ಮಿಥುನ: ಈ ಸಮಯದಲ್ಲಿ ಬಹುಕಾಲದಿಂದ ವಿದೇಶದಲ್ಲಿ ಓದುವ ಅಥವಾ ಉದ್ಯೋಗ ಪಡೆಯುವ ಕನಸು ಕಾಣುತ್ತಿದ್ದವರಿಗೆ ಆಸೆ ಈಡೇರಲಿದೆ. ವೃತ್ತಿಜೀವನದ ವಿಷಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಶನಿಗ್ರಹದಿಂದ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ, ಕಠಿಣ ಪರಿಶ್ರಮದಿಂದ ಎಲ್ಲವೂ ಸರಿಯಾಗುತ್ತದೆ. ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಈ ಏಳು ತಿಂಗಳುಗಳು ನಿಮಗೆ ಬಹಳ ಒಳ್ಳೆಯ ಸಮಯ.
ಸಿಂಹ ರಾಶಿ: ಶತಭಿಷಾ ನಕ್ಷತ್ರದಲ್ಲಿ ಶನಿಯು ಈ ರಾಶಿಯವರಿಗೆ ವೃತ್ತಿ, ಯಶಸ್ಸು ಮತ್ತು ಉದ್ಯೋಗ ವರ್ಗಾವಣೆಗೆ ಕಾರಣವಾಗಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರು ಉತ್ತಮ ಆಫರ್ ಪಡೆಯಬಹುದು. ಶನಿಯ ಬದಲಾವಣೆಯು ಉದ್ಯಮಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆರ್ಥಿಕವಾಗಿ ಇದು ತುಂಬಾ ಪ್ರಯೋಜನ ನೀಡುತ್ತದೆ. ಹಾಗೆಯೇ, ಕೌಟುಂಬಿಕ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ.
ತುಲಾ: ಶನಿ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸುವುದು ತುಲಾ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಶುಭವಾಗಲಿದೆ. ತುಲಾ ರಾಶಿಯವರಿಗೆ ಇದು ಬಹಳ ಒಳ್ಳೆಯ ಸಮಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ವಯಂ ಉದ್ಯೋಗಿಗಳಿಗೆ ದೊಡ್ಡಮಟ್ಟದ ಆರ್ಥಿಕ ಲಾಭ ದೊರೆಯುತ್ತದೆ. ಆದರೆ, ಹಣ ಸಂಪಾದಿಸಲು ಯಾವುದೇ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ಇದರಿಂದ ಹಾನಿಯಾಗುವ ಸಾಧ್ಯತೆ ಹೆಚ್ಚು. ಸಮಾಜದಲ್ಲಿ ಮನ್ನಣೆ ಸಿಗಲಿದೆ.