Shani Yogas: ಶನಿಯ ಈ ಯೋಗಗಳಿದ್ರೆ ಸಾಕು ನಿಮ್ಮ ಬಾಳು ಬಂಗಾರವಾಗುತ್ತೆ
Shani Yogas: ಶನಿ ಎಂದರೆ ಬಹಳಷ್ಟು ಜನರಿಗೆ ಭಯ ಶುರುವಾಗುತ್ತದೆ. ಶನಿಯ ಕಾಟ ಆರಂಭವಾಯಿತು ಎಂದರೆ ಜೀವನದಲ್ಲಿ ಜಿಗುಪ್ಸೆ ಬರುವಷ್ಟು ಸಮಸ್ಯೆಗಳು ಬರುತ್ತದೆ. ಆದರೆ ಈ ಶನಿಗೆ ಸಂಬಂಧಿಸಿದ ಯೋಗಗಳಿದ್ದರೆ ನಿಮಗೆ ಲಾಭವಂತೆ. ಆ ಯೋಗಗಳು ಯಾವುವು ಎಂಬುದು ಇಲ್ಲಿದೆ.
ಶನಿಯಿಂದ ಜೀವನದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಅದರಲ್ಲೂ ಸಾಡೇಸಾತಿ ಇದ್ದರಂತೂ ಕೇಳುವುದೇ ಬೇಡ. ನಾವು ಬದುಕಿರುವುದೇ ಬೇಡ ಅನಿಸುತ್ತದೆ.
2/ 7
ಶನಿಕಾಟ ಆರಂಭವಾಯಿತು ಎಂದರೆ ಜೀವನದಲ್ಲಿ ಸಮಸ್ಯೆಗಳ ಮಳೆ ಸುರಿಯುತ್ತದೆ. ಯಾವುದೇ ಕೆಲಸಗಳು ನಿಮ್ಮ ಕೈ ಹಿಡಿಯುವುದಿಲ್ಲ, ಕುಟುಂಬಸ್ಥರು ದೂರವಾಗುತ್ತಾರೆ. ಒಟ್ಟಾರೆಯಾಗಿ ಒಂದೆಲ್ಲಾ ಒಂದು ರೀತಿಯ ಕಷ್ಟಗಳು ಬರುತ್ತವೆ. ಆದರೆ ಶನಿಯ ಯೋಗಗಳು ಮಾತ್ರ ನಿಮ್ಮ ಜೀವನದಲ್ಲಿ ಒಳ್ಳೆಯದನ್ನು ಮಾಡುತ್ತವೆ. ಆ ಯೋಗಗಳು ಯಾವುವು ಎಂಬುದು ಇಲ್ಲಿದೆ.
3/ 7
ಶಶ ಯೋಗ: ಪಂಚ ಮಹಾಪುರುಷ ಯೋಗಗಳಲ್ಲಿ ಈ ಶಶ ಯೋಗ ಸಹ ಒಂದು. ಲಗ್ನ ಕೇಂದ್ರದಲ್ಲಿ ಶನಿಯ ಸಂಚಾರವಾದಾಗ ಈ ಯೋಗ ರೂಪುಗೊಳ್ಳುತ್ತದೆ. ಇದರಿಂದ ಜೀವನದಲ್ಲಿ ಬಹಳ ಒಳ್ಳೆಯದಾಗುತ್ತದೆ. ಅಧಿಕಾರ, ಕಾನೂನು ವಿವಾದದಲ್ಲಿ ಜಯ ಹೀಗೆ ಎಲ್ಲವೂ ನಿಮಗೆ ಸಿಗುತ್ತದೆ. ಅಲ್ಲದೇ, ನಿಮ್ಮನ್ನ ಸೋಲಿಸುವವರು ಯಾರೂ ಇರುವುದಿಲ್ಲ.
4/ 7
ಜಾತಕದಲ್ಲಿ ಶಶ ಯೋಗ ಇದ್ದರೆ ಉನ್ನತ ಅಧಿಕಾರ, ಸಮಾಜದಲ್ಲಿ ಗೌರವ ಸಿಗುತ್ತದೆ. ಅಲ್ಲದೇ ಆರ್ಥಿಕ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಮಾತ್ರವಲ್ಲದೇ ಶ್ರೀಮಂತಿಕೆ ನಿಮ್ಮನ್ನ ಹುಡುಕಿ ಬರುತ್ತದೆ. ಈ ಯೋಗ ಇದ್ದರೆ ಶನಿಯಿಂದ ಸಹ ಯಾವುದೇ ಸಮಸ್ಯೆ ಬರುವುದಿಲ್ಲ.
5/ 7
ಸಪ್ತಮಸ್ಥ ಶನಿ: ಜಾತಕದಲ್ಲಿ ಶನಿಯು ಏಳನೇ ಮನೆಯಲ್ಲಿ ಇದ್ದರೆ ಸಪ್ತಮಸ್ಥ ಶನಿ ಯೋಗ ರೂಪುಗೊಳ್ಳುತ್ತದೆ. ಈ ರೀತಿ ಯೋಗ ಇದ್ದರೆ ನೀವು ಶ್ರೀಮಂತರಾಗುತ್ತೀರಿ ಎನ್ನಲಾಗುತ್ತದೆ. ಆದರೆ ಈ ಸ್ಥಾನದಲ್ಲಿ ಶನಿ ಇದ್ದರೆ ಮದುವೆ ನಿಧಾನವಾಗಿ ಆಗುತ್ತದೆ. ಹಾಗೆಯೇ ಮದುವೆಯ ನಂತರ ಅದೃಷ್ಟದ ಸುರಿಮಳೆ ಆಗಲಿದೆ.
6/ 7
ಶನಿ ಶುಕ್ರ ಯೋಗ: ಶನಿ ಹಾಗೂ ಶುಕ್ರನ ಸಂಯೋಗ ಈ ಯೋಗಕ್ಕೆ ಕಾರಣ ಎನ್ನಬಹುದು. ಶುಕ್ರ ನಮಗೆ ಸುಖ ಹಾಗೂ ಸಮೃದ್ಧಿ ನೀಡುವ ಗ್ರಹ. ಹಾಗಾಗಿ ಶನಿ ಮತ್ತು ಶುಕ್ರ ಗ್ರಹ ಒಂದಾದರೆ ನಿಮ್ಮ ಜೀವನದ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ನೀವು ಶ್ರೀಮಂತರಾಗುತ್ತೀರಿ. ಅಲ್ಲದೇ, ಜೀವನದಲ್ಲಿ ಹಣದ ಕೊರತೆ ಸಹ ಆಗುವುದಿಲ್ಲ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)