ಕೇವಲ ಒಂದು ತಿಂಗಳ ಸಮಯದಲ್ಲಿ ಸುಮಾರು 225 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನು ಮಾಹಿತಿಯ ಪ್ರಕಾರ ಡಿಸೆಂಬರ್ 25ರವರೆಗೆ ಶಬರಿಮಲೆಗೆ ಯಾತ್ರೆ ಕೈಗೊಂಡಿರುವವರ ಜೊತೆ ಹಾಗೆಯೇ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 30 ಲಕ್ಷ ಎನ್ನಲಾಗುತ್ತಿದ್ದು, ಈ 39 ದಿನಗಳಲ್ಲಿ ಬಂದ ಆದಾಯದಲ್ಲಿ ಸುಮಾರು 70.10 ಕೋಟಿ ದೇಣಿಗೆ ರೂಪದಲ್ಲಿ ಬಂದಿದೆ ಎಂದು ದೇವಾಲಯ ತಿಳಿಸಿದೆ.