Puja: ಮಹಿಳೆಯರು ಯಾಕೆ ಮುಟ್ಟಿನ ಸಮಯದಲ್ಲಿ ಪೂಜೆ ಮಾಡಬಾರದು?; ಇಲ್ಲಿದೆ ವೈಜ್ಞಾನಿಕ ಕಾರಣ
ಮಹಿಳೆಯರ ಋತುಸ್ರಾವದ ಸಮಯದಲ್ಲಿ ಆಕೆಯನ್ನು ಪೂಜೆ- ಧಾರ್ಮಿಕ ಆಚರಣೆಗಳಿಂದ ದೂರವಿಡುವುದು ಬಹು ಹಿಂದಿನಿಂದ ನಡೆದು ಕೊಂಡು ಬಂದಿದೆ. ಇದು ಮೌಢ್ಯಾಚರಣೆ ಮೂಲಕ ಬೆಳೆದು ಬಂದಿದ್ದು, ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ
ಮಹಿಳೆಯ ಋತುಚಕ್ರ ಸಮಯದಲ್ಲಿ ಮಹಿಳೆಯರು ಪೂಜೆ- ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಬಾರದು ಎಂಬ ನಂಬಿಕೆ ಇದೆ. ಈ ಕುರಿತು ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತದೆ. ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗಿಯಾಗಬಾರದು ಎಂಬುದರ ಹಿಂದೆ ವೈಜ್ಞಾನಿಕ ಕಾರಣ ಇದೆ.
2/ 8
ಮಹಿಳೆಯರ ಋತುಸ್ರಾವದ ಸಮಯದಲ್ಲಿ ಆಕೆಯನ್ನು ಪೂಜೆ- ಧಾರ್ಮಿಕ ಆಚರಣೆಗಳಿಂದ ದೂರವಿಡುವುದು ಬಹು ಹಿಂದಿನಿಂದ ನಡೆದು ಕೊಂಡು ಬಂದಿದೆ.
3/ 8
ಈ ಸಂಪ್ರದಾಯ ಕೆಲವು ವೈಜ್ಞಾನಿಕ ಸತ್ಯವಿದೆ. ಆದರೆ ಆ ಸತ್ಯವನ್ನು ಅರ್ಥಮಾಡಿಕೊಳ್ಳಲು ಅಥವಾ ವಿವರಿಸಲು ಪ್ರಯತ್ನಿಸಲಿಲ್ಲ, ಆದ್ದರಿಂದ ಆ ನಂಬಿಕೆಯು ಮೂಢನಂಬಿಕೆ ಮತ್ತು ದುರಾಚಾರವಾಗಿ ಬದಲಾಯಿತು.
4/ 8
ಪ್ರಾಚೀನ ಕಾಲದಲ್ಲಿ ದೇವರ ಪಠಣವಿಲ್ಲದೆ ಪೂಜೆ ಪೂರ್ಣವಾಗುತ್ತಿರಲಿಲ್ಲ. ಈ ದೇವರ ಪಠಣದ ವೇಳೆ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಲಾಗುತ್ತಿತ್ತು.
5/ 8
ಋತುಚಕ್ರದ ಸಮಯದಲ್ಲಿ, ಮಹಿಳೆಯರ ದೇಹದಲ್ಲಿನ ವಿವಿಧ ಹಾರ್ಮೋನ್ ಬದಲಾವಣೆಗಳಿಂದಾಗಿ, ಬಹಳಷ್ಟು ನೋವು ಮತ್ತು ಆಯಾಸವಿದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯು ಹೆಚ್ಚು ಹೊತ್ತು ಕುಳಿತು ಮಂತ್ರ ಅಥವಾ ಆಚರಣೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ
6/ 8
ಜೊತೆಗೆ ಪೂಜೆ ವೇಳೆ ಆಕೆ ಉಪವಾಸ ವ್ರತಗಳನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಮೊದಲೇ ಸಾಕಷ್ಟು ದೈಹಿಕವಾಗಿದ್ದ ಬಳಲಿದ್ದ ಆಕೆಗೆ ಈ ಸಮಯದಲ್ಲಿ ಉಪವಾಸ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಆಕೆಗೆ ಉಪವಾಸ ವ್ರತ ಮಾಡದಂತೆ ನೋಡಿಕೊಳ್ಳಲಾಯಿತು.
7/ 8
ಅಲ್ಲದೇ, ಈ ಸಮಯದಲ್ಲಿ ಆಕೆ ಪದೇ ಪದೇ ಬಟ್ಟೆಗಳಲ್ಲಿ ಕಲೆಗಳು ಮೂಡುತ್ತಿದ್ದವು. ಈ ಸಂದರ್ಭದಲ್ಲಿ ಆಕೆಯ ವಿಶ್ರಾಂತಿ ಮತ್ತು ಪ್ರತ್ಯೇಕತೆ ಅವಶ್ಯಕ ಇದೆ ಎಂದು ಆಕೆಗೆ ಪ್ರತ್ಯೇಕ ಕೊಠಡಿಯಲ್ಲಿ ತಂಗಲು ಅನುವು ಮಾಡಿಕೊಡಲಾಯಿತು.
8/ 8
ಆದರೆ, ಕಾಲ ಕ್ರಮೇಣ ಈ ಪದ್ಧತಿಯಲ್ಲಿ ಮೂಢ ನಂಬಿಕೆ ಬೆಳೆದು ಆಕೆ ಅಪವಿತ್ರ, ಪೂಜೆ ವೇಳೆ ದೂರ ಇರಬೇಕು ಎಂಬ ನಂಬಿಕೆ ಬೆಳೆಯಿತು. ಈ ಹಿನ್ನಲೆ ಇದರ ಹಿಂದಿನ ಸತ್ಯ ಅರಿಯಲು ಹೋಗಲಿಲ್ಲ