Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

Shukra Effect: ಹೋಳಿ ನಂತರ ಮೇಷ ರಾಶಿಯಲ್ಲಿ ಶುಕ್ರ ಮತ್ತು ರಾಹು ಸಂಯೋಗವಾಗುತ್ತದೆ. ಈ ಸಂಯೋಗವು ಕೆಲವು ರಾಶಿಗೆ ಒಳ್ಳೆಯದಲ್ಲ. ಅವರೆಲ್ಲರೂ ಬಹಳ ಜಾಗರೂಕರಾಗಿರಬೇಕು. ಯಾವ ರಾಶಿಗೆ ಇದರಿಂದ ಸಮಸ್ಯೆ ಎಂಬುದು ಇಲ್ಲಿದೆ

First published:

  • 18

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಜ್ಯೋತಿಷ್ಯದಲ್ಲಿ ಪ್ರತಿಗ್ರಹವು ಸಹ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ಚಲನೆ ಹಾಗೂ ಗ್ರಹಗಳ ಸಂಯೋಗ ಬಹಳ ಮುಖ್ಯವಾದ ಬೆಳವಣಿಗೆಗಳು. ಇವು ನೇರವಾಗಿ ರಾಶಿಯ ಮೇಲೆ ಪರಿಣಾಮ ಬೀರುತ್ತವೆ. ಕೆಲವರಿಗೆ ಅದೃಷ್ಟವಿದ್ದರೆ ಕೆಲವರಿಗೆ ಸಮಸ್ಯೆಗಳು ಎದುರಾಗುತ್ತವೆ.

    MORE
    GALLERIES

  • 28

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಮಾರ್ಚ್ 8 ರಂದು ಹೋಳಿ ಹಬ್ಬ. ಅದರ ಸರಿಯಾಗಿ ನಾಲ್ಕು ದಿನಗಳ ನಂತರ ಮಾರ್ಚ್ 12 ರಂದು ಮೇಷ ರಾಶಿಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗುತ್ತದೆ. ಶುಕ್ರ ಮತ್ತು ರಾಹುವಿನ ಸಂಯೋಜನೆಯು ಈ ಮೂರು ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಈ ಮೂರು ರಾಶಿಯ ಜನರು ಜಾಗರೂಕರಾಗಿರಬೇಕು.

    MORE
    GALLERIES

  • 38

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಮೇಷ: ಮೇಷ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ದಾಂಪತ್ಯದಲ್ಲಿ ಏರಿಳಿತಗಳಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡುವುದು ಬಹಳ ಅವಶ್ಯಕ. ಅಲ್ಲದೇ, ಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಸಂಗಾತಿಯ ಆರೋಗ್ಯ ಹದಗೆಡಬಹುದು. ಯಾರಾದರೂ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಎಚ್ಚರಿಕೆಯಿಂದಿರಿ.

    MORE
    GALLERIES

  • 48

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಕನ್ಯಾ: ಈ ಸಮಯದಲ್ಲಿ ಹಿರಿಯರ ಆರೋಗ್ಯ ಕ್ಷೀಣಿಸಬಹುದು. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೆಚ್ಚು ಜಾಗರೂಕರಾಗಿರಿ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಲು ಹೋಗಬೇಡಿ. ಇಲ್ಲದಿದ್ದರೆ ನಷ್ಟವಾಗುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಸಹ ಕಾಳಜಿ ಅಗತ್ಯ.

    MORE
    GALLERIES

  • 58

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಮುಖ್ಯವಾಗಿ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಿ. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ. ಸಂಘರ್ಷಗಳನ್ನು ತಪ್ಪಿಸಿ. ವಾದ ಮಾಡಲು ಹೋದರೆ ನಿಮಗೆ ನಷ್ಟವಾಗುತ್ತದೆ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ. ವ್ಯಾಪಾರದಲ್ಲಿ ಸ್ವಲ್ಪ ನಷ್ಟದ ಅಪಾಯವಿದೆ

    MORE
    GALLERIES

  • 68

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಮೀನ: ನಿಮಗೆ ಬರಬೇಕಾದ ಹಣ ನಿಲ್ಲುತ್ತದೆ. ಕಷ್ಟದ ಸಮಯದಲ್ಲಿ ಜನ ಕೈ ಕೊಡುತ್ತಾರೆ. ಹಾಗಾಗಿ ಯಾರಿಗೂ ಈ ಸಮಯದಲ್ಲಿ ಸಾಲ ಕೊಡಬೇಡಿ. ವೈವಾಹಿಕ ಜೀವನದಲ್ಲಿ ಘರ್ಷಣೆಗಳು ಉಂಟಾಗಬಹುದು. ನೀವು ಈ ಸಮಯವನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯವಿದೆ.

    MORE
    GALLERIES

  • 78

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    ಈ ಸಂಯೋಗದಿಮದ ಮನೆಯಲ್ಲಿ ಉದ್ವಿಗ್ನತೆ ಇರುತ್ತದೆ. ಯಾರಿಗೂ ಶಾಂತಿ ಇರುವುದಿಲ್ಲ. ಕೆಲಸ ಮಾಡುವವರು ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಒತ್ತಡದ ಸಾಧ್ಯತೆಗಳಿವೆ. ಹಾಗಾಗಿ ಧ್ಯಾನ ಮಾಡುವುದು ನಿಮಗೆ ಸಹಾಯ ಮಾಡುತ್ತದೆ.

    MORE
    GALLERIES

  • 88

    Shukra-Rahu Yuti: ಶುಕ್ರ-ರಾಹು ಸಂಯೋಗದಿಂದ ಬರ್ಬಾದ್​ ಆಗ್ತಾರೆ ಈ ರಾಶಿಯವರು, ತುಸು ಎಚ್ಚರ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES