ನಿಮಿತ ಶಾಸ್ತ್ರ ಅಥವಾ ಶಕುನಗಳ (Omen Study) ಅಧ್ಯಯನ ಎಂಬ ವೈಜ್ಞಾನಿಕ ಪ್ರಕಾರವು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿದೆ.ಇದರ ಅನುಸಾರ ಕೆಲವು ಶಕುನಗಳು ಭವಿಷ್ಯದ ಮುನ್ಸೂಚನೆ ತಿಳಿಸುತ್ತವೆ ಎಂದು ಪರಿಗಣಿಸಲಾಗಿದೆ. ಅದರಲ್ಲಿ ಕಣ್ಣು ಅದುರುವಿಕೆ ಕೂಡ ಒಂದು. ಈ ಕಣ್ಣು ಅದುರುವಿಕೆಗೂ ಮುಂದೆ ಆಗಲಿರುವ ಘಟನೆಗಳಿಗೂ ತಾಳವನ್ನು ಈ ಶಕುನ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ವೈಜ್ಞಾನಿಕ ದೃಷ್ಟಿಕೋನದ ಪ್ರಕಾರ, ಸ್ನಾಯುವಿನ ತೊಂದರೆಯಿಂದಾಗಿ ಕಣ್ಣಿನ ಸೆಳೆತ ಸಂಭವಿಸುತ್ತದೆ. ಒಬ್ಬ ವ್ಯಕ್ತಿಗೆ ಸಾಕಷ್ಟು ನಿದ್ದೆ ಬರದಿದ್ದರೆ, ಮನಸ್ಸಿನಲ್ಲಿ ಸ್ವಲ್ಪ ಉದ್ವೇಗ, ಹೆಚ್ಚು ಸುಸ್ತು ಅಥವಾ ಲ್ಯಾಪ್ಟಾಪ್-ಕಂಪ್ಯೂಟರ್ನಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರೆ, ಕಣ್ಣುಗಳು ಸೆಳೆತದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)