Shani Gochar 2023: ಜನವರಿ 17ಕ್ಕೆ ಸ್ಥಾನ ಬದಲಿಸಲಿರುವ ಶನಿ, ಈ ರಾಶಿಯವರಿಗಿನ್ನು ನೆಮ್ಮದಿ
Shani Gochar 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಸ್ತುತ ಮಕರ ರಾಶಿಯಲ್ಲಿರುವ ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಸುಮಾರು 30 ವರ್ಷಗಳ ನಂತರ ಶನಿಯು ತನ್ನ ರಾಶಿಗೆ ಬರುತ್ತಾನೆ. ಇದರಿಂದ ಕೆಲ ರಾಶಿಯವರಿಗೆ ಜೀವನದಲ್ಲಿ ಬಯಸಿದ ಭಾಗ್ಯಗಳು ಸಿಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಸ್ತುತ ಮಕರ ರಾಶಿಯಲ್ಲಿರುವ ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಸುಮಾರು 30 ವರ್ಷಗಳ ನಂತರ ಶನಿಯು ತನ್ನ ರಾಶಿಗೆ ಬರುತ್ತಾನೆ. ಇದರಿಂದ ಕೆಲ ರಾಶಿಯವರಿಗೆ ಜೀವನದಲ್ಲಿ ಬಯಸಿದ ಭಾಗ್ಯಗಳು ಸಿಗಲಿದೆ.
2/ 8
ಈ ಶನಿಯ ಸ್ಥಾನ ಬದಲಾವಣೆಯಿಂದ ಕೆಲ ರಾಶಿಗಳಿಗೆ ಸಾಡೇಸಾತಿ ಮುಗಿದರೆ ಇನ್ನೂ ಕೆಲ ರಾಶಿಗೆ ಸಾಡೇಸಾತಿ ಆರಂಭವಾಗಲಿದೆ. ಹಾಗಾಗಿ ಈ ಸಮಯದಲ್ಲಿ ಕೆಲ ರಾಶಿಯ ಜನರಿಗೆ ಅದೃಷ್ಟವಿದ್ದರೆ, ಇನ್ನೂ ಕೆಲವರಿಗೆ ಸಮಸ್ಯೆಗಳು ಆರಂಭವಾಗುತ್ತದೆ.
3/ 8
ಮೇಷ ರಾಶಿ: ಶನಿಯ ಈ ಸ್ಥಾನ ಬದಲಾವಣೆಯು ಮೇಷ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಹೊಸ ವ್ಯವಹಾರಗಳು ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಮೇಷ ರಾಶಿಯವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ಇದ್ದು, ನೆಮ್ಮದಿಯ ಜೀವನ ಸಿಗಲಿದೆ.
4/ 8
ಮಿಥುನ ರಾಶಿ: ಮೇಷ ರಾಶಿ ಮಾತ್ರವಲ್ಲದೇ ಮಿಥುನ ರಾಶಿಯ ವ್ಯಾಪಾರಿಗಳಿಗೆ ಈ ವರ್ಷ ತುಂಬಾ ಒಳ್ಳೆಯದು. ವ್ಯವಹಾರದಲ್ಲಿನ ಎಲ್ಲಾ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಗುತ್ತದೆ. ಶನಿಯು ಸ್ಥಾನ ಬದಲಾವಣೆ ಮಾಡಿದಂತೆ, ವ್ಯಾಪಾರಸ್ಥರಿಗೆ ಲಾಭ ಸಿಗುವ ಸಾಧ್ಯತೆ ಇದೆ. ಆದರೆ ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಬೇಕು.
5/ 8
ಕುಂಭ ರಾಶಿ: ಶನಿಯ ಈ ಸ್ಥಾನ ಬದಲಾವಣೆಯು ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ದೊಡ್ಡ ಲಾಭವನ್ನು ತರುತ್ತದೆ ಎನ್ನಲಾಗುತ್ತಿದೆ. ವ್ಯವಹಾರವನ್ನು ದೊಡ್ಡದಾಗಿ ವಿಸ್ತರಿಸಲು ಹಾಗೂ ಹೊಸ ಹೂಡಿಕೆ ಮಾಡಲು ಇದು ಸರಿಯಾದ ಸಮಯ.
6/ 8
ಆದರೆ, ಸದ್ಯ ಕುಂಭ ರಾಶಿಯ ವ್ಯಾಪಾರಿಗಳು ಸಮಸ್ಯೆ, ಜಂಜಾಟಗಳಿಂದ ದೂರವಿದ್ದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಎಚ್ಚರಿಕೆ ವಹಿಸುವುದು ಅಗತ್ಯ. ಹಾಗೆಯೇ, ಏಪ್ರಿಲ್ನಲ್ಲಿ ಕೊಂಚ ಎಚ್ಚರಿಕೆ ಅಗತ್ಯ. ಏಕೆಂದರೆ ಆ ಸಮಯದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ.
7/ 8
ಕಟಕ: ಕುಂಭ ರಾಶಿಯಲ್ಲಿ ಶನಿಯ ಸಂಚಾರವು ಕರ್ಕಾಟಕ ಮತ್ತು ಕನ್ಯಾ ರಾಶಿಯವರಿಗೆ ಸಹ ಪ್ರಯೋಜನಕಾರಿಯಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳಿಂದ ಸಮಸ್ಯೆ ಬರಬಹುದು, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)