವಾಗಿಲ್ಲದಿದ್ದರೆ, ಅದು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.