ನಾವು ಸಾಮಾನ್ಯವಾಗಿ ದೇವರ ಪೂಜೆ ಮಾಡಿದ ನಂತರ ತಿಲಕವನ್ನು ಇಟ್ಟುಕೊಳ್ಳುತ್ತೇವೆ. ಅದರಲ್ಲೂ ಶ್ರೀಗಂಧ, ಸಿಂಧೂರ, ಭಸ್ಮ ಹೀಗೆ ವಿವಿಧ ರೀತಿಯ ತಿಲಕವನ್ನು ಇಟ್ಟುಕೊಳ್ಳುವ ಅಭ್ಯಾಸವಿದೆ. ಈ ರೀತಿ ತಿಲಕ ಇಟ್ಟುಕೊಳ್ಳುವುದರಿಂದ ಮಾನಸಿಕ ಶಕ್ತಿ ಬಲವಾಗುತ್ತದೆ ಎನ್ನಲಾಗುತ್ತದೆ. ಆದರೆ ನಾವು ಹೆಚ್ಚಾಗಿ ನಮ್ಮ ಹಣೆಯ ಮೇಲೆ ಕೆಂಪು ಬಣ್ಣದ ತಿಲಕವನ್ನು ಹಚ್ಚಿಕೊಳ್ಳುತ್ತೇವೆ.