Sade Sati Remedies 2023: ಸಾಡೇಸಾತಿ ದೋಷ ನಿವಾರಣೆಗೆ ಈ ಪರಿಹಾರಗಳನ್ನು ತಪ್ಪದೇ ಮಾಡಿ
Sade Sati Remedies 2023: ಸಾಡೇ ಸಾತಿ ಎನ್ನುವುದು ಹಲವಾರು ಬಾರಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶನಿಯ ಪ್ರಭಾವದಿಂದ ವಿವಿಧ ರಾಶಿಗಳು ತೊಂದರೆಯನ್ನು ಅನುಭವಿಸುತ್ತವೆ. ಹಾಗಾಗಿ ಸಾಡೇ ಸಾತಿ ಇರುವವರು ಕೆಲ ಪರಿಹಾರ ಮಾಡಬೇಕು. ಆ ಪರಿಹಾರಗಳೇನು ಎಂಬುದು ಇಲ್ಲಿದೆ.
ಪ್ರತಿದಿನ ಶನಿವಾರ ನೀವು ಶನಿ ಸ್ತೋತ್ರ ಪಠಣೆ ಮಾಡುವುದು ಸಾಡೇಸಾತಿ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 11 ಬಾರಿ ಇದನ್ನು ಪಠಣೆ ಮಾಡುವುದರಿಂದ ಸಾಡೇಸಾತಿಯಿಂದ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡಬಹುದು.
2/ 8
ಶನಿವಾರ ಆಹಾರವನ್ನು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅದರಲ್ಲೂ ಕ್ಲೀನಿಂಗ್ ಕೆಲಸ ಮಾಡುವ ಸಿಬ್ಬಂದಿಗಳಿಗೆ ನೀವು ಅನ್ನ ಹಾಗೂ ಹಾಲು ದಾನ ಮಾಡಿದರೆ ಸಾಡೇಸಾತಿ ಸಮಸ್ಯೆಯಿಂದ ಸ್ವಲ್ಪ ಮುಕ್ತಿ ಪಡೆಯಬಹುದು.
3/ 8
ಇನ್ನು ಸಾಡೇಸಾತಿ ಸಮಸ್ಯೆ ಇರುವವರು ಕೋಕಿಲ ವನಕ್ಕೆ ಅಥವಾ ಶನಿಧಾಮಕ್ಕೆ ಭೇಟಿ ನೀಡುವುದು ಒಳ್ಳೆಯದು ಎನ್ನಲಾಗುತ್ತದೆ. ಈ ಸಮಯದಲ್ಲಿ ಹಾಲು ಹಾಗೂ ನೀರನ್ನು ಮಿಶ್ರಣ ಮಾಡಿ ಅರಳಿ ಮರಕ್ಕೆ ಹಾಕಬೇಕು.
4/ 8
ಹಾಗೆಯೇ ಪ್ರತಿದಿನ ಸಾಧ್ಯವಾದರೆ ಅರಳಿ ಮರವನ್ನು ಪೂಜಿಸಬೇಕು. ಕಪ್ಪು ಎಳ್ಳು ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಅರಳಿ ಮರದ ಬಳಿ ಇಡಬೇಕು. ಹಾಗೆಯೆ ಸಕ್ಕರೆ ಹಾಗೂ ಹಿಟ್ಟಿನ ಮಿಶ್ರಣವನ್ನು ಇರುವೆಗಳಿಗೆ ಆಹಾರವಾಗಿ ನೀಡುವುದರಿಂದ ಸಹ ಸಹಾಯವಾಗುತ್ತದೆ.
5/ 8
ಇನ್ನು ಸಾಡೇಸಾತಿ ಇದ್ದ ಸಮಯದಲ್ಲಿ ಕೆಲವೊಂದು ಮುನ್ನಚ್ಚೆರಿಕೆ ತೆಗೆದುಕೊಳ್ಳುವುದು ಹಾಗೂ ಕೆಲ ಕೆಲಸವನ್ನು ಮಾಡದೇ ಇರುವುದು ಸಹ ಒಳ್ಳೆಯದು. ಉದಾಹರಣೆಗೆ ಮಂಗಳವಾರ ಕಪ್ಪು ಬಟ್ಟೆ ಧರಿಸಬಾರದು.
6/ 8
ಇನ್ನು ಶನಿವಾರ ನೀವು ಕಪ್ಪು ಬಟ್ಟೆ ಧರಿಸಬಹುದಾದರೂ ಸಹ ಆ ದಿನ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆ ಖರೀದಿ ಮಾಡಬೇಡಿ. ಹಾಗೆಯೇ ಈ ದಿನ ಶನಿಯ ವಾಹನ ಕಾಗೆಗೆ ಯಾವುದೇ ಸಮಸ್ಯೆ ಮಾಡಲು ಹೋಗಬೇಡಿ.
7/ 8
ಸಾಡೇಸಾತಿಯ ಸಮಯದಲ್ಲಿ ಕಪ್ಪು ಎಳ್ಳು, ಕಬ್ಬಿಣ ಹಾಗೂ ಎಣ್ಣೆಯನ್ನು ಯಾರಿಂದಲೂ ಸಾಲ ಪಡೆಯಬಾರದು. ಆದರೆ ಇದೇ ವಸ್ತುಗಳನ್ನು ನೀವು ಈ ಸಮಯದಲ್ಲಿ ದಾನ ಮಾಡುವುದರಿಂದ ಶನಿಯ ಕೃಪೆಗೆ ಪಾತ್ರರಾಗಬಹುದು.
8/ 8
ಎಲ್ಲದಕ್ಕಿಂತ ಮುಖ್ಯವಾಗಿ ಈ ಸಮಯದಲ್ಲಿ ಜಗಳ ಮಾಡುವುದು, ಕಾನೂನು ಹೋರಾಟ, ಹಿರಿಯರ ಮಾತು ಕೇಳದಿರುವುದು ಇವುಗಳನೆಲ್ಲಾ ಮಾಡಲೇಬೇಡಿ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)