Shani Transit 2023: ಈ ರಾಶಿಯವರಿಗೆ ಶನಿಯ ಕೃಪೆ, ಕನಸುಗಳೆಲ್ಲಾ ನನಸಾಗೋ ಸಮಯ ಇದು
Astrology - Shani Dev: ಜ್ಯೋತಿಷ್ಯದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಕರ್ಮಗಳ ಗ್ರಹ ಎಂದು ಹೇಳಲಾಗುತ್ತದೆ. ಶನಿಯ ದುಷ್ಪರಿಣಾಮಗಳಿಗೆ ಎಲ್ಲರೂ ಹೆದರುತ್ತಾರೆ. ಶನಿಯ ಕಾರಣದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಶನಿಯ ಸ್ಥಾನ ಬದಲಾವಣೆಯಿಂದ ಕೆಲ ರಾಶಿಗೆ ಲಾಭವಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಬುಧವಾರ, ಜನವರಿ 17, 2023 ರಂದು ಶನಿಯು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ರಾಶಿಯು ಶನಿಯ ಮೂಲ ರಾಶಿ ಎಂದು ಜ್ಯೋತಿಷ್ಯ ಶಾಸ್ತ್ರವೂ ಹೇಳುತ್ತದೆ. ಶನಿಯು ಜುಲೈ 2025 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಎರಡೂವರೆ ವರ್ಷಗಳ ಈ ಅವಧಿಯಲ್ಲಿ, ಶನಿಯು ವಿವಿಧ ರಾಶಿಗಳ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರುತ್ತಾನೆ.
2/ 9
ಶನಿಯ ಕಾರಣದಿಂದ ಜೀವನದಲ್ಲಿ ಈ 5 ರಾಶಿಯವರಿಗೆ ಯಶಸ್ಸು ಸಿಗಲಿದೆ. ಶನಿ ರಾಶಿಯ ಬದಲಾವಣೆಯಿಂದಾಗಿ ಮೇಷ, ಮಿಥುನ, ತುಲಾ, ಧನು ಮತ್ತು ಮಕರ ರಾಶಿಯವರ ಉದ್ಯೋಗ, ಹಣಕಾಸು ಮತ್ತು ವೃತ್ತಿಪರ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ.
3/ 9
ಧನು ರಾಶಿ: ಈ ರಾಶಿಯವರಿಗೆ ಸಾಡೇಸಾತಿ ಮುಗಿದಿರುವ ಕಾರಣ ಅನೇಕ ಕಷ್ಟಗಳು ಮತ್ತು ಸಮಸ್ಯೆಗಳಿಂದ ಹೊರಬರುತ್ತಾರೆ. ಅವರ ಜೀವನದಲ್ಲಿ ಬೆಳಕು ಮೂಡಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಈ ಸಮಯದಲ್ಲಿ ಅಧಿಕಾರ ಯೋಗ, ಗೃಹ ಮತ್ತು ವಾಹನ ಯೋಗಗಳು ಸಿಗುತ್ತದೆ.
4/ 9
ಮಕರ: ಉದ್ಯೋಗದ ವಿಚಾರದಲ್ಲಿ ಮಾತ್ರವಲ್ಲದೆ ಆರ್ಥಿಕ ಸ್ಥಿರತೆ ಸಹ ಹೆಚ್ಚಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ಮನಸ್ಸಿನ ಮುಖ್ಯ ಆಸೆಗಳು ಈಡೇರುತ್ತವೆ. ಗೃಹಯೋಗ ಮತ್ತು ವಾಹನ ಯೋಗಗಳಿವೆ. ನೀವು ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.
5/ 9
ತುಲಾ: ಯಾವುದೇ ರೀತಿಯ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ. ವೃತ್ತಿಯಲ್ಲಿ ಹೊಸ ಅವಕಾಶ ಸಹ ಸಿಗಲಿದೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ನಿಮಗೂ ಸಹ ಗೃಹಯೋಗ ಮತ್ತು ವಾಹನ ಯೋಗಗಳಿವೆ. ಸಮಾಜದಲ್ಲಿ ಖ್ಯಾತಿಯನ್ನು ಹೆಚ್ಚಿಸುತ್ತದೆ.
6/ 9
ಮಿಥುನ: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಬಾಕಿ ಉಳಿದಿರುವ ಎಲ್ಲಾ ಕೆಲಸಗಳು, ವ್ಯವಹಾರಗಳು ಮತ್ತು ವಹಿವಾಟುಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ, ರಿಯಲ್ ಎಸ್ಟೇಟ್, ಮದ್ಯ, ರಾಜಕೀಯ, ಸಮಾಜ ಸೇವೆಗಳು, ಐಟಿ, ವೈದ್ಯರಿಗೆ ಈ ಸಮಯದಲ್ಲಿ ಲಾಭ ಹೆಚ್ಚಾಗಲಿದೆ.
7/ 9
ಮೇಷ: ಈ ರಾಶಿಯವರು ಉದ್ಯೋಗದ ವಿಷಯದಲ್ಲಿ ಖಂಡಿತವಾಗಿಯೂ ಅಧಿಕಾರ ಯೋಗವಿದೆ ಎನ್ನಬಹುದು. ಆರ್ಥಿಕ ಬೆಳವಣಿಗೆ ಕಂಡುಬರುತ್ತದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸಮಯ ಇದು. ನಿಮಗೆ ಸಂತಾನ ಯೋಗವಿದೆ.
8/ 9
ವೃಷಭ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಶನಿಯ ಬದಲಾವಣೆಯಿಂದ ಒಳಿತೇ ಆಗಲಿದೆ. ಸಾಲದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆರ್ಥಿಕವಾಗಿ ಸಹ ಲಾಭ ಸಿಗಲಿದೆ. ಮಕ್ಕಳ ಪ್ರಗತಿ, ಅನಾರೋಗ್ಯದಿಂದ ಚೇತರಿಕೆ, ಬಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ನಿಶ್ಚಿತವಾಗಿದೆ.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)