Shakuna Shastra: ನಿಮ್ಮನೇಲಿ ಹಲ್ಲಿ ಇಲ್ಲೆಲ್ಲಾ ಓಡಾಡ್ತಿದ್ಯಾ? ಹಾಗಿದ್ರೆ ನಿಮ್ಮ ಲಕ್ ಕೈ ಕೊಡೋದು ಗ್ಯಾರಂಟಿ
Lizards In House: ಬಹುತೇಕ ಪ್ರತಿಯೊಬ್ಬರ ಮನೆಗಳಲ್ಲಿ ಹಲ್ಲಿ ಇರುತ್ತದೆ. ಗೋಡೆಗಳ ಮೇಲೆ ಹರಿದಾಡುವ ಈ ಹಲ್ಲಿಗಳನ್ನು ಕಂಡರೆ ಹಲವಾರು ಜನರಿಗೆ ಭಯ. ಅಲ್ಲದೇ ಹಲ್ಲಿಯ ಲೊಚಲೊಚ ಶಬ್ಧ ಹಾಗೂ ಅದರ ಓಡಾಟಕ್ಕೂ ಸಹ ಹಲವಾರು ಅರ್ಥವಿದೆ. ಕೆಲವರು ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದು ಎನ್ನುತ್ತಾರೆ, ಇನ್ನೂ ಕೆಲವರು ಕೆಟ್ಟದ್ದು ಎನ್ನುತ್ತಾರೆ. ಹಾಗಾದ್ರೆ ಮನೆಯಲ್ಲಿ ಹಲ್ಲಿ ಇದ್ದರೆ ಶುಭವೋ? ಅಶುಭವೋ? ಇಲ್ಲಿದೆ ನೋಡಿ
ಶಕುನ ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ಕೆಲವೊಮ್ಮೆ ಒಳ್ಳೆಯದಾಗುತ್ತದೆ, ಆದರೆ ಬಹುತೇಕ ಹೆಚ್ಚಿನ ಸಮಯಗಳಲ್ಲಿ ಇದು ಅಶುಭ ಎನ್ನಲಾಗುತ್ತದೆ. ಮನೆಯಲ್ಲಿ ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಂಡರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ
2/ 7
ಹಾಗೆಯೇ, ಮನೆಯಲ್ಲಿ ಯಾವಾಗಲಾದರೂ ಎರಡು ಹಲ್ಲಿಗಳು ಪರಸ್ಪರ ಜಗಳವಾಡುವುದನ್ನು ಕಂಡರೆ ಅದನ್ನು ಅಶುಭ ಸೂಚಕವೆಂದೇ ಪರಿಗಣಿಸಬೇಕು. ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರರ್ಥ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ, ಕುಟುಂಬದ ಸದಸ್ಯರ ಆರೋಗ್ಯವೂ ಹದಗೆಡುತ್ತದೆ ಎಂದರ್ಥ
3/ 7
ಪೂಜಾ ಕೋಣೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡರೆ ಅದು ಅಶುಭ ಸಂಕೇತ ಎಂದು ಶಕುನ ಶಾಸ್ತ್ರ ಹೇಳುತ್ತದೆ. ಹೀಗಾದರೆ ಮನೆ ಮಾಲೀಕರ ಪ್ರಗತಿ ಕುಂಠಿತವಾಗುತ್ತದೆ. ಹಣದ ನಷ್ಟ ಉಂಟಾಗಲಿದೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.
4/ 7
ಪೂಜಾ ಸ್ಥಳದಲ್ಲಿ ಸಾಮಾನ್ಯ ಬಣ್ಣದ ಹಲ್ಲಿ ಕಂಡುಬಂದರೆ, ಅದು ಒಂದು ರೀತಿಯ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಹಲ್ಲಿ ಓಡಾಡುತ್ತಿದ್ದರೆ ಮನೆಯಲ್ಲಿ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ ಹಾಗೂ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದರ್ಥ.
5/ 7
ಶುಕ್ರವಾರದ ಪೂಜೆಯ ವೇಳೆ ಹಲ್ಲಿ ಕಾಣಿಸಿಕೊಂಡರೆ ತುಂಬಾ ಶುಭ ಎನ್ನಲಾಗುತ್ತದೆ. ನಿಮ್ಮ ಮನೆಯ ನೆಲದ ಮೇಲೆ ಹಲ್ಲಿ ಇದ್ದಕ್ಕಿದ್ದಂತೆ ಬಿದ್ದರೆ, ಅದನ್ನು ಅತ್ಯಂತ ಅಶುಭಕರ ಚಿಹ್ನೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಕೆಲವು ಕೆಟ್ಟ ಘಟನೆಗಳು ಸಂಭವಿಸುತ್ತವೆ ಎಂದು ಅರ್ಥಮಾಡಿಕೊಳ್ಳಬೇಕು
6/ 7
ಹಲ್ಲಿಯು ಗೋಡೆಯ ಮೇಲೆ ವೇಗವಾಗಿ ಓಡಾಡುವುದನ್ನ ನೀವು ನೋಡಿದರೆ, ಅದು ಶುಭ ಶಕುನ ಎನ್ನಲಾಗುತ್ತದೆ. ಇದರಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಅನಿರೀಕ್ಷಿತವಾಗಿ ಹಣ ಬರಲಿದೆ. ಮನೆಯಲ್ಲಿ ನೆಲದ ಮೇಲೆ ಹಲ್ಲಿ ಹರಿದಾಡುವುದನ್ನು ಕಂಡರೆ ಶುಭ ಸೂಚನೆ. ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)