ಸಿಂಹ: ಈ ರಾಶಿಯವರಿಗೆ ಶನಿಯು 6 ಮತ್ತು 7ನೇ ಮನೆಯ ಅಧಿಪತಿ. ಅಂದರೆ ಉದ್ಯೋಗ, ಸೇವೆ, ಸಾಲ, ಶತ್ರುಗಳು, ಮದುವೆ, ಪಾಲುದಾರಿಕೆ ಮುಂತಾದ ಅಂಶಗಳು ಶನಿಯ ಅಧೀನದಲ್ಲಿರುತ್ತದೆ. ಪ್ರಸ್ತುತ, ಶನಿಯು ಈ ರಾಶಿಯ ಏಳನೇ ಮನೆಯಲ್ಲಿದ್ದು, ಇದರಿಂದ ಬಹಳ ಲಾಭವಾಗಲಿದೆ. ಅಲ್ಲದೇ, ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಶತ್ರುಗಳು ಮಿತ್ರರಾಗುತ್ತಾರೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ.