Sankranti-2023: ಯಾರಿಗೆ ಎಳ್ಳು-ಬೆಲ್ಲ? ಯಾರಿಗೆ ಕಹಿಫಲ? ಇಲ್ಲಿದೆ ನಿಮ್ಮ ಸಂಕ್ರಾಂತಿ ಭವಿಷ್ಯ
Sankranti 2023: ಮಕರ ಸಂಕ್ರಾಂತಿಯ ಶುಭ ಕಾಲದಲ್ಲಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಎಲ್ಲರಿಗೂ ಇರುತ್ತದೆ. ಈ ಸಂಕ್ರಾಂತಿ ಯಾರಿಗೆ ಶುಭ ತರುತ್ತೆ, ಯಾರಿಗೆ ಕಷ್ಟ-ನಷ್ಟ ಕೊಡುತ್ತದೆ ಎಂಬ ಕುತೂಹಲ ಇರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ಸಂಕ್ರಾಂತಿ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮಿಥುನ ರಾಶಿ: ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಪರಿವರ್ತನೆಯನ್ನು ಕೊಡುತ್ತದೆ. ಮಧ್ಯಸ್ಥಿಕೆ ವಹಿಸುವುದು ಅನುಕೂಲಕರ ಅಲ್ಲ. ಆರೋಗ್ಯ ವೃದ್ಧಿಯಾಗುವುದು. ಆದರೆ ಮಾನಸಿಕ ಕಿರಿಕಿರಿ ಆಗುವುದು.
2/ 10
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಸೂರ್ಯನ ಸಂಚಾರವು ಪ್ರವಾಸದ ಯೋಗವನ್ನು ಕೊಡುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದು. ಜೀವನ ಸಂಗಾತಿಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕಣ್ಣುಗಳಿಗೆ ಸಮಸ್ಯೆ ಬರಬಹುದು ಹುಷಾರಾಗಿರಿ.
3/ 10
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಮಂಗಳ ಕಾರ್ಯಗಳು ಮನೆಯಲ್ಲಿ ನಡೆಯಬಹುದು. ಮಕ್ಕಳಿಗೆ ಪ್ರಗತಿ ಇರುತ್ತದೆ. ನ್ಯಾಯಾಲಯದ ವಿಷಯದಲ್ಲಿ ಅನುಕೂಲ ಆಗುವುದು. ಸವಾಲುಗಳನ್ನು ಎದುರಿಸಬೇಕಾಗುತ್ತದೆ.
4/ 10
ಕನ್ಯಾ ರಾಶಿ: ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ಆಪತ್ ಧನ ಸಿಗುವಂತೆ ಮಾಡುತ್ತದೆ. ಸ್ನೇಹಿತರ ಬೆಂಬಲ ಇರಬಹುದು. ಇಂಜಿನಿಯರಿಂಗ್ ವ್ಯಕ್ತಿಗಳಿಗೆ ಅನುಕೂಲಕರ ದಿನವಾಗಿರುತ್ತದೆ.
5/ 10
ತುಲಾ ರಾಶಿ: ಸೂರ್ಯನ ಸಂಚಾರವು ತುಲಾ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರಬೇಕಾಗಬಹುದು. ಉದ್ಯೋಗದಲ್ಲಿ ಅನುಕೂಲ ಆಗುವುದು. ಭೂಮಿಯ ವಿಷಯದಲ್ಲಿ ಅನುಕೂಲ ಆಗುವುದು.
6/ 10
ವೃಶ್ಚಿಕ ರಾಶಿ: ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ವ್ಯಾಜ್ಯಗಳನ್ನು ನಿವಾರಣೆ ಮಾಡಬಹುದು. ವ್ಯಾಪಾರದಿಂದ ಲಾಭ ಆಗುವುದು. ಪ್ರಯಾಣದಲ್ಲಿ ಜಾಗ್ರತೆ ಬೇಕು, ಗ್ರಾಹಕರ ಸೇವೆ ಮಾಡುವವರಿಗೆ ಅನುಕೂಲಕರ ದಿನವಾಗಿದೆ. ಮಕ್ಕಳಿಂದ ವಿರೋಧ ಆಗಬಹುದು.
7/ 10
ಧನು ರಾಶಿ: ಸೂರ್ಯನ ಸಂಚಾರವು ಧನು ರಾಶಿಯವರಿಗೆ ಮಹಿಳೆಯರಿಗೆ ಅನುಕೂಲ ಆಗುವಂತೆ ಮಾಡುತ್ತದೆ. ಸಮಾಜಸೇವೆ ಮಾಡುವವರಿಗೆ ಅನುಕೂಲಕರ ದಿನವಾಗಿದೆ. ಆರೋಗ್ಯಕ್ಕಾಗಿ ಖರ್ಚಾಗಬಹುದು ಕೆಲಸ ಕಾರ್ಯದಲ್ಲಿ ಅಡೆತಡೆ ಆಗಬಹುದು.
8/ 10
ಮಕರ ರಾಶಿ: ಭಾಗ್ಯೋದಯದ ಕಾಲ ಇದಾಗಿದೆ. ಕೆಲಸ ಕಾರ್ಯದಲ್ಲಿ ಸಿದ್ಧಿಯಾಗುವುದು. ತೀರ್ಥಕ್ಷೇತ್ರಕ್ಕೆ ಪ್ರಯಾಣ ಬೆಳೆಸಬಹುದು. ಆಕಸ್ಮಿಕ ಧನ ಲಾಭ ಆಗುವುದು. ಮಕ್ಕಳಿಂದ ಶುಭ ವಿಷಯವನ್ನು ಕೇಳಬಹುದು.
9/ 10
ಕುಂಭ ರಾಶಿ: ಸೂರ್ಯನ ಸಂಚಾರವು ಕುಂಭ ರಾಶಿಯವರಿಗೆ ಗುಪ್ತ ಜನರಿಂದ ಕಿರುಕುಳವನ್ನು ಕೊಡಬಹುದು. ಬುದ್ಧಿಶಕ್ತಿಯಿಂದ ಎಲ್ಲವನ್ನು ನಿಭಾಯಿಸುವಿರಿ. ವಿವಾಹ ಯೋಗಗಳಿಗೆ ಅನುಕೂಲಕರ ದಿನ ಆಗಬಹುದು. ಕುಟುಂಬದಲ್ಲಿ ಶಾಂತಿ ಇರುತ್ತದೆ. ಅನಾರೋಗ್ಯ ಕಾಡಬಹುದು.
10/ 10
ಮೀನ ರಾಶಿ: ಸೂರ್ಯನ ಸಂಚಾರವು ಮೀನ ರಾಶಿಯವರಿಗೆ ಮಾನಸಿಕ ಚಿಂತೆಗಳನ್ನು ಕೊಡಬಹುದು. ಖರ್ಚಿನ ಬಗ್ಗೆ ಗಮನವನ್ನು ಕೊಡಬೇಕಾಗಬಹುದು. ಇಷ್ಟಪಟ್ಟ ವ್ಯಕ್ತಿಗಳಿಂದ ಬೇಸರ ಆಗುವುದು. ಹಿತ್ತಾಳೆ ಕಿವಿ ನಿಮ್ಮದಾಗಬಹುದು. ಬೇರೆಯವರ ಮಾತಿನಿಂದ ಸಂಸಾರದಲ್ಲಿ ತೊಂದರೆ ಆಗಬಹುದು.