ಮೇಷ ರಾಶಿ: ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡಿದ್ದರಿಂದ, ಈ ರಾಶಿಯವರ ಒಳ್ಳೆಯ ಸಮಯ ಆರಂಭವಾಗಿದೆ ಎನ್ನಬಹುದು. ಹಾಗಾಗಿ ಇವರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ಹಣಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆ ಆಗುವುದಿಲ್ಲ. ಈ ಸಮಯದಲ್ಲಿ ನಿಮಗೆ ಅದೃಷ್ಟ ಹೆಚ್ಚಾಗುತ್ತದೆ. ಆದರೆ ಮುಖ್ಯವಾಗಿ ನಿಮ್ಮ ಕೋಪ ಮತ್ತು ಅಹಂಕಾರವನ್ನು ನಿಯಂತ್ರಣದಲ್ಲಿ ಇದ್ದರೆ ಸಣ್ಣ ಸಮಸ್ಯೆ ಕೂಡ ಬರುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯ ಒಂಬತ್ತನೇ ಮನೆಯಲ್ಲಿ ಸೂರ್ಯ ಉತ್ತಂಗಕ್ಕೆ ಏರಿದ್ದು, ಈ ಸಮಯದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಅಲ್ಲದೇ, ನಿಮಗೆ ತಂದೆಯ ಬೆಂಬಲ ದೊರೆಯುತ್ತದೆ. ಈ ಸಮಯದಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿಗಾಗಿ ನೀವು ದೂರದ ಪ್ರಯಾಣ ಮಾಡಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಬಳಿ ಕೈತುಂಬ ಹಣ ಇರುತ್ತದೆ