Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

Shani Jayanti 2023: ಹಿಂದೂ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಶನಿಯು ಅತ್ಯಂತ ಪ್ರಭಾವಶಾಲಿ ಗ್ರಹ ಎನ್ನಲಾಗುತ್ತದೆ. ಈ ವರ್ಷ ಮೇ 19 ರಂದು ಶನಿ ಜಯಂತಿ ಆಚರಿಸಲಾಗುತ್ತಿದ್ದು, ಈ ದಿನ ಕೆಲ ಕೆಲಸಗಳನ್ನು ಮಾಡಿದರೆ ಶನಿ ದೋಷ ದೂರವಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಶನಿ ಜಯಂತಿಯನ್ನು ಯಾವ ರೀತಿ ಆಚರಿಸಬೇಕು ಎಂಬುದು ಇಲ್ಲಿದೆ.

First published:

  • 18

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಶನಿ ಬಹಳ ವಿಚಿತ್ರವಾದ ಗ್ರಹ. ಯಾವಾಗ ಯಾರ ಮೇಲೆ ಕೋಪ ಮಾಡಿಕೊಳ್ಳುತ್ತಾನೆ ಎಂಬುದನ್ನ ಕಂಡುಹಿಡಿಯುವುದು ಕಷ್ಟ. ಆದರೆ ಶನಿಯ ಕೋಪಕ್ಕೆ ಗುರಿಯಾದರೆ ಆಗರ್ಭ ಶ್ರೀಮಂತನೂ ಬಡವನಾಗುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಶನಿಗೆ ಕೋಪ ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

    MORE
    GALLERIES

  • 28

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಪ್ರತಿ ವರ್ಷ ಜ್ಯೇಷ್ಠ ಅಮವಾಸ್ಯೆಯಂದು ಶನಿ ಜಯಂತಿ ಬರುತ್ತದೆ. ಈ ಬಾರಿಯ ಶನಿ ಜಯಂತಿಯನ್ನು ಮೇ 19 ಶುಕ್ರವಾರದಂದು ಆಚರಿಸಲಾಗುತ್ತಿದೆ. ಈ ದಿನ ನಾವು ಶನಿಯನ್ನು ಸರಿಯಾಗಿ ಪೂಜೆ ಮಾಡಿದರೆ ಶನಿ ದೋಷ ಹಾಗೂ ಸಾಡೇಸಾತಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ನಿಮ್ಮ ಜಾತಕದಲ್ಲಿ ಸಾಡೇಸಾತಿ ದೋಷ ಹಾಗೂ ಯಾವುದೇ ರೀತಿಯ ಶನಿ ದೋಷ ಇದ್ದರೆ ಈ ದಿನ ಪೂಜೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಹಾಗೆಯೇ ಈ ದಿನ ಸಾಡೇಸಾತಿಗೆ ಸಂಬಂಧಿಸಿದ ಪರಿಹಾರ ಮಾಡಿದರೆ ಕಷ್ಟಗಳು ಬಹುತೇಕ ಕಡಿಮೆ ಆಗುತ್ತದೆ.

    MORE
    GALLERIES

  • 48

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಪೂಜೆಯನ್ನು ಯಾವಾಗ ಮಾಡಬೇಕು?: ಹಿಂದೂ ಪಂಚಾಂಗದ ಪ್ರಕಾರ, ಜ್ಯೇಷ್ಠ ಮಾಸದ ಅಮಾವಾಸ್ಯೆ ತಿಥಿಯು ಮೇ 18, 2023 ರಂದು 09:42 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 19, 2023 ರಂದು ರಾತ್ರಿ 09:22 ಕ್ಕೆ ಕೊನೆಗೊಳ್ಳುತ್ತದೆ. ಪೂಜೆಗೆ ಮೂರು ಶುಭ ಮುಹೂರ್ತಗಳಿವೆ. ಮೇ 19 ರಂದು ಬೆಳಗ್ಗೆ 07.11 ರಿಂದ 10.35 ರವರೆಗೆ ಪೂಜೆಗಳನ್ನು ಮಾಡಬಹುದು. ಮಧ್ಯಾಹ್ನ 12.18 ರಿಂದ 2.00 ರವರೆಗೆ.

    MORE
    GALLERIES

  • 58

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಶನಿಯ ಪೂಜೆ ಮಾಡುವುದು ಹೇಗೆ?: ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಹಾಗೆಯೇ ಶನಿಯ ದೇವಸ್ಥಾನಕ್ಕೆ ಹೋಗಿ ಎಳ್ಳಿನ ದೀಪವನ್ನು ಹಚ್ಚಬೇಕು. ಅಲ್ಲದೇ, ನೀರಿಗೆ ಕಪ್ಪು ಎಳ್ಳು ಹಾಗೂ ನೀಲಿ ಹೂವನ್ನು ಹಾಕಿ, ಶನಿಗೆ ಅರ್ಪಿಸಿದರೆ ಇನ್ನೂ ಉತ್ತಮ.

    MORE
    GALLERIES

  • 68

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಓಂ ಪ್ರಾಂ ಪ್ರಿಂ ಪ್ರಂ ಸ: ಶನೈಶ್ಚರಾಯ ನಮಃ. ಓಂ ಪ್ರಾಂ ಪ್ರಿಂ ಪ್ರೌಂ ಸ: ಶನೈಶ್ಚರಾಯ ನಮಃ । ಓಂ ಸಂ ಶನಿಶ್ಚರಾಯ ನಮಃ । ಓಂ ಭಗವೈ ವಿದ್ಮಹೈ ಮೃತ್ಯುರೂಪಾಯ ಧೀಮಹಿ ತನ್ನೋ ಶನಿ: ಪ್ರಚೋದಯಾತ್. ಓಂ ಶನ್ನೋದೇವೀರ್-ಭೀಷ್ಟಯಾ'ಆಪೋ ಭವಂತು ಪೀಠಯೇ ಸಂಯೋರ್ಭಿಸ್ತ್ರವನ್ತುನಾಃ । ಈ ಮಂತ್ರಗಳನ್ನು ತಪ್ಪದೇ ಪಠಿಸಿ.

    MORE
    GALLERIES

  • 78

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    ಇನ್ನು ನಿಮ್ಮ ವ್ಯವಹಾರ ಹಾಗೂ ಆರ್ಥಿಕವಾಗಿ ಲಾಭಬೇಕು ಎಂದರೆ ಈ ದಿನ ಅರಳಿ ಮರದ ಕೆಳಗೆ 9 ಎಳ್ಳಿನ ದೀಪವನ್ನು ಹಚ್ಚಬೇಕು. ಹಾಗೆಯೇ, ಶನಿ ದೇವಸ್ಥಾನಕ್ಕೆ ಹೋಗಿ ತಪ್ಪದೇ ಕಪ್ಪು ಎಳ್ಳನ್ನ ಅರ್ಪಿಸಿದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 88

    Shani Jayanti 2023: ಮೇ 19 ರಂದು ಶನಿ ಜಯಂತಿ, ಈ ಕೆಲಸ ಮಾಡಿದ್ರೆ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES