Astrological Prediction 2023: ಹೊಸವರ್ಷದಲ್ಲಿ ಕಷ್ಟಗಳು ಈ ರಾಶಿಯವರನ್ನೇ ಹುಡುಕಿ ಬರುತ್ತಂತೆ
Scorpio 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ವೃಶ್ಚಿಕ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ವೃಶ್ಚಿಕ ರಾಶಿಯವರಿಗೆ 2023ರಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ವಲ್ಪ ಸಮಸ್ಯೆಗಳೇ ಹೆಚ್ಚಾಗಲಿದ್ದು, ಈ ರಾಶಿಯವರು ಹೊಸವರ್ಷದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ಜೀವನ ನಡೆಸಲು ಸಹ ಪರದಾಡಬೇಕಾಗುತ್ತದೆ. ಕೆಲ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
2/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಹೊಸ ಸಂವತ್ಸರದಲ್ಲಿ ಪ್ರತಿಕೂಲ ಫಲಗಳೇ ಜಾಸ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಆರನೇ ಮನೆಯಲ್ಲಿರುವ ಗುರು ಹಾಗೂ ಕಷ್ಟಕೊಡುವ ಶನಿ ಸೇರಿಕೊಂಡು ಜೀವನವನ್ನು ಗೊಂದಲದ ಗೂಡಾಗಿಸಲಿದ್ದಾರೆ. ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಇರಿ.
3/ 8
ಈ ವರ್ಷ ಆರಂಭದಲ್ಲೇ ತಾಯಿಯ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಅಲೆದಾಟವಿದೆ. ದೊಡ್ಡ ವ್ಯಕ್ತಿಗಳು ಅಧಿಕಾರಿಗಳು ನಿಮಗೆ ಶತ್ರುಗಳಾಗಿ ಪರಿಣಮಿಸಲಿದ್ದಾರೆ ಆದರೂ ಶತ್ರುಗಳ ವಿರುದ್ಧ ಅಂತಿಮ ಜಯ ನಿಮ್ಮದೇ ಆಗುತ್ತದೆ. ನಿಮ್ಮ ಬುದ್ದಿವಂತಿಕೆಯಿಂದ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು.
4/ 8
ಹೈನುಗಾರಿಕೆ ಕೃಷಿ ಪಶು ಸಂಗೋಪನೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯವಹಾರಸ್ತರಿಗೆ ನಷ್ಟಭೀತಿ ಇದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳ ಕಿರುಕುಳ ವಿಪರೀತ ಸ್ಥಿತಿಯನ್ನು ಮುಟ್ಟಲಿದೆ. ಆಫೀಸ್ನಲ್ಲಿ ನಿಮಗೆ ಬಹಳ ಕಷ್ಟಗಳು ಎದುರಾಗುತ್ತದೆ. ಈ ಸವಾಲುಗಳನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದು ಸಹ ಮುಖ್ಯ.
5/ 8
ಮಾನಸಿಕ ನೆಮ್ಮದಿ ನಿಮಗೆ ಮರೀಚಿಕೆಯಾಗಲಿದೆ. ಸಾಧ್ಯವಾದಷ್ಟು ತಾಳ್ಮೆ ಇರಲಿ. ಸುಮ್ಮನೆ ಚಿಕ್ಕ ಚಿಕ್ಕ ವಿಚಾರಗಳಿಗೆ ನೀವು ಕೋಪ ಮಾಡಿಕೊಂಡರೆ ನಂತರ ನೀವೇ ಅನುಭವಿಸಬೇಕಾಗುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಸಹ ಸಮಸ್ಯೆ ಆಗಬಹುದು.
6/ 8
ಈ ವರ್ಷ ಪಿತ್ರಾರ್ಜಿತ ಆಸ್ತಿಪಾಸ್ತಿ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಬಂದು ವರ್ಗದ ಜನರ ಜೊತೆ ನಿರಂತರವಾದ ವಿವಾದಗಳು ಇರುತ್ತದೆ. ಆಗಾಗ ಈ ವಿವಾದಗಳು ತಾರಕಕ್ಕೆ ಏರುವ ಸಾಧ್ಯತೆ ಇರುತ್ತದೆ. ಅಪವಾದ ಭೀತಿ ಪ್ರತಿ ಹೆಜ್ಜೆಗೂ ಭಾದಿಸಬಹುದು.
7/ 8
ನಿಮಗೆ ಈ ವರ್ಷ ವಾಹನ ಅಪಘಾತ ಯೋಗವಿದ್ದು, ದೂರ ಪ್ರವಾಸವನ್ನು ಮುಂದೆ ಹಾಕುವುದು ಒಳ್ಳೆಯದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ಮುಖ್ಯ. ಈ ವರ್ಷ ಆರೋಗ್ಯದ ವಿಚಾರವಾಗಿ ಸ್ವಲ್ಪವೂ ನೆಗ್ಲೆಕ್ಟ್ ಮಾಡಬೇಡಿ.
8/ 8
ಹಾಗೆಯೇ, ವಾತರೋಗದಿಂದ ದಿನೇ ದಿನೇ ದೇಹ ಬಾಧೆಗಳು ಹೆಚ್ಚುತ್ತಾ ಹೋಗುತ್ತದೆ. ತಂದೆ ತಾಯಿಗೂ ನಿಮ್ಮ ಬಗ್ಗೆ ಅಸಮಾಧಾನವೇ ಜಾಸ್ತಿಯಾಗಲಿದೆ. ಹಾಗಾಗಿ ದುರ್ಗಾಪರಮೇಶ್ವರಿಯನ್ನು ನಿರಂತರವಾಗಿ ಆರಾಧಿಸಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಜೀವನದಲ್ಲಿ ಶಾಂತಿ ಸಿಗುತ್ತದೆ.