ವೃಷಭ : ಈ ರಾಶಿಯವರಿಗೆ ಶನಿ ಸಂಚಾರದಿಂದ ಲಾಭವಾಗಲಿದೆ. ಶುಕ್ರವು ವೃಷಭ ರಾಶಿಯ ಆಡಳಿತ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಶುಕ್ರರು ಪರಸ್ಪರ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಆದ್ದರಿಂದ ಶನಿಯು ವೃಷಭ ರಾಶಿಯವರಿಗೆ ಒಲವು ತೋರುತ್ತಾನೆ. ಶನಿಯು ವೃಷಭ ರಾಶಿಯ 10 ನೇ ಮನೆಯಲ್ಲಿ ಸಾಗುತ್ತಾನೆ. ಹೀಗಾಗಿ 2023ನೇ ವರ್ಷದಲ್ಲಿ ಉದ್ಯೋಗಾವಕಾಶಗಳು ಬರಲಿವೆ.
ಮಕರ: ಶನಿಯು ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಸಂಚರಿಸುತ್ತಾನೆ. ಆದ್ದರಿಂದ ಈ ವರ್ಷ ನಿಮಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಪೂರ್ವಿಕರ ಆಸ್ತಿಗಳ ಖರೀದಿ ಮತ್ತು ಮಾರಾಟದಿಂದ ಉತ್ತಮ ಲಾಭವನ್ನು ಪಡೆಯಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುವವರಿಗೆ ಇದು ಸೂಕ್ತವಾದ ಸಮಯ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ವೃತ್ತಿ ಜೀವನದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಕುಂಭ: ಶನಿಯು ಕುಂಭ ರಾಶಿಯ ಮೊದಲ ಮನೆಗೆ ಪ್ರವೇಶಿಸುತ್ತಾನೆ. ಶನಿಯು ಕುಂಭ ರಾಶಿಯ ಅಧಿಪತಿ. ಆದ್ದರಿಂದ ಶನಿಯು ಕುಂಭ ರಾಶಿಗೆ ಆಗಮಿಸುವುದು ಶುಭ ಸಂಕೇತವಾಗಿದೆ. ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರಲಿದೆ. ಆರ್ಥಿಕ ಲಾಭವಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಉದ್ಯೋಗಕ್ಕಾಗಿ ತಯಾರಿ ನಡೆಸುವವರಿಗೆ ಯಶಸ್ಸಿನ ಅವಕಾಶವಿದೆ. ಹೂಡಿಕೆಗಳು ಲಾಭವನ್ನು ತರುತ್ತದೆ.