ಮಿಥುನ: ಮಿಥುನ ರಾಶಿಯ ಲಗ್ನ ಮನೆಯಲ್ಲಿ ಮಂಗಳ ಸಂಚಾರ ಇರುತ್ತದೆ. ಹೀಗಾಗಿ, ನೀವು ಪ್ರಯಾಣದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮಆರೋಗ್ಯ ಸಹ ಚೆನ್ನಾಗಿರುತ್ತದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಂಗಳ ಗ್ರಹದ ಪ್ರಭಾವದಿಂದ ನೀವು ಆಸ್ತಿ ಖರೀದಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ನೀವು ಹೊಸ ಆಸ್ತಿಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬಯಸಿದರೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ
ಕನ್ಯಾರಾಶಿ: ಕನ್ಯಾ ರಾಶಿಯವರು ಮಂಗಳ ಸಂಚಾರದಿಂದ ಉತ್ತಮ ಲಾಭ ಪಡೆಯುತ್ತಾರೆ. ಪರಿಣಾಮವಾಗಿ, ನಿಮ್ಮ ವೃತ್ತಿಜೀವನವು ಉತ್ತಮವಾಗಿರುತ್ತದೆ. ನೀವು ಬಡ್ತಿ ಪಡೆಯಬಹುದು. ಕಚೇರಿಯಲ್ಲಿರುವ ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ ಮತ್ತು ನಿಮಗೆ ಬಹುಮಾನ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಜಾಗರೂಕರಾಗಿರಿ. ಯಾವುದೇ ರೀತಿಯ ವಿವಾದವನ್ನು ತಪ್ಪಿಸಿ.