ಶನಿ ತನ್ನ ತಂದೆ ಸೂರ್ಯನ ಜೊತೆ ಒಳ್ಳೆಯ ಸಂಬಂಧವನ್ನು ಹೊಂದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಬಂದಾಗ, ಅವರ ಪ್ರಭಾವವು ಕೆಲವು ಜನರಿಗೆ ಸವಾಲುಗಳು ಎದುರಾಗಬಹುದು. ಜನವರಿ 17 ರಂದು ಶನಿಯು ಮಕರ ರಾಶಿಯನ್ನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಫೆಬ್ರವರಿ 13 ರಂದು ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಸಂಯೋಗವಾಗಲಿದೆ.
ಕಟಕ: ಫೆಬ್ರವರಿ 13 ರಿಂದ ಸೂರ್ಯ ಮತ್ತು ಶನಿಯ ಸಂಯೋಗವು ಕಟಕ ರಾಶಿಯವರಿಗೆ ಸಮಸ್ಯೆ ತಂದೊಡ್ಡುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದ ಆಗಬಹುದು, ಹಾಗಾಗಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು. ಇದು ನಿಮ್ಮ ಇಮೇಜ್ ಅನ್ನು ಹಾಳುಮಾಡಬಹುದು. ಫೆಬ್ರವರಿ 13 ರಿಂದ ಮಾರ್ಚ್ 15 ರ ನಡುವೆ, ನೀವು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಯಾರಿಗೂ ಸಾಲ ನೀಡಬೇಡಿ.
ಕುಂಭ ರಾಶಿ: ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಗ್ರಹ ಒಟ್ಟಿಗೆ ಸೇರುವುದರಿಂದ, ಇದು ಕುಂಭ ರಾಶಿಯವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸಬಾರದು. ಅಲ್ಲದೇ ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ. ಕೌಟುಂಬಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ತಂದೆ ಮತ್ತು ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಸಂಬಂಧಗಳು ಹದಗೆಡುವ ಸಾಧ್ಯತೆಯಿದೆ.