Shukra Gochar Parivartan 2023: ಶುಕ್ರ ಗ್ರಹವನ್ನು ಐಷಾರಾಮಿ ಜೀವನ ಮತ್ತು ಹಣದ ಸಂಕೇತ ಎನ್ನಲಾಗುತ್ತದೆ. ಈ ಶುಕ್ರ ಜನವರಿ 22 ರಂದು ಸ್ಥಾನ ಬದಲಾವಣೆ ಮಾಡಲಿದ್ದು, ಇದರಿಂದ ಯಾವ ರಾಶಿಗೆಲ್ಲಾ ಲಾಭವಿದೆ ಎಂಬುದು ಇಲ್ಲಿದೆ.
ಶುಕ್ರದೆಸೆ ಇದ್ದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎನ್ನಲಾಗುತ್ತದೆ. ಸಂಪತ್ತು ಹಾಗೂ ನೆಮ್ಮದಿಯನ್ನು ನೀಡುವ ಗ್ರಹ ಈ ಶುಕ್ರ. ಜನವರಿ 22ರಂದು ಸ್ಥಾನ ಬದಲಾವಣೆ ಮಾಡುತ್ತಿರುವ ಕಾರಣದಿಂದ ಕೆಲ ರಾಶಿಗಳಿಗೆ ಇದರಿಂದ ಲಾಭವಾಗಲಿದೆ.
2/ 8
ಶುಕ್ರ ಭಾನುವಾರ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಆದರೆ ಈಗಾಗಲೇ ಆ ಮನೆಯಲ್ಲಿ ಶನಿ ಇರುವ ಕಾರಣ ಈ ಎರಡು ಗ್ರಹಗಳ ಮೈತ್ರಿ ಆಗಲಿದೆ. ಜನವರಿ 22 ರಿಂದ ಫೆಬ್ರವರಿ 15 ರವರೆಗೆ ಶುಕ್ರನು ಕುಂಭ ರಾಶಿಯಲ್ಲಿ ಇರಲಿದ್ದು, ಫೆಬ್ರವರಿ 15 ರಂದು ರಾತ್ರಿ 8.12 ಕ್ಕೆ ಮೀನ ರಾಶಿಗೆ ಸಾಗಲಿದ್ದಾನೆ.
3/ 8
ಮಕರ: ಶುಕ್ರ ಸಂಚಾರದಿಂದ ಮಕರ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ವೈಯಕ್ತಿಕ ಜೀವನವೂ ಉತ್ತಮವಾಗಿರುತ್ತದೆ. ನೀವು ದೊಡ್ಡ ಪ್ಯಾಕೇಜ್ ಇರುವ ಹೊಸ ಕೆಲಸದ ಆಫರ್ ಸಹ ಪಡೆಯುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಆದಾಯವು ಹೆಚ್ಚಾಗುತ್ತದೆ, ಇದರಿಂದಾಗಿ ಹಣದ ಸಮಸ್ಯೆ ಇರುವುದಿಲ್ಲ.
4/ 8
ಮೇಷ: ಕುಂಭ ರಾಶಿಗೆ ಶುಕ್ರನ ಪ್ರವೇಶದಿಂದಾಗಿ ಮೇಷ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಈ ರಾಶಿಯವರು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಈ ಸಮಯದಲ್ಲಿ ಯಶಸ್ಸು ಖಂಡಿತ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೇ ಆರ್ಥಿಕವಾಗಿ ಸಹ ಲಾಭ ಆಗಲಿದೆ.
5/ 8
ಮಿಥುನ: ಪ್ರೀತಿ ಮತ್ತು ಐಷಾರಾಮಿ ಜೀವನದ ಅಧಿಪತಿ ಶುಕ್ರನ ಸ್ಥಾನ ಬದಲಾವಣೆಯು ಮಿಥುನ ರಾಶಿಯವರಿಗೆ ಬಡ್ತಿ ನೀಡುತ್ತದೆ. ಇದಲ್ಲದೆ, ಈ ಸಮಯದಲ್ಲಿ ನೀವು ಅದೃಷ್ಟಶಾಲಿ ಎಂಬುದು ನಿಮಗೆ ತಿಳಿಯುತ್ತದೆ. ನಿಮ್ಮ ವಿದೇಶದಲ್ಲಿ ಓದುವ ಕನಸು ಸಹ ನನಸಾಗುವ ಸಮಯ ಇದು.
6/ 8
ಸಿಂಹ ರಾಶಿ : ಈ ಸ್ಥಾನ ಬದಲಾವಣೆಯಿಂದ ನಿಮ್ಮ ಪ್ರೇಮ ಜೀವನ ಮತ್ತಷ್ಟು ಸುಧಾರಿಸುತ್ತದೆ. ಸಂಗಾತಿಯ ಜೊತೆ ಬಾಂಧವ್ಯ ಸಹ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಸಹ ಕೂಡಿಬರುವ ಸಮಯ ಇದು. ವೃತ್ತಿ ಜೀವನದಲ್ಲಿ ಸಹ ಬೆಳವಣಿಗೆಯಾಗಲಿದೆ.
7/ 8
ಕುಂಭ: ಶುಕ್ರ ಕುಂಭ ರಾಶಿಯವರಿಗೆ ಉತ್ತಮ ಪ್ರಭಾವವನ್ನು ಬೀರುತ್ತದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ನೀವು ಕೈಗೊಳ್ಳುವ ಪ್ರತಿಯೊಂದು ಉದ್ಯಮದಲ್ಲಿ ಯಶಸ್ಸು ಮತ್ತು ಲಾಭ ಸಿಗುವುದು ಗ್ಯಾರಂಟಿ. ಆರ್ಥಿಕವಾಗಿ ಸಹ ಲಾಭ ಸಿಗಲಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)