ಕನಸಿನಲ್ಲಿ ಈ ವಸ್ತು ಕಂಡರೆ ಶೀಘ್ರದಲ್ಲೇ ಹಣವಂತರಾಗಲಿದ್ದೀರಾ ಎಂದು ಅರ್ಥವಂತೆ
ಬಹುತೇಕರು ಮಲಗುತ್ತಲೇ ಕನಸಿನ (Dream) ಲೋಕಕ್ಕೆ ಹೋಗುತ್ತಾರೆ. ಸಪ್ನಾ ಶಾಸ್ತ್ರದ (Sapna Shastra) ಪ್ರಕಾರ ಕನಸುಗಳು ಭವಿಷ್ಯದ ಕನ್ನಡಿ. ಇದರ ಮೂಲಕ ವ್ಯಕ್ತಿಯು ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ.
ಕನಸು ಒಳ್ಳೆಯದು ಅಥವಾ ಕೆಟ್ಟದ್ದೇ ಎಂದು ಅದರ ಅರ್ಥವನ್ನು ಅರ್ಥಮಾಡಿಕೊಳ್ಳುವ ಮೂಲಕ ನಿರ್ಣಯಿಸಬಹುದು. ಇನ್ನು ಕನಸಿನಲ್ಲಿ ಈ ಕನಸು ಕಂಡರೆ ಹಣದ ಹರಿವು ಆಗುತ್ತದೆ ಎನ್ನಲಾಗಿದೆ.
2/ 10
ಕನಸಿನಲ್ಲಿ ದೇವರು ಕಂಡರೆ ಒಳ್ಳೆಯದು. ಇದು ನಿಮಗೆ ಭವಿಷ್ಯದಲ್ಲಿ ಹಣದ ಆಗಮನದ ಸೂಚನೆ ಆಗಿದೆ. ಕೆಲಸಗಳಿಂದ ನೀವು ಯಶಸ್ಸನ್ನು ಪಡೆಯುತ್ತೀರಾ ಎಂಬುದರ ಮುನ್ಸೂಚನೆ ಇದಾಗಿದೆ.
3/ 10
ಕನಸಿನಲ್ಲಿ ಕುದುರೆ ಸವಾರಿ ಮಾಡುವುದು ಲಾಭದ ಸಂಕೇತವಾಗಿದೆ. ಇದು ನಿಮಗೆ ಹೊಸ ಉದ್ಯೋಘ ಪಡೆಯುವುದರ ಮನ್ಸೂಚನೆ ಆಗಿದೆ. ಕನಸಿನಲ್ಲಿ ಆನೆಯನ್ನು ನೋಡುವುದನ್ನು ಸಹ ಮಂಗಳಕರವೆಂದು ಹೇಳಲಾಗುತ್ತದೆ. ಇದರ ಅರ್ಥ ಯಾವುದೋ ಮೂಲದಿಂದ ಹಣ ನಿಮ್ಮ ಕೈ ಸೇರಲಿದೆ ಎಂದು ಅರ್ಥ
4/ 10
ಕನಸಿನಲ್ಲಿ ನೀವು ಏಣಿ ಏರುತ್ತಿರುವುದು ಕಂಡರೆ ನೀವು ಹಣವನ್ನು ಗಳಿಸಲಿದ್ದೀರಿ ಎಂದರ್ಥ. ಅಂತಹ ಕನಸು ಭವಿಷ್ಯದಲ್ಲಿ ಲಾಭಾದಾಯಕ ಹುದ್ದೆಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದು ಅರ್ಥ
5/ 10
ಕನಸಿನಲ್ಲಿ ಬೆಂಕಿ ಕಾಣಿಸುವುದು, ಅಥವಾ ಅಡುಗೆ ಮಾಡುವುದನ್ನು ನೋಡುವುದು ಸಹ ಮಂಗಳಕರ ಎಂದು ಪರಿಗಣಿಸಲಾಗಿದೆ. ಇದರರ್ಥ ನೀವು ಉದ್ಯೋಗ ಅಥವಾ ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಲಿದ್ದೀರಿ, ಇದರಿಂದ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯೂ ಇದೆ ಎಂದು
6/ 10
ಕನಸಿನಲ್ಲಿ ನೀವು ಹಣದ ವಹಿವಾಟು ನಡೆಸುತ್ತಿರುವುದನ್ನು ನೀವು ನೋಡಿದರೆ, ಮುಂದಿನ ದಿನಗಳಲ್ಲಿ ನೀವು ಹಣವನ್ನು ಪಡೆಯಲಿದ್ದೀರಿ ಎಂದರ್ಥ
7/ 10
ಕನಸಿನಲ್ಲಿ ರೈತನನ್ನು ನೋಡುವುದು ಹಣದ ಲಾಭದ ಸಂಕೇತವಾಗಿದೆ. ಕನಸಿನಲ್ಲಿ ಹಸಿರು ಪರಿಸರ ಕಾಣುವುದು ಕೂಡ ಲಕ್ಷ್ಮಿ ಬರುವ ಸಂಕೇತವಾಗಿದೆ
8/ 10
ಕನಸಿನಲ್ಲಿ ದಾಳಿಂಬೆ ತಿನ್ನುವುದನ್ನು ಕಂಡರೆ ಹಣ ಬರುತ್ತದೆ. ಕನಸಿನಲ್ಲಿ ವಾಲ್ನಟ್ ತಿನ್ನುವುದು ಅಥವಾ ವಿತರಿಸುವುದು ಎರಡೂ ಮಂಗಳಕರವಾಗಿದೆ. ಈ ಕನಸು ಆರ್ಥಿಕ ಸ್ಥಿತಿಯ ಸುಧಾರಣೆಯ ಸಂಕೇತವಾಗಿದೆ.
9/ 10
ಕನಸಿನಲ್ಲಿ ಮೊಸರು ಅಥವಾ ವೀಳ್ಯದೆಲೆ ತಿನ್ನುವುದನ್ನು ನೋಡುವುದು ಭವಿಷ್ಯದಲ್ಲಿ ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಸೂಚಿಸುತ್ತದೆ. ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ನೋಡುವುದು ಸಹ ಮಂಗಳಕರವಾಗಿದೆ.
10/ 10
ಕನಸಿನಲ್ಲಿ ಅರಮನೆ ಅಥವಾ ದೊಡ್ಡ ಮನೆಯನ್ನು ನೋಡುವುದು ಒಳ್ಳೆಯ ಸಂಕೇತ. ಈ ಕನಸು ಬಂದ ಮೇಲೆ ಹಣ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ಸಮಯದಲ್ಲಿ ಆಸ್ತಿಯೂ ಹೆಚ್ಚಾಗುತ್ತದೆ. ((ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)