ಕರ್ಕಾಟಕ ರಾಶಿ: ಈ ರಾಶಿಯವರಿಗೆ ಮಹಾಲಕ್ಷ್ಮಿ ರಾಜ ಯೋಗವು ಲಾಭದಾಯಕವಾಗಿರುತ್ತದೆ. ಏಕೆಂದರೆ ಈ ಯೋಗವು ಜಾತಕದ ಅದೃಷ್ಟದ ಸ್ಥಾನದಲ್ಲಿ ಉಂಟಾಗುತ್ತದೆ. ಈ ಕಾರಣದಿಂದಾಗಿ, ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅಲ್ಲದೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ಆಸೆಗಳೂ ಈ ಅವಧಿಯಲ್ಲಿ ಈಡೇರುವ ಸಾಧ್ಯತೆ ಇದೆ. ಅಲ್ಲದೆ, ಹಳೆಯ ಹೂಡಿಕೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಹಾಲಕ್ಷ್ಮಿ ರಾಜಯೋಗವು ಆರ್ಥಿಕ ಮತ್ತು ವೈವಾಹಿಕ ದೃಷ್ಟಿಕೋನದಿಂದ ಲಾಭದಾಯಕವಾಗಲಿದೆ. ಈ ಯೋಗವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ಸಂಗಾತಿಯ ಬೆಂಬಳ ಸಿಗುತ್ತದೆ ಮತ್ತು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ. ವಿವಾಹಿತರಿಗೆ ಸಹ ಮದುವೆ ಭಾಗ್ಯ ಕೂಡಿ ಬರಲಿದೆ.