ಅಲ್ಲದೇ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಧನು ರಾಶಿಯವರು ಸಾಡೇಸತಿಯಿಂದ ಮುಕ್ತರಾಗುತ್ತಾರೆ. ಇದರಿಂದ ಇಷ್ಟು ದಿನ ಪಟ್ಟಿದ್ದ ಕಷ್ಟಕ್ಕೆ ಬೆಲೆ ಸಿಗುತ್ತದೆ. ಈ ಸಮಯದಲ್ಲಿ ಶನಿ ನಿಮಗೆ ಎಲ್ಲವನ್ನೂ ಕೊಡುತ್ತದೆ. ಆಸ್ತಿ, ವಾಹನ ಅಥವಾ ಚಿನ್ನ ಹೀಗೆ ಎಲ್ಲವನ್ನೂ ಕೊಡುತ್ತಾನೆ ಎನ್ನಲಾಗುತ್ತದೆ. ನೀವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.