Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

Dream Meaning: ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಅದರದೇ ಆದ ಅರ್ಥವಿದೆ ಎಂದು ಡ್ರೀಮ್ ಸೈನ್ಸ್ ಹೇಳುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಕೆಲವು ಕನಸುಗಳು ನಮ್ಮ ಜೀವನದಲ್ಲಿ ಅಶುಭ ಘಟನೆಗಳನ್ನು ಸೂಚಿಸುತ್ತವೆ. ಹಾಗಾದರೆ ಯಾವ ಕನಸುಗಳು ಕೆಟ್ಟ ಕನಸುಗಳು ಎಂಬುದು ಇಲ್ಲಿದೆ.

First published:

  • 111

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಕನಸುಗಳು ಎಲ್ಲರಿಗೂ ಬೀಳುತ್ತವೆ. ಏಕೆಂದರೆ ಕನಸುಗಳು ಜೀವನದ ಪ್ರಮುಖ ಭಾಗವಾಗಿದೆ. ಕೆಲವೊಮ್ಮೆ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ, ಕೆಲವೊಮ್ಮೆ ತುಂಬಾ ಭಯಾನಕ ಕನಸುಗಳು ಬೀಳುತ್ತವೆ. ಕನಸಿನ ವಿಜ್ಞಾನದ ಪ್ರಕಾರ, ಕೆಲವು ಕನಸುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೆಲ ಕನಸುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕನಸುಗಳು ವ್ಯಕ್ತಿಯ ಜೀವನದಲ್ಲಿ ಮುಂಬರುವ ಸಮಯವನ್ನು ಸೂಚಿಸುತ್ತವೆ. ಕೆಲವು ಶುಭ ಕನಸುಗಳು ಬೀಳುವುದು ವ್ಯಕ್ತಿಯ ಜೀವನವು ಸಂತೋಷವಾಗಿರುವುದನ್ನು ಸೂಚಿಸುತ್ತದೆ, ಕೆಲವು ಕನಸುಗಳು ಜೀವನದಲ್ಲಿ ಕೆಲವು ಅಹಿತಕರ ಘಟನೆಗಳನ್ನು ಸೂಚಿಸುತ್ತವೆ.

    MORE
    GALLERIES

  • 211

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಕಪ್ಪು ಕಾಗೆ: ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಪ್ಪು ಕಾಗೆಯನ್ನು ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ದೊಡ್ಡ ಅಪಾಯದ ಸೂಚನೆ. ಈ ಕನಸು ಕಾಣಿಸಿಕೊಂಡಾಗ, ವ್ಯಕ್ತಿಯು ಸಾವಿನ ಸುದ್ದಿಯನ್ನು ಸಹ ಕೇಳಬಹುದು.

    MORE
    GALLERIES

  • 311

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಹಕ್ಕಿಗಳು ಹಾರುವುದು: ಒಬ್ಬ ವ್ಯಕ್ತಿ ಕನಸಿನಲ್ಲಿ ಪಕ್ಷಿಗಳು ಹಾರುವುದನ್ನು ಕಂಡರೆ, ಕನಸಿನ ವಿಜ್ಞಾನದ ಪ್ರಕಾರ, ವ್ಯಕ್ತಿಗೆ ಹಣದ ನಷ್ಟ ಆಗಬಹುದು. ಇದು ಬಡತನಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ರೀತಿಯ ಕನಸುಗಳನ್ನು ಅಶುಭ ಸೂಚನೆಗಳೆಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 411

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಜೋರಾದ ಶಬ್ಧ: ಒಬ್ಬ ವ್ಯಕ್ತಿ ಕನಸಿನಲ್ಲಿ ದೊಡ್ಡ ಶಬ್ದಗಳನ್ನು ಕೇಳಿದಾಗ, ಅದು ವ್ಯಕ್ತಿಯ ಮನೆಯಲ್ಲಿ ಕೌಟುಂಬಿಕ ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಬೀಳುವ ವ್ಯಕ್ತಿಯು ಬಹಳಷ್ಟು ಕುಟುಂಬ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಅವರ ಕುಟುಂಬದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ.

    MORE
    GALLERIES

  • 511

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಹಿಂಸಾತ್ಮಕ ಪ್ರಾಣಿ: ಹಿಂಸಾತ್ಮಕ ಪ್ರಾಣಿ ಕನಸಿನಲ್ಲಿ ನಿಮ್ಮನ್ನು ಹಿಂಬಾಲಿಸುವುದು ಕೆಟ್ಟದ್ದರ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಕನಸು ಬಿದ್ದರೆ ವ್ಯಕ್ತಿಗೆ ದೊಡ್ಡ ಆರ್ಥಿಕ ನಷ್ಟ ಆಗಲಿದೆ. ಇದು ನಿಮಗೆ ಹಣದ ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತದೆ.

    MORE
    GALLERIES

  • 611

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಪ್ರಕೃತಿ ವಿಕೋಪ: ಕನಸಿನಲ್ಲಿ ಚಂಡಮಾರುತ, ಸುಂಟರಗಾಳಿ ಅಥವಾ ಬೀಳುವ ಮನೆಯ ಬಗ್ಗೆ ಕನಸು ಕಂಡಾಗ, ದುರದೃಷ್ಟದ ನೆರಳು ವ್ಯಕ್ತಿಯನ್ನು ಹಿಂಬಾಲಿಸಲು ಪ್ರಾರಂಭಿಸುತ್ತದೆ ಎಂದು ಅರ್ಥ. ಈ ಕನಸುಗಳು ನಿಮ್ಮ ಜೀವನದಲ್ಲಿ ದುರದೃಷ್ಟವನ್ನು ಸೂಚಿಸುತ್ತವೆ.

    MORE
    GALLERIES

  • 711

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ರಕ್ತ: ಅದೇ ರೀತಿ ಕನಸಿನಲ್ಲಿ ರಕ್ತಸ್ರಾವ ಕಾಣಿಸಿಕೊಂಡಾಗ ಅದನ್ನು ದೀರ್ಘಕಾಲದ ಅನಾರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ಬಿದ್ದಾಗ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

    MORE
    GALLERIES

  • 811

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಎತ್ತಿನ ಗಾಡಿ: ಒಬ್ಬ ವ್ಯಕ್ತಿಯು ರಾತ್ರಿ ಮಲಗುವಾಗ ಕನಸಿನಲ್ಲಿ ಎತ್ತಿನ ಬಂಡಿಯನ್ನು ನೋಡದರೆ, ಇದು ಜೀವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ನಿಧಾನಗತಿಯನ್ನು ಸೂಚಿಸುತ್ತದೆ. ಇದು ಭವಿಷ್ಯದ ವೈಫಲ್ಯಗಳನ್ನು ಸಹ ಸೂಚಿಸುತ್ತದೆ.

    MORE
    GALLERIES

  • 911

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಕಪ್ಪು ಮೋಡ: ಒಬ್ಬ ವ್ಯಕ್ತಿಗೆ ಕನಸಿನಲ್ಲ ಕಪ್ಪು ಮೋಡಗಳು ಕಂಡರೆ ಅದು ದುಃಖದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ, ಕಪ್ಪು ಮೋಡಗಳನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಶೀಘ್ರದಲ್ಲೇ ಅಡೆತಡೆಗಳು ಉಂಟಾಗುತ್ತವೆ. ಅಂತಹ ಕನಸುಗಳು ಬಂದಾಗ ನಾವು ಜಾಗರೂಕರಾಗಿರಬೇಕು.

    MORE
    GALLERIES

  • 1011

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಸೂರ್ಯಗ್ರಹಣ, ಚಂದ್ರಗ್ರಹಣ: ನಿಮ್ಮ ಕನಸಿನಲ್ಲಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣವನ್ನು ನೀವು ನೋಡಿದರೆ ಅದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕನಸುಗಳು ಬಂದಾಗ, ವ್ಯಕ್ತಿಯ ಜೀವನವು ಅನೇಕ ಸಮಸ್ಯೆಗಳಿಂದ ತುಂಬಿರುತ್ತದೆ.

    MORE
    GALLERIES

  • 1111

    Dream Meaning: ಈ 10 ಕನಸುಗಳಷ್ಟು ಕೆಟ್ಟ ಕನಸುಗಳು ಬೇರೆ ಯಾವುದೂ ಇಲ್ವಂತೆ! ನಿಮಗೂ ಈ ತರ ಆಗಿದ್ರೆ ಹುಷಾರ್

    ಕಪ್ಪು ಬಟ್ಟೆ: ಕಪ್ಪು ಬಟ್ಟೆಗಳನ್ನು ಧರಿಸಿರುವ ವ್ಯಕ್ತಿ ಅಥವಾ ಕಪ್ಪು ವಸ್ತು ಕನಸಿನಲ್ಲಿ ಕಾಣಿಸಿಕೊಂಡಾಗ, ಅದು ಸಾಮಾನ್ಯವಾಗಿ ಕೆಲವು ಗಂಭೀರ ಅನಾರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ನಿಮ್ಮ ಅನಾರೋಗ್ಯವನ್ನು ತೋರಿಸುತ್ತದೆ.

    MORE
    GALLERIES