Solar Eclipse: ಶನಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಯಾವ ರಾಶಿ ಮೇಲೆ ಯಾವ ಪರಿಣಾಮ?
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಶನಿ ಅಮಾವಾಸ್ಯೆಯ (Shani Amavasya) ದಿನದಂದು ಸಂಭವಿಸುತ್ತದೆ. ಈ ಸೂರ್ಯಗ್ರಹಣವು (Solar Eclipse) ರಾಶಿಚಕ್ರದ (Zodiac Sign) ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸೂರ್ಯಗ್ರಹಣವು ಕೆಲವು ರಾಶಿಚಕ್ರಕ್ಕೆ ಪ್ರಯೋಜನಕಾರಿಯಾಗಿದ್ದರೆ, ಮತ್ತೆ ಕೆಲವು ರಾಶಿಚಕ್ರಗಳಿಗೆ ಸವಾಲು ಆಗಿರಬಹುದು. ಈ ಸೂರ್ಯಗ್ರಹಣ ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಮಾಹಿತಿ ಇಲ್ಲಿದೆ
ಮೇಷ: ಸೂರ್ಯಗ್ರಹಣವು ಮೇಷ ರಾಶಿಯಲ್ಲಿಯೇ ಸಂಭವಿಸಲಿದೆ. ಆದ್ದರಿಂದ ಈ ರಾಶಿಚಕ್ರದ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೃತ್ತಿಯಲ್ಲಿ ವೈಫಲ್ಯ, ಚರ್ಚೆ, ತೊಂದರೆ ಅಥವಾ ಕೆಲವು ಸವಾಲುಗಳು ಇರಬಹುದು.
2/ 12
ವೃಷಭ: ಈ ರಾಶಿಯ ಜನರು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೌಟುಂಬಿಕ ವಿವಾದಗಳಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸುತ್ತಾರೆ.
3/ 12
ಮಿಥುನ: ಸೂರ್ಯಗ್ರಹಣದಿಂದಾಗಿ ಈ ರಾಶಿ ಜನರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ದುಂದುವೆಚ್ಚದಿಂದಾಗಿ ಹಣಕಾಸಿನ ಪರಿಸ್ಥಿತಿಯು ತೊಂದರೆಗೊಳಗಾಗಬಹುದು. ಕೆಲಸದಲ್ಲಿ ಅಡಚಣೆಗಳು ಉಂಟಾಗಬಹುದು.
4/ 12
ಕಟಕ ರಾಶಿ : ಸೂರ್ಯಗ್ರಹಣದ ದುಷ್ಪರಿಣಾಮಗಳಿಂದ ಈ ರಾಶಿಯವರಿಗೆ ಸ್ವಲ್ಪ ದೈಹಿಕ ನೋವು ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
5/ 12
ಸಿಂಹ: ಸಿಂಹ ರಾಶಿಯವರು ವಾಹನವನ್ನು ಎಚ್ಚರಿಕೆಯಿಂದ ಓಡಿಸಬೇಕು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ, ಆರ್ಥಿಕ ನಷ್ಟವೂ ಸಂಭವಿಸಬಹುದು.
6/ 12
ಕನ್ಯಾ: ಸೂರ್ಯಗ್ರಹಣವು ನಿಮ್ಮ ಆರ್ಥಿಕ ಭಾಗದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಹಠಾತ್ ವೆಚ್ಚಗಳು ಉಳಿತಾಯವನ್ನು ಹಾಳು ಮಾಡಬಹುದು. ಅನಗತ್ಯ ವಾದಗಳನ್ನು ತಪ್ಪಿಸಿ
7/ 12
ತುಲಾ: ಸೂರ್ಯಗ್ರಹಣವು ಈ ರಾಶಿಯವರಿಗೆ ಉತ್ತಮ ಫಲ ನೀಡಬಹುದು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿರೋಧಿಗಳು ಸೋಲುತ್ತಾರೆ.‘
8/ 12
ವೃಶ್ಚಿಕ: ಈ ರಾಶಿಯವರಿಗೆ ಉದ್ಯೋಗ ಬದಲಾವಣೆಯಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಒತ್ತಡವನ್ನು ತಪ್ಪಿಸಲು ಧ್ಯಾನ ಅಥವಾ ಯೋಗವನ್ನು ಮಾಡಿ.
9/ 12
ಧನು ರಾಶಿ : ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಯಶಸ್ಸಿಗೆ ನೀವು ಹೆಚ್ಚು ಶ್ರಮಿಸಬೇಕು. ವೈಫಲ್ಯದಿಂದ ನೀವು ನಿರುತ್ಸಾಹಗೊಳ್ಳಬಹುದು, ಆದರೆ ಬಿಟ್ಟುಕೊಡಬೇಡಿ. ಒತ್ತಡವನ್ನು ತಪ್ಪಿಸಿ.
10/ 12
ಮಕರ: ಸೂರ್ಯಗ್ರಹಣದ ದುಷ್ಪರಿಣಾಮಗಳಿಂದ ಆರ್ಥಿಕತೆಯು ದುರ್ಬಲವಾಗಿರುತ್ತದೆ. ಅಪಘಾತವಾಗುವ ಸಂಭವವಿದ್ದು, ಎಚ್ಚರಿಕೆಯಿಂದ ಚಾಲನೆ ಮಾಡಿ. ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದಗಳಿರಬಹುದು. ತಾಳ್ಮೆಯಿಂದ ಕೆಲಸ ಮಾಡಿ.
11/ 12
ಕುಂಭ: ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಈ ರಾಶಿಯ ಜನರು ನಷ್ಟ ಅನುಭವಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿನ ನಷ್ಟದಿಂದ ಹೊರಬರಲು ಹೊಸ ಯೋಜನೆ ರೂಪಿಸಬೇಕಾಗುತ್ತದೆ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
12/ 12
ಮೀನ: ಈ ರಾಶಿಯವರಿಗೆ ಹೊಸ ಕೆಲಸ ಸಿಗಬಹುದು. ಸ್ಥಗಿತಗೊಂಡ ಕೆಲಸ ಪೂರ್ಣಗೊಂಡರೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಎದುರಾಳಿಗಳ ಮೇಲೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.