Astrological Prediction: 2023ರಲ್ಲಿ ಸಂತೋಷದ ಸಾಗರದಲ್ಲಿ ತೇಲಾಡಲಿದ್ದಾರೆ ಈ ರಾಶಿಯವರು
Sagittarius 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಧನಸ್ಸು ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
2023 ರಲ್ಲಿ ಧನು ರಾಶಿಯವರ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುವ ಲಕ್ಷಣವಿದ್ದು, ಈ ಸಮಯದಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ಆಗಲಿದೆ ಎನ್ನಬಹುದು. ಆದರೂ ತುಸು ಎಚ್ಚರಿಕೆ ಅಗತ್ಯ ಎಂಬುದನ್ನ ನೆನಪಿನಲ್ಲಿಡಿ.
2/ 8
ಈ ಸಂವತ್ಸರದಲ್ಲಿ ನಿಮಗೆ ಸಂತೋಷದ ಸಾಗರವೇ ಹರಿದು ಬರಲಿದೆ. ಪಂಚಮದ ಗುರು ಇರುವುದರಿಂದ ತೃತೀಯದ ಶನಿ ಸೇರಿಕೊಂಡು ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಜಯಶೀಲರನ್ನಾಗಿರಿಸಲಿದ್ದಾರೆ.
3/ 8
ಎಷ್ಟೋ ವರ್ಷದಿಂದ ಕಾದಿದ್ದ ಪುತ್ರ ಸಂತಾನ ಯೋಗ ನಿಮ್ಮನ್ನು ಹುಡುಕಿ ಬರಲಿದೆ. ನ್ಯಾಯವಾದಿಗಳು ಉಪನ್ಯಾಸಕರು ಲೇಖಕರು ಕಲಾವಿಭಾಗದವರು ಈ ಸಂವತ್ಸರದಲ್ಲಿ ಉನ್ನತ ಸ್ಥಾನಕ್ಕೆ ಏರಲಿದ್ದಾರೆ.
4/ 8
ಶೇರ್ ಟ್ರೇಡಿಂಗ್, ಕಮಿಷನ್ ವ್ಯವಹಾರಸ್ಥರು ಪ್ರಗತಿ ಸಾಧಿಸುವರು ಉದ್ಯೋಗಸ್ಥರಿಗೆ ಜ್ಞಾನಾರ್ಜನೆ ಜೊತೆಗೆ ಪ್ರಮೋಷನ್ ಸಿಗುತ್ತದೆ. ಆದರೂ ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ರೀತಿ ಆಗಬಹುದು ಎಚ್ಚರ.
5/ 8
ಮಾನಸಿಕವಾಗಿ ಒತ್ತಡಗಳನ್ನು ಎದುರಿಸಿ ಬೆಂಡಾಗಲಿದ್ದೀರಿ. ಹಾಗಾಗಿ ಜಾಸ್ತಿ ಚಿಂತೆ ಮಾಡಬೇಡಿ. ಈ ಸಮಯದಲ್ಲಿ ನಿಮಗೆ ತಾಳ್ಮೆ ಬಹಳ ಮುಖ್ಯ ಎಂಬುದನ್ನ ನೆನಪಿಡಿ.
6/ 8
ಇನ್ನು ವರ್ಷಾರ್ಧದ ನಂತರ ತಾಯಿಗೆ ಅನಾರೋಗ್ಯ. ವಾಹನಾ ಅಪಘಾತ ಹಾಗೂ ಹೃದಯ ರೋಗ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು.
7/ 8
ಅಲ್ಲದೇ, ಈ ಸಮಯದಲ್ಲಿ ಭೂ ವಿವಾದ ಹಿತ ಶತ್ರುಗಳ ಪೀಡೆ ಹೀಗೆ ಸ್ವಲ್ಪಮಟ್ಟಿನ ಅಶುಭ ಫಲಗಳು ಅನುಭವಕ್ಕೆ ಬರಲಿದ್ದು, ಧಾರ್ಮಿಕ ಆಧ್ಯಾತ್ಮಿಕವಾದ ಸೆಳೆತಗಳು ಅತಿ ಎನ್ನುವಷ್ಟು ನಿಮ್ಮನ್ನು ಸೆಳೆಯಬಹುದು.
8/ 8
ಶುಕ್ಲ ಪಕ್ಷದ ಚಂದ್ರನಂತೆ ದಿನೇ ದಿನೇ ಎಲ್ಲಾ ವಿಚಾರಗಳಲ್ಲಿ ನಿಮಗೆ ವೃದ್ಧಿಯಾದಂತೆ ಅನುಭವಕ್ಕೆ ಬರಲಿದೆ ಹಾಗಾಗಿ ಕಳೆದ ಸಂವತ್ಸರದ ಶುಭಫಲವೇ ನಿಮಗೆ ಈ ಸಂವತ್ಸರದಲ್ಲಿ ಮುಂದುವರೆಯುತ್ತದೆ. ಸುಬ್ರಹ್ಮಣ್ಯನನ್ನು ಆರಾಧಿಸಿ ಅನುಕೂಲ ಆಗುವುದು.