ಕಟಕ: ಶನಿಯ ಸ್ಥಾನವು ನಿಮಗೆ ಸ್ವಲ್ಪ ಹಾನಿಕಾರಕ ಎನ್ನಲಾಗುತ್ತದೆ. ಏಕೆಂದರೆ ಶನಿದೇವನು ನಿಮ್ಮ ಜಾತಕದಲ್ಲಿ ಎಂಟನೇ ಮನೆಯಲ್ಲಿ ನೆಲೆಸಲಿದ್ದಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಅಲ್ಲದೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಈ ಸಮಯದಲ್ಲಿ ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಪ್ರಾರಂಭಿಸಬೇಡಿ, ಇಲ್ಲದಿದ್ದರೆ ನೀವು ಹಣವನ್ನು ಕಳೆದುಕೊಳ್ಳಬಹುದು. ಅಲ್ಲದೆ, ನೀವು ಯಾವುದೋ ವಿಷಯದ ಬಗ್ಗೆ ಒತ್ತಡದಲ್ಲಿರಬಹುದು. ಮತ್ತೊಂದೆಡೆ, ನಿಮ್ಮ ರಾಶಿಯ ಅಧಿಪತಿ ಚಂದ್ರನಾಗಿದ್ದು, ಶನಿ ಗ್ರಹ ಮತ್ತು ಚಂದ್ರನ ನಡುವೆ ದ್ವೇಷದ ಭಾವನೆ ಇದೆ. ಆದ್ದರಿಂದ, ಈ ಸಮಯದಲ್ಲಿ ಸಮಸ್ಯೆಗಳು ಕಟ್ಟಿಟ್ಟಬುತ್ತಿ.
ಸಿಂಹ ರಾಶಿಯವರಿಗೆ ಶನಿಯ ಕಾರಣದಿಂದ ಬಹಳಷ್ಟು ತೊಂದರೆಗಳು ಆಗುತ್ತದೆ. ಏಕೆಂದರೆ ಶನಿಯು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಅಸ್ತಮಿಸಲಿದ್ದಾನೆ. ಇದು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಸಮಯದಲ್ಲಿ ನೀವು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ವೆಚ್ಚಗಳು ಅಧಿಕವಾಗಿರುತ್ತದೆ. ಈ ಸಮಯದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವುದನ್ನು ತಪ್ಪಿಸಿ.