Sun Transit 2023: ಧನುರ್ಮಾಸದಲ್ಲೂ ಈ ರಾಶಿಗೆ ಲಾಭವಂತೆ, ನಿಮ್ಮಷ್ಟು ಲಕ್ಕಿ ಬೇರೆ ಯಾರೂ ಇಲ್ಲ ಅಂತಿದೆ ಜ್ಯೋತಿಷ್ಯ ಶಾಸ್ತ್ರ
Sun Transit 2023: ಧನುರ್ಮಾಸ ದಿನಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಧನುರ್ಮಾಸ ಜನವರಿ 14, 2023 ರಂದು ಮುಗಿಯುತ್ತದೆ. ಈ ಸಮಯದಲ್ಲಿ ಕೆಲ ರಾಶಿಗೆ ಹೆಚ್ಚಿನ ಪ್ರಯೋಜನವಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳಿಗೆ ತಿಂಗಳು, ಸಮಯ ಮತ್ತು ತಿಥಿಗಳಿಗೆ ಹೆಚ್ಚಿನ ಗಮನವಿರುತ್ತದೆ. 16 ಡಿಸೆಂಬರ್ 2022 ರಿಂದ ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧನುರ್ಮಾಸ ಪ್ರಾರಂಭವಾಗಿದೆ.
2/ 7
ಧಾರ್ಮಿಕ ನಂಬಿಕೆಗಳ ಪ್ರಕಾರಈ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಜನವರಿ 14, 2023 ರಿಂದ ಒಳ್ಳೆಯ ಸಮಯ ಆರಂಭವಾಗುತ್ತದೆ. ಈ ಸಮಯದಲ್ಲಿ ಅಂದರೆ ಈ ಮಾಸದ ಕೊನೆಯ ದಿನವು ಕೆಲವು ರಾಶಿಗಳಿಗೆ ಲಾಭದಾಯಕವಂತೆ.
3/ 7
ಮೇಷ: ಮೇಷ ರಾಶಿಯವರಿಗೆ ಈ ಮಾಸದ ಕೊನೆಯ 8 ದಿನಗಳು ಬಹಳ ಪ್ರಯೋಜನಕಾರಿಯಂತೆ. ವೃತ್ತಿಯ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಇದ್ದೇ ಇರುತ್ತದೆ.
4/ 7
ಮಿಥುನ: ಮಿಥುನ ರಾಶಿಯವರಿಗೆ ಈ ಮಾಸದ ಕೊನೆಯ ದಿನಗಳು ಲಾಭದಾಯಕವಾಗಿರಲಿದೆ. ಈ ಸಮಯದಲ್ಲಿ ನೀವು ಮಾಡುವ ಎಲ್ಲಾ ಕೆಲಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಒಟ್ಟಾರೆಯಾಗಿ, ಈ ಸಮಯದಲ್ಲಿ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗುತ್ತದೆ.
5/ 7
ಧನು ರಾಶಿ: ಮಾಸದ ಕೊನೆಯ ಅವಧಿಯಲ್ಲಿ, ಧನು ರಾಶಿಯವರ ಅನೇಕ ಕೆಲಸಗಳು ಪೂರ್ಣಗೊಳ್ಳುತ್ತವೆ. ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಈ ಸಮಯದಲ್ಲಿ ಆತುರದ ನಿರ್ಧಾರಗಳು ಅಪಾಯಕ್ಕೆ ಕಾರಣವಾಗುತ್ತದೆ. ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು
6/ 7
ಮೀನ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಾಸ ಮೀನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಕುಟುಂಬ, ಆಫೀಸ್ ಹೀಗೆ ಎಲ್ಲಾ ಕಡೆ ಶುಭ ಸುದ್ದಿ ಕೇಳುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)