Dream Meaning: ಈ ರೀತಿ ಕನಸು ಬಿದ್ರೆ ನಿಮ್ಮ ಕಷ್ಟಗಳು ಬೇಗ ಪರಿಹಾರವಾಗುತ್ತಂತೆ
Dream Meaning: ನಮಗೆ ಬೀಳುವ ಕನಸುಗಳ ಹಿಂದೆ ಹಲವಾರು ಅರ್ಥವಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವು ಕನಸುಗಳು ನಮಗೆ ಮುಂದಿನ ದಿನಗಳಲ್ಲಿ ಬರುವ ಸಮಸ್ಯೆಯನ್ನು ಸೂಚಿಸುತ್ತದೆ, ಇನ್ನೂ ಕೆಲವು ಒಳ್ಳೆಯದನ್ನು. ಹಾಗೆಯೇ ಕೆಲ ಕನಸುಗಳು ನಮ್ಮ ಕಷ್ಟಗಳು ನಿವಾರಣೆಯಾಗುವುದರ ಸೂಚನೆಯಾಗಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಮಗೆ ಕನಸು ಬೀಳುವುದು ಸಾಮಾನ್ಯ, ಈ ಕನಸುಗಳು ಭವಿಷ್ಯದ ಘಟನೆಗಳ ಸೂಚನೆ ನೀಡುತ್ತದೆ. ಡ್ರೀಮ್ ಸೈನ್ಸ್ ಪ್ರಕಾರ ಕನಸಿನಲ್ಲಿ ನಡೆಯುವ ಘಟನೆಗಳ ಅನುಸಾರ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ನಾವು ತಿಳಿದುಕೊಳ್ಳಬಹುದು. ಶುಭ ಹಾಗೂ ಅಶುಭ ಘಟನೆಗಳ ಬಗ್ಗೆ ನಮಗೆ ಕನಸಿನ ಮೂಲಕ ಮಾಹಿತಿ ಸಿಗುತ್ತದೆ ಎನ್ನಬಹುದು.
2/ 8
ಕೆಲವು ಕನಸುಗಳು ನಮ್ಮ ಜೀವನದಲ್ಲಿ ಆಗುವ ಒಳ್ಳೆಯ ಘಟನೆಯನ್ನು ಸೂಚಿಸುತ್ತವೆ. ಉದಾಹರಣೆಗೆ ತೀರ್ಥಯಾತ್ರೆ ಹೋಗುವುದು, ದೇವರ ದರ್ಶನ ಅಥವಾ ದೇವಸ್ಥಾನಕ್ಕೆ ಹೋಗುವ ಕನಸು ಕಂಡರೆ ಅದು ತುಂಬಾ ಮಂಗಳಕರ ಎನ್ನಲಾಗುತ್ತದೆ.
3/ 8
ತೀರ್ಥಯಾತ್ರೆ ಹೋಗುವುದು – ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ತೀರ್ಥಯಾತ್ರೆ ಹೋಗುವ ರೀತಿ ಕಂಡರೆ ಬಹಳ ಒಳ್ಳೆಯದಂತೆ. ಈ ಕನಸಿನ ಅರ್ಥ ನಿಮ್ಮ ಮೇಲೆ ದೇವರ ಅನುಗ್ರಹವಿದ್ದು, ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಎಂದು.
4/ 8
ಇನ್ನು ನೀವು ತೀರ್ಥಯಾತ್ರೆ ಹೋಗುತ್ತಿರುವ ಕನಸಿನಲ್ಲಿ ದೇವರನ್ನು ನೋಡಿದರೆ ಇದರಿಂದ ನಿಮ್ಮ ಅದೃಷ್ಟ ಬದಲಾಗಲಿದೆ ಎಂದು ಅರ್ಥವಂತೆ. ಹಾಗೆಯೇ ಬಹುಬೇಗ ನೀವು ಒಳ್ಳೆಯ ಸುದ್ದಿ ಕೇಳಲಿದ್ದು, ಕಷ್ಟಗಳು ನಿವಾರಣೆಯಾಗುವುದರ ಸಂಕೇತವಾಗಿದೆ.
5/ 8
ದೇವಸ್ಥಾನ: ಕನಸಿನಲ್ಲಿ ದೇವಸ್ಥಾನವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಸುಂದರವಾದ ದೇವಸ್ಥಾನ ಕಂಡರೆ, ನೀವು ಜೀವನದಲ್ಲಿ ಸಂತೋಷವಾಗಿ ಮತ್ತು ನೆಮ್ಮದಿಯಾಗಿರುತ್ತೀರಿ ಎಂದು ಅರ್ಥವಂತೆ.
6/ 8
ಈ ಕನಸಿನ ಪ್ರಕಾರ ನಿಮ್ಮ ಜೀವನದಲ್ಲಿ ಬಹಳ ದಿನಗಳಿಂದ ಕಾಡಿದ್ದ ಸಮಸ್ಯೆಯೊಂದು ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ಅಲ್ಲದೇ ಆರ್ಥಿಕವಾಗಿ ಸಹ ನಿಮಗೆ ಲಾಭ ಹೆಚ್ಚಾಗುತ್ತದೆ ಮತ್ತು ವೈಯಕ್ತಿಕ ಬದುಕಿನಲ್ಲಿ ಸಹ ಸಮಸ್ಯೆ ಕಡಿಮೆಯಾಗುವುದರ ಲಕ್ಷಣ ಇದಂತೆ.
7/ 8
ಬಿಳಿ ದೇವಸ್ಥಾನ: ನಿಮಗೆ ಕನಸಿನಲ್ಲಿ ಗಣೇಶನ ಮೂರ್ತಿ ಇರುವ ಬಿಳಿ ದೇವಸ್ಥಾನ ಕಂಡರೆ ಗಣೇಶನ ಕೃಪೆ ನಿಮ್ಮ ಮೇಲಿರುತ್ತದೆ ಎಂದರ್ಥ. ಹಾಗೆಯೇ ನಿಮ್ಮ ಕೆಲಸಕ್ಕೆ ಬಂದಿದ್ದ ವಿಘ್ನೆಗಳೆಲ್ಲಾ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ಹಣದ ಸುರಿಮಳೆ ಆಗುತ್ತದೆ ಎನ್ನುವ ನಂಬಿಕೆ ಇದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)