ಕನ್ಯಾರಾಶಿ: ಶುಕ್ರ ರಾಶಿ ಬದಲಾವಣೆ ಮಾಡುವುದರಿಂದ ಈ ರಾಶಿಯವರಿಗೆ ಒಳ್ಳೆಯದು. ಏಕೆಂದರೆ ಶುಕ್ರನು ಈ ರಾಶಿಯಿಂದ ಏಳನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಮನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಈ ರಾಶಿಯವರ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಅಲ್ಲದೆ, ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.