ಹಿಂದೂ ಧರ್ಮದ ಜ್ಯೋತಿಷ್ಯದ ಪ್ರಕಾರ ಶನಿಯು ತನ್ನ ರಾಶಿಯನ್ನು ಬದಲಾಯಿಸಲು ಮುಂದಾದಾಗ ಅಥವಾ ಇನ್ನೊಂದು ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸಿದಾಗ, ಇದು ಆ ಸಮಯದಲ್ಲಿ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾವಣೆಯಾಗಬೇಕಾದರೆ ಬಹಳ ಸಮಯ ಬೇಕಾಗುತ್ತದೆ. ಆದ್ದರಿಂದ ಶನಿಯನ್ನು ಬಹಳ ನಿಧಾನವಾಗಿ ಚಲಿಸುವ ಗ್ರಹವೆಂದೂ ಹೇಳುತ್ತಾರೆ.ಕಳೆದ ಜನವವರಿಯಿಂದ ಕುಂಭ ರಾಶಿಯಲ್ಲಿರುವ ಶನಿ ಅದೇ ರಾಶಿಯಲ್ಲಿ ಹಿಮ್ಮುಖವಾಗುತ್ತದೆ. ಜೂನ್ 17,2023 ರ ರಾತ್ರಿ 10.48ಕ್ಕೆ ಶನಿ ತನ್ನ ಹಿಮ್ಮುಖ ಚಲನೆ ಆರಂಭಿಸುತ್ತದೆ
ಸಿಂಹ ರಾಶಿಯಲ್ಲಿ ಶನಿಯು ಹಿಮ್ಮುಖವಾಗುವುದರಿಂದ ಈ ರಾಶಿಯವರಿಗೆ ಸಹ ಪ್ರಯೋಜನವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗದ ಪರಿಣಾಮವು ಧನಾತ್ಮಕವಾಗಿರುತ್ತದೆ. ವ್ಯವಹಾರದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ಧೈರ್ಯದಿಂದ ತೆಗೆದುಕೊಳ್ಳಬಹುದು. ಇದರಿಂದ ಮುಂಬರುವ ಅವಧಿಯಲ್ಲಿ ಲಾಭ ತರುವ ಸಾಧ್ಯತೆ ಇದೆ. ಹೊಸ ಆದಾಯದ ಮೂಲಗಳು ಸಹ ತೆರೆದುಕೊಳ್ಳಬಹುದು. ಇದರೊಂದಿಗೆ, ನೀವು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ಪಡೆಯಬಹುದು.