Negative Energy : ಮನೆಯಲ್ಲಿ ಜೇಡ ಬಲೆ ಕಟ್ಟಿದ್ಯಾ; ಹಾಗಾದ್ರೆ ಈ ಸಮಸ್ಯೆ ಕಾಡದೇ ಇರಲಾರದು
ಧಾರ್ಮಿಕ ನಂಬಿಕೆಗಳ (Religious Believes) ಪ್ರಕಾರ, ಮನೆಯಲ್ಲಿರು ಜೇಡರ ಬಲೆಗಳನ್ನು (Spider Web) ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಜೇಡರ ಬಲೆ ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇಡರ ಬಲೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುವುದರ ಜೊತೆಗೆ ರೋಗಗಳಿಗೆ ಆಹ್ವಾನ ನೀಡುತ್ತದೆ
ಮನೆಯ ಸದಸ್ಯರಲ್ಲಿ ಸೋಮಾರಿತನ, ಕಿರಿಕಿರಿ ಅಥವಾ ನಕಾರಾತ್ಮಕತೆ ಕಂಡುಬಂದರೆ, ಅದು ಮನೆಯಲ್ಲಿನ ಜೇಡರ ಬಲೆಯಿಂದಾಗಿರಬಹುದು.
2/ 5
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇಡರ ಬಲೆ ಇರುವ ಮನೆಯ ಸದಸ್ಯರ ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಒತ್ತಡಕ್ಕೆ ಕೂಡ ಕಾರಣವಾಗಿದೆ. ಇದು ಕುಟುಂಬದ ಸದಸ್ಯರನ್ನು ಮಾನಸಿಕ ಅಸ್ವಸ್ಥರನ್ನಾಗಿಯೂ ಮಾಡಬಹುದು.
3/ 5
ಮನೆಯಲ್ಲಿ ಜೇಡರ ಬಲೆಗಳಿದ್ದರೆ ಬಡತನ ಹೆಚ್ಚುತ್ತದೆ. ಜೊತೆಗೆ ಹಣದ ಬರುವಿಕೆ ನಿಲ್ಲುತ್ತದೆ, ಮನೆ ಮಾತ್ರವಲ್ಲದೆ ಕಚೇರಿ, ಅಂಗಡಿಗಳಿಗೂ ಲಕ್ಷ್ಮಿಯ ಆಶೀರ್ವಾದ ಕಡಿಮೆ ಆಗುತ್ತದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಉದ್ಭವಿಸುತ್ತವೆ.
4/ 5
ಜೇಡರ ಬಲೆಗಳಿರುವ ಮನೆಯ ಮೂಲೆಯಲ್ಲಿ ನಕಾರಾತ್ಮಕ ಶಕ್ತಿ ಸಂಗ್ರಹವಾಗುತ್ತದೆ. ಮನೆಯಲ್ಲಿ ಆಂತರಿಕ ಅಪಶ್ರುತಿ, ರೋಗಗಳು ಮತ್ತು ಇತರ ಸಮಸ್ಯೆಗಳು ಪ್ರಾರಂಭವಾಗುತ್ತವೆ
5/ 5
ಮನೆಗಳಲ್ಲಿ ಜೇಡರ ಬಲೆ ಇರುವುದರಿಂದ ಮನೆಯ ಪರಿಸರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕೆಲಸದಲ್ಲಿ ಏಕಾಗ್ರತೆ ಸಾಧ್ಯವಾಗದೇ ಇರಬಹುದು. ಇದೇ ಕಾರಣಕ್ಕೆ ಮನೆಯ ಮೂಲೆಗಳಲ್ಲಿ ಇರುವ ಜೇಡರ ಬಲೆಯನ್ನು ತೆಗೆಯಬೇಕು ಎಂದು ಹಿರಿಯರು ಹೇಳುತ್ತಾರೆ