White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

White Shiva: ಭಾರತದಲ್ಲಿ ನಿಮಗೆ ಮೂಲೆ ಮೂಲೆಯಲ್ಲಿ ದೇವಸ್ಥಾನಗಳು ಕಾಣಿಸುತ್ತವೆ. ಒಂದೊಂದು ದೇವಸ್ಥಾನವೂ ಒಂದೊಂದು ವಿಶೇಷತೆ ಹೊಂದಿರುತ್ತವೆ. ಆದರೆ ಇಲ್ಲೊಂದು ಶಿವಲಿಂಗವಿದ್ದು, ಇದಕ್ಕೆ ದೇವಸ್ಥಾನದಲ್ಲಿ ಪೂಜೆ ಮಾಡಬಾರದು. ಅರೇ ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ.

First published:

  • 17

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಈ ಶಿವನನ್ನು ನೀವು ಯಾವುದೇ ದೇವಸ್ಥಾನ ಅಥವಾ ಮನೆಯಲ್ಲಿ ಪೂಜಿಸುವಂತಿಲ್ಲ. ಹೌದು, ಸ್ವತಃ ಅರ್ಚಕರೇ ಪ್ರಯತ್ನ ಮಾಡಿದರೂ ಸಹ ಈ ಲಿಂಗವನ್ನು ದೇವಸ್ಥಾನದಲ್ಲಿ ದೇವರನ್ನು ಇಡಲಾಗಲಿಲ್ಲ. ಇದು ನಿಜಕ್ಕೂ ಬಹಳ ನಿಗೂಢ.

    MORE
    GALLERIES

  • 27

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಇದು ನಿಗೂಢ ಮಾತ್ರವಲ್ಲ ವಿಶೇಷ ಕೂಡ. ಈ ಶಿವಲಿಂಗ ಬಿಳಿ ಬಣ್ಣದಲ್ಲಿದ್ದು, ಈ ಬಿಳಿಯ ಶಿವಲಿಂಗವು ಸ್ನಾನ ಮಾಡುವಾಗ ಕೊಳದ ನೀರಿನಲ್ಲಿ ಇಬ್ಬರು ಮಕ್ಕಳ ಕೈಗೆ ಸಿಕ್ಕಿತ್ತು. ಚೈತ್ರ ಮಾಸದಲ್ಲಿ ಉದ್ಭವವಾದ ಈ ಬಿಳಿಯ ಶಿವನನ್ನು ನೋಡಲು ಈಗ ಜನಸಾಗರವೇ ಸೇರುತ್ತಿದೆ.

    MORE
    GALLERIES

  • 37

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಪಶ್ಚಿಮ ಬಂಗಾಳದ ಗೋಬರ್ ದಂಗಾ ಪ್ರದೇಶದಲ್ಲಿ ಈ ಶಿವಲಿಂಗ ಪತ್ತೆಯಾಗಿದ್ದು, ಕಪ್ಪು ಶಿವಲಿಂಗವು ಸಾಮಾನ್ಯವಾಗಿ ಕಾಣುತ್ತದೆ ಆದರೆ ಬಿಳಿ ಶಿವಲಿಂಗವು ಎಲ್ಲಿಯೂ ಕಾಣಿಸುವುದಿಲ್ಲ. ಹಾಗಾಗಿ ಇದು ನಿಜಕ್ಕೂ ಅಪರೂಪ ಎನ್ನಲಾಗುತ್ತಿದೆ.

    MORE
    GALLERIES

  • 47

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಈ ಲಿಂಗದ ವಿಶೇಷತೆ ಎಂದರೆ ಇದನ್ನು ಆ ಪ್ರದೇಶದಲ್ಲಿ ಯಾರೊಬ್ಬರ ಮನೆ ಅಥವಾ ದೇವಸ್ಥಾನದಲ್ಲಿ ಇಡುವಂತಿಲ್ಲ. ಸರೋವರದ ಮುಂಭಾಗದಲ್ಲಿ ಮಾತ್ರ ಬಿಳಿ ಶಿವನನ್ನ ಪೂಜಿಸಬೇಕು. ಬಿಳಿ ಶಿವನಿಗೆ ಶಾಶ್ವತ ಆಶ್ರಯ ನೀಡಲು ಸ್ಥಳೀಯ ನಿವಾಸಿಗಳು ಈಗ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ.

    MORE
    GALLERIES

  • 57

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಸ್ಥಳೀಯ ಮೂಲಗಳ ಪ್ರಕಾರ, ಗೋಬರ್ದಂಗದ ಕಂಕಣ ಕೊಳದಲ್ಲಿ ಇಬ್ಬರು ಮಕ್ಕಳು ಸ್ನಾನ ಮಾಡುತ್ತಿದ್ದಾಗ ಈ ಶಿವಲಿಂಗ ಕಾಣಿಸಿಕೊಂಡಿದ್ದು, ಸ್ಥಳೀಯ ಅರ್ಚಕರು ಆರಂಭದಲ್ಲಿ ಅದನ್ನು ಪೂಜೆಗ ಮಾಡಲು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಕೇವಲ 2 ದಿನದಲ್ಲಿ ಮರಳಿ ತಂದಿದ್ದಾರೆ.

    MORE
    GALLERIES

  • 67

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ತಿಳಿಸದಿದ್ದರೂ ಈ ಶಿವನ ಮೂರ್ತಿಯನ್ನು ಪೂಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯ ಆಲದ ಮರದ ಕೆಳಗೆ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಸ್ಥಳೀಯ ನಿವಾಸಿ ನಾರಾಯಣ ಸಾಧು ಮಾತನಾಡಿ, ಏಳು ಜನ ಮನೆಗೆ ಕೊಂಡೊಯ್ದರೂ ಶಿವನನ್ನು ಇಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

    MORE
    GALLERIES

  • 77

    White Shiva: ಕೊಳದ ಬಳಿ ಪತ್ತೆಯಾಯ್ತು ಬಿಳಿ ಶಿವಲಿಂಗ, ಇದಕ್ಕೆ ದೇವಸ್ಥಾನ ಬೇಡ್ವಂತೆ

    ಅವರ ಪ್ರಕಾರ ಶಿವನು ಈ ಕೊಳವನ್ನು ಹೊರತುಪಡಿಸಿ ಎಲ್ಲಿಯೂ ಉಳಿಯುವುದಿಲ್ಲ. ಹಾಗಾಗಿ ಇಲ್ಲಿಯೇ ಈಗ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಸ್ಥಳೀಯ ನಿವಾಸಿಗಳು ಸೇರಿದಂತೆ ಅನೇಕ ಭಕ್ತರು ಈ ಬಿಳಿ ಶಿವನ ದರ್ಶನ ಪಡೆಯಲು ಬರುತ್ತಿದ್ದಾರೆ.

    MORE
    GALLERIES