Red Rose Tips: ಗುಲಾಬಿ ಹೂವನ್ನು ಹೀಗೆ ಬಳಸಿದ್ರೆ ಸಾಲದ ಸಮಸ್ಯೆಯಿಂದ ಸಿಗುತ್ತೆ ಮುಕ್ತಿ
Debt Recovery Tips: ಕಷ್ಟದ ಸಮಯದಲ್ಲಿ ಮಾಡಿದ ಸಾಲ ತೀರಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಪರದಾಡಬೇಕಾಗುತ್ತದೆ. ಆದರೆ ವಾಸ್ತು ಪ್ರಕಾರ ಕೆಲ ಸಲಹೆ ಪಾಲಿಸಿದರೆ ನಿಮ್ಮ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಸದ್ಯಕ್ಕೆ ನಿಮಗೆ ಬೇಕಾಗುವುದು ಕೇವಲ ಕೆಂಪು ಗುಲಾಬಿ ಹೂವು. ಹೌದು, ಇದರಿಂದ ಹೇಗೆ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬುದು ಇಲ್ಲಿದೆ.
ಸಾಲ ಎಂಬುದು ಜೀವನದ ದೊಡ್ಡ ಸಮಸ್ಯೆ ಎಂದರೆ ತಪ್ಪಲ್ಲ. ಅನಿವಾರ್ಯ ಕಾರಣದಿಂದ ಸಾಲ ಮಾಡಬೇಕಾಗುತ್ತದೆ. ಕಷ್ಟಗಳು ಹೇಳಿ-ಕೇಳಿ ಬರುವುದಿಲ್ಲ, ಹಾಗಾಗಿ ಕೆಲವೊಮ್ಮೆ ಸಾಲ ಮಾಡಬೇಕಾಗುತ್ತದೆ.
2/ 8
ಆದರೆ ಮಾಡಿದ ಸಾಲ ತೀರಿಸುವುದು ಸಹ ಸುಲಭದ ಮಾತಲ್ಲ. ಕೆಲವೊಮ್ಮೆ ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಆಗುವುದಿಲ್ಲ. ಅದಕ್ಕೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ಆ ಪರಿಹಾರವೇನು ಎಂಬುದು ಇಲ್ಲಿದೆ.
3/ 8
ಮಂಗಳವಾರ, ನೀವು ಕೆಂಪು ಗುಲಾಬಿಗಳನ್ನು ತೆಗೆದುಕೊಂಡು, ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ. ಅದರ ಜೊತೆ ಶ್ರೀಗಂಧವನ್ನು ಸಹ ಹಾಕಿ. ಈ ಗಂಟನ್ನು ದೇವರ ಮನೆಯಲ್ಲಿ ಇಟ್ಟು, ಗಣೇಶನ ಪೂಜೆ ಮಾಡುವುದರಿಂದ ನಿಮ್ಮ ಸಾಲದ ಸಮಸ್ಯೆಗೆ ಪರಿಹಾರ ಸಿಗುವುದು ಮಾತ್ರವಲ್ಲ ಕುಟುಂಬದಲ್ಲಿ ಪ್ರಗತಿ ಹೆಚ್ಚಾಗುತ್ತದೆ.
4/ 8
ಕೆಂಪು ಗುಲಾಬಿ ಹೂವಿನ ಎಲೆಗಳ ಜೊತೆ ಕರ್ಪೂರ ಹಾಕಿ, ಸಂಜೆ ಆರತಿ ಮಾಡಬೇಕು. ಅಲ್ಲದೇ ಗುಲಾಬಿ ಹೂವಿನ ಎಲೆಯನ್ನು ದೇವರಿಗೆ ಅರ್ಪಿಸಿದರೆ ನಿಮ್ಮ ವರ್ಷಗಳ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
5/ 8
ಸುಮಾರು 5 ಹುಣ್ಣಿಮೆಗಳ ಕಾಲ 3 ಕೆಂಪು ಗುಲಾಬಿಗಳನ್ನು ನದಿಗೆ ಹಾಕಿ, ನಿಮ್ಮ ಕಷ್ಟಗಳು ನಿವಾರಣೆ ಮಾಡುವಂತೆ ಬೇಡಿಕೊಳ್ಳಿ. ಇದರಿಂದ ನಿಮ್ಮ ಕೆಲಸಗಳು ಸಹ ಬೇಗ ಪೂರ್ಣವಾಗುತ್ತದೆ ಹಾಗೂ ಆದಾಯ ಕೂಡ ಹೆಚ್ಚಾಗುತ್ತದೆ.
6/ 8
ಒಂದು ಬಿಳಿ ಬಟ್ಟೆ ತೆಗೆದುಕೊಂಡು ಅದಕ್ಕೆ ಗುಲಾಬಿ ಹೂವುಗಳನ್ನು ಕಟ್ಟಿ ಗೊಂಚಲು ತಯಾರಿಸಿ. ಇದನ್ನು ಹರಿಯುವ ನೀರಿನಲ್ಲಿ ಬಿಡಿ. ಈ ರೀತಿ ಪ್ರತಿ ಶುಕ್ರವಾರ ಮಾಡುವುದರಿಂದ ನಿಮ್ಮ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
7/ 8
ಅಲ್ಲದೇ ಸುಮಾರು 11 ಮಂಗಳವಾರ ನೀವು ಹನುಮಂತನಿಗೆ ಈ ಕೆಂಪು ಗುಲಾಬಿ ಹೂವು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)