Mangal Margi: ಕುಜ ದೋಷದಿಂದ ಮುಕ್ತಿ ಬೇಕು ಅಂದ್ರೆ ಇಷ್ಟು ಮಾಡಿ ಸಾಕು
Kuja Dosh: ಜ್ಯೋತಿಷ್ಯದ ಪ್ರಕಾರ ಜನವರಿ ತಿಂಗಳಲ್ಲಿ ಹಲವಾರು ಗ್ರಹಗಳ ಬದಲಾವಣೆಯಾಗಲಿದೆ. ಈ ಸಮಯದಲ್ಲಿ ಮಂಗಳ ಗ್ರಹ ಸಹ ಸ್ಥಾನ ಬದಲಾವಣೆ ಮಾಡುತ್ತಿದ್ದು, ಇದು ಅನೇಕರಿಗೆ ಕುಜ ದೋಷವನ್ನು ಉಂಟುಮಾಡುತ್ತದೆ. ಈ ಕುಜ ದೋಷದಿಂದ ಅನೇಕ ಸಮಸ್ಯೆಗಳು ಬರುತ್ತದೆ. ಹಾಗಾಗಿ ಈ ಕುಜ ದೋಷದಿಂದ ಮುಕ್ತಿ ಪಡೆಯಲು ಕೆಲ ಪರಿಹಾರಗಳು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ ಜನವರಿ ತಿಂಗಳಲ್ಲಿ ಹಲವಾರು ಗ್ರಹಗಳ ಬದಲಾವಣೆಯಾಗಲಿದೆ. ಈ ಸಮಯದಲ್ಲಿ ಮಂಗಳ ಗ್ರಹ ಸಹ ಸ್ಥಾನ ಬದಲಾವಣೆ ಮಾಡುತ್ತಿದ್ದು, ಇದು ಅನೇಕರಿಗೆ ಕುಜ ದೋಷವನ್ನು ಉಂಟುಮಾಡುತ್ತದೆ. ಈ ಕುಜ ದೋಷದಿಂದ ಅನೇಕ ಸಮಸ್ಯೆಗಳು ಬರುತ್ತದೆ.
2/ 8
ಈ ಮಂಗಳ ಗ್ರಹ ಜನವರಿ 13ರಂದು ಅಂದರೆ ನಾಳೆ ಜನವರಿ 13ರಂದು ತನ್ನ ರಾಶಿ ಬದಲಾವಣೆ ಮಾಡಲಿದ್ದು, ಇದರಿಂದ ನವವಿವಾಹಿತ ದಂಪತಿಗಳಿಗೆ ಈ ಸಮಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಕುಜದೋಷದಿಂದ ಸಂಸಾರದಲ್ಲಿ ಬಿರುಕು ಸಹ ಉಂಟಾಗುತ್ತದೆ.
3/ 8
ಇನ್ನು ಈ ಕುಜ ದೋಷ ಮದುವೆಯ ಮೇಲೆ ಸಹ ಪರಿಣಾಮ ಬೀರುತ್ತದೆ. ಮದುವೆ ವಿಳಂಬವಾಗುವುದು, ಸಂಬಂಧ ಮುರಿದು ಬೀಳುವುದು ಹೀಗೆ ವಿವಿಧ ರೀತಿಯಲ್ಲಿ ಈ ಕುಜ ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಅದಕ್ಕೆ ಕೆಲ ಪರಿಹಾರವನ್ನು ಪಡೆಯುವುದು ಸೂಕ್ತ.
4/ 8
ಈ ಸಮಯದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಅಪ್ಪಿ-ತಪ್ಪಿ ತೆಗೆದುಕೊಮಡರೂ ಸಹ ಇದರಿಂದ ಸಮಸ್ಯೆ ಸಹ ಉಂಟಾಗುತ್ತದೆ. ಹಾಗಾಗಿ ಸ್ವಲ್ಪ ಎಚ್ಚರಿಕೆ ಅಗತ್ಯ.
5/ 8
ಇನ್ನು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕತೆ ಇರುತ್ತದೆ. ಅದರಲ್ಲೂ ಸಂಗಾತಿಯ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ಅಗತ್ಯವಿದ್ದು, ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ.
6/ 8
ಇದಕ್ಕೆ ಪರಿಹಾರ ಬೇಕು ಎಂದರೆ ಸಂಗಾತಿಯ ಜೊತೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಆರಾಧನೆ ಮಾಡಿ, ಸಾಕು ಪ್ರತಿದಿನ ಕನಿಷ್ಠ 2 ಬಾರಿಯಾದರೂ ಹನುಮಾನ ಚಾಲೀಸ್ ಪಠಣೆ ಮಾಡಬೇಕು. ಇದರಿಂದ ಕುಜನ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದು.
7/ 8
ಇನ್ನು ಜೋಡಿ ಹಂಸ ಇರುವ ಫೋಟೋವನ್ನು ಸಹ ನಿಮಮ್ ಬೆಡ್ ರೂಂನಲ್ಲಿ ಇಟ್ಟುಕೊಳ್ಳುವುದು ಶುಭ ಎನ್ನಲಾಗುತ್ತದೆ. ಇದರ ಜೊತೆಗೆ ತುಳಸಿಯನ್ನು ಸಹ ಪೂಜಿಸುವುದರಿಂದ ಕುಜ ದೋಷ ಕಡಿಮೆಯಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)