Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

Vastu Dosha: ವಾಸ್ತು ದೋಷಗಳಿದ್ದರೆ ಹಲವಾರು ಸಮಸ್ಯೆಗಳು ಬರುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಜಗಳ ಆಗುತ್ತದೆ ಹೀಗೆ. ಹಾಗಾಗಿ ಮನೆಯಲ್ಲಿ ನಾವು ಕೆಲವು ಬದಲಾವಣೆ ಮಾಡುವುದರ ಮೂಲಕ ವಾಸ್ತು ದೋಷದಿಂದ ಪರಿಹಾರ ಪಡೆಯಬೇಕು. ಹಾಗಾದ್ರೆ ವಾಸ್ತುದೋಷದಿಂದ ಪರಿಹಾರ ಪಡೆಯಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published:

  • 17

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಇದಕ್ಕಾಗಿ ಮನೆ ನಿರ್ಮಾಣದಿಂದ ಪ್ರವೇಶ ದ್ವಾರದವರೆಗೆ ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತದೆ. ಇದು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಮತ್ತೊಂದೆಡೆ, ಅಜಾಗರೂಕತೆಯು ಜೀವನದಲ್ಲಿ ಅಸ್ಥಿರತೆಯನ್ನು ತರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗಲಿದೆ. ಈ ವಾಸ್ತು ದೋಷ ಇದ್ದರೆ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ.

    MORE
    GALLERIES

  • 27

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ಮನಿ ಪ್ಲಾಂಟ್ ನೆಡಿ: ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಸುಖ ಶಾಂತಿ ಸಿಗುತ್ತದೆ. ಇದರ ಜೊತೆಗೆ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಮನೆಯ ಉತ್ತರ ಭಾಗದಲ್ಲಿ ಮನಿ ಪ್ಲಾಂಟ್ ಇರಬೇಕು. ಈ ದಿಕ್ಕನ್ನು ಶೇಖರಣಾ ಕೋನ ಎಂದೂ ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಉತ್ತರ ದಿಕ್ಕು ಹಣದ ಸಂಕೇತವಾಗಿದೆ.

    MORE
    GALLERIES

  • 37

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ಕನ್ನಡಿ: ಮನೆಯಲ್ಲಿ ವಾಸ್ತು ದೋಷಗಳಿಂದ ಪರಿಹಾರ ಪಡೆಯಲು ಕನ್ನಡಿಯನ್ನು ಸಹ ಬಳಸಬಹುದು . ಇದಕ್ಕಾಗಿ ಮನೆಯ ಮುಖ್ಯ ಬಾಗಿಲಿನ ಮುಂದೆ ಸರಿಯಾದ ಗಾತ್ರದ ಕನ್ನಡಿಗಳನ್ನು ಹಾಕಿ. ಕನ್ನಡಿಯನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಾಕಿದರೆ ಉತ್ತಮ. ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಪ್ರವೇಶ ದ್ವಾರದ ಹಿಂದೆ ಕನ್ನಡಿಯನ್ನು ಎಂದಿಗೂ ಇಡಬೇಡಿ.

    MORE
    GALLERIES

  • 47

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ಮನೆಯಲ್ಲಿ ಸ್ಫಟಿಕ ಇಟ್ಟುಕೊಳ್ಳಿ: ವಾಸ್ತು ದೋಷಗಳನ್ನು ಹೋಗಲಾಡಿಸಲು, ಖಂಡಿತವಾಗಿಯೂ ಮನೆಯಲ್ಲಿ ಸ್ಫಟಿಕ ಇಟ್ಟುಕೊಳ್ಳಿ. ಇದನ್ನುಇಟ್ಟುಕೊಳ್ಳುವುದರಿಂದ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರುವುದಿಲ್ಲ. ನಿಮ್ಮ ಆಫೀಸ್ನಲ್ಲಿ ಸಹ ಸ್ಫಟಿಕ ಇಟ್ಟುಕೊಳ್ಳಬಹುದು.

    MORE
    GALLERIES

  • 57

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ವಿಂಡ್ ಚೈಮ್: ವಾಸ್ತು ಪರಿಹಾರಗಳಲ್ಲಿ ವಿಂಡ್ ಚೈಮ್ಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ವಾಸ್ತು ಪಂಡಿತರ ಪ್ರಕಾರ, ಮನೆಯಲ್ಲಿ ವಿಂಡ್ ಚೈಮ್ಗಳನ್ನು ಹಾಕಿದರೆ ನೆಗೆಟಿವ್ ಎನರ್ಜಿ ಹೊರಹೋಗುತ್ತದೆ. ಇದರಲ್ಲಿರುವ ಘಂಟೆಗಳು ಒಂದಕ್ಕೊಂದು ಹೊಡೆದಾಗ, ಶಬ್ದವು ಪಾಸಿಟಿವ್ ಮನೆಗೆ ತರುತ್ತದೆ. ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯವಿರುತ್ತದೆ.

    MORE
    GALLERIES

  • 67

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    ಹಾರ್ಸ್ ಶೂ: ವಾಸ್ತು ದೋಷದಿಂದ ನಿಮಗೆ ತೊಂದರೆಯಾಗಿದ್ದರರೆ ಹಾಗೈ ಅದರಿಂದ ಪರಿಹಾರ ಬೇಕು ಎಂದರೆ ಮನೆಯ ಮುಖ್ಯ ದ್ವಾರದಲ್ಲಿ ಹಾರ್ಸ್ಶೂ ಅನ್ನು ನೇತು ಹಾಕಿ. ಇಷ್ಟೇ ಅಲ್ಲದೇ, ಮನೆಯ ಮುಖ್ಯ ದ್ವಾರದಲ್ಲಿ ಕುದುರೆ ಕೂದಲನ್ನು ಇಡುವುದರಿಂದ ಸಹ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 77

    Vastu Dosha: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ವಾಸ್ತು ದೋಷದಿಂದ ಪರಿಹಾರ ಸಿಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES