Shukra Gochara 2023: ಶುಕ್ರ ಗ್ರಹ ಸಂಚಾರದಿಂದ ಜನವರಿ 22ರ ನಂತರ ಈ 3 ರಾಶಿಯವರಿಗೆ ಕಷ್ಟ ಕಾಲ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ತುಂಬಾನೇ ಮಹತ್ವವಿದೆ. ಶುಕ್ರ ಗ್ರಹವನ್ನು ಸಂತೋಷ ಮತ್ತು ಐಷಾರಾಮಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಜನವರಿ 22 ರಂದು ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುತ್ತದೆ.
ಶುಕ್ರ ಗ್ರಹದ ಈ ರಾಶಿ ಬದಲಾವಣೆಯಿಂದ ಅನೇಕ ಪರಿಣಾಮಗಳು ಕೆಲ ರಾಶಿಗಳ ಮೇಲೆ ಬೀಳುತ್ತೆ. ಆ ರಾಶಿಗಳ ಜನರು ಅನಾನುಕೂಲಗಳನ್ನು ಎದುರಿಸುವ ಸಾಧ್ಯತೆಯಿದೆ. ವಿಶೇಷವಾಗಿ 3 ರಾಶಿಗೆ ಸೇರಿದವರು ಜಾಗರೂಕರಾಗಿರಬೇಕು.
2/ 7
ಈ 3 ರಾಶಿಗಳಿಗೆ ಸೇರಿದವರಿಗೆ ಹಣದ ಸಮಸ್ಯೆಗಳು ಉಂಟಾಗುತ್ತದೆ. ಮುಖ್ಯವಾಗಿ ಉದ್ಯೋಗದಲ್ಲಿರುವವರು ಮಹಿಳಾ ಸಹೋದ್ಯೋಗಿಗಳ ಜೊತೆ ವಾಗ್ವಾದಕ್ಕೆ ಬೀಳಬಹುದು. ಇವುಗಳನ್ನು ಆದಷ್ಟು ತಪ್ಪಿಸಬೇಕು.
3/ 7
1) ಕರ್ಕಾಟಕ ರಾಶಿ: ಈ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ.
4/ 7
ಕಟಕ ರಾಶಿಯ ಮಹಿಳೆಯರಲ್ಲಿ ಮಾಸಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ವ್ಯಾಪಾರ ಮಾಡುವವರಿಗೆ ಹಣದ ಸಮಸ್ಯೆ ಎದುರಾಗಬಹುದು.
5/ 7
2) ಕನ್ಯಾ ರಾಶಿ: ಈ ರಾಶಿಯವರಿಗೆ ಶುಕ್ರನು ಈಗ ಆರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ರೋಗ, ಸಾಲ, ಶತ್ರುಗಳಿಂದ ಬೆದರಿಕೆ ಬರುವ ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಕೆಲಸದ ವಿಚಾರವಾಗಿ ಮಹಿಳಾ ಸಹೋದ್ಯೋಗಿಯೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ.
6/ 7
3) ವೃಶ್ಚಿಕ ರಾಶಿ: ಇವರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಈ ಸಮಯದಲ್ಲಿ, ನಿಮ್ಮ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ. ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸಿ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)