Rahu- Ketu Gochar 2023: ಈ 4 ರಾಶಿ ಮೇಲಿದೆ ರಾಹು-ಕೇತು ಕಣ್ಣು, ಕಷ್ಟಗಳ ಸರಮಾಲೆ ಆರಂಭ
Rahu-Ketu Gochar 2023: ಜ್ಯೋತಿಷ್ಯದಲ್ಲಿ, ರಾಹು-ಕೇತುವನ್ನು ಅತ್ಯಂತ ಮುಂಗೋಪದ ಗ್ರಹಗಳು ಎಂದು ಕರೆಯಲಾಗುತ್ತದೆ. ಈ 2 ಗ್ರಹಗಳ ಕಾರಣದಿಂದ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ಅದರಲ್ಲೂ ಇವುಗಳ ಸ್ಥಾನ ಬದಲಾವಣೆ 4 ರಾಶಿಗಳ ಪರಿಣಾಮ ಬೀರುತ್ತಿದೆ. ಆ 4 ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಈ 2 ಗ್ರಹಗಳು ಹಿಮ್ಮುಖ ಚಲನೆ ಮಾಡುತ್ತವೆ. ಇವುಗಳ ಹಿಮ್ಮುಖ ಚಲನೆಯಿಂದಾಗಿ, ಅವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದೂವರೆ ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.
2/ 8
ಅವುಗಳು ಒಂದು ರಾಶಿಯಿಂದ ಇನ್ನೊಂದಕ್ಕೆ ಸಾಗಿದಾಗ, ಅನೇಕ ರಾಶಿಗಳ ಅದೃಷ್ಟ ಬದಲಾಗುತ್ತದೆ, ಆದರೆ ಅನೇಕರ ಭವಿಷ್ಯ ಕತ್ತಲೆಯಾಗುತ್ತದೆ. ಜೀವನದಲ್ಲಿ ಸಮಸ್ಯೆಗಳು ಸಾಲಾಗಿ ಬರಲು ಆರಂಭವಾಗುತ್ತದೆ.
3/ 8
ಕನ್ಯಾರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರಿಗೆ ರಾಹು-ಕೇತುಗಳಿಂದ ತೊಂದರೆ ಇದೆ. ಈ ಸ್ಥಾನ ಬದಲಾವಣೆಯಿಂದ ತಮ್ಮ ಉದ್ಯೋಗ-ವ್ಯವಹಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬ ಸದಸ್ಯರೊಂದಿಗೆ ಸಂಬಂಧ ಹದಗೆಡಬಹುದು. ಅವರು ಎಲ್ಲಾ ಕ್ಷೇತ್ರಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
4/ 8
ಮೀನ ರಾಶಿ: ಮೀನ ರಾಶಿಯಲ್ಲಿ ರಾಹು-ಕೇತುಗಳ ಪ್ರವೇಶವು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದ ವ್ಯಾಪಾರದಲ್ಲಿ ನಷ್ಟ ಹೆಚ್ಚುತ್ತದೆ ಮತ್ತು ಉದ್ಯೋಗದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊರಗಿನವರಿಂದ ಸಾಲವನ್ನು ಸಹ ಪಡೆಯಬಹುದು, ಇದರಿಂದ ಆರ್ಥಿಕ ಸಮಸ್ಯೆ ಸಹ ಹೆಚ್ಚಾಗುತ್ತದೆ. ಜೊತೆಗೆ ಆರೋಗ್ಯವೂ ಹಾಳಾಗಬಹುದು.
5/ 8
ವೃಷಭ ರಾಶಿ : ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯವರು ಈ ರಾಹು-ಕೇತು ಸ್ಥಾನ ಬದಲಾವಣೆಯಿಂದ ದೊಡ್ಡ ಆರ್ಥಿಕ ಬಿಕ್ಕಟ್ಟು ಅನುಭವಿಸಬೇಕಾಗುತ್ತದೆ. ಆದಾಯಕ್ಕಿಂತ ವೆಚ್ಚಗಳು ಹೆಚ್ಚಾಗುತ್ತವೆ, ಅನೇಕ ಖರ್ಚುಗಳನ್ನು ಮಾಡಬೇಕಾಗಬಹುದು. ಕುಟುಂಬದಲ್ಲಿನ ಭಿನ್ನಾಭಿಪ್ರಾಯವು ಸಮಸ್ಯೆಯನ್ನು ಹೆಚ್ಚಿಸಬಹುದು.
6/ 8
ಮೇಷ ರಾಶಿ: ಈ ರಾಶಿಯವರ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಾಣಿಸುತ್ತದೆ. ರಾಹು-ಕೇತುಗಳ ಸಂಚಾರದಿಂದಾಗಿ ಅವರ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು. ಇನ್ನೂ ಅನೇಕ ರೀತಿಯ ಸಮಸ್ಯೆ ಬರಬಹುದು
7/ 8
ಪರಿಹಾರ: ನಿಮ್ಮ ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ ಮತ್ತು ಯಾರ ಮೇಲೂ ಅನಗತ್ಯವಾಗಿ ಕೋಪಗೊಳ್ಳಬೇಡಿ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ. ಈ ಪರಿಹಾರ ಮಾಡಿದರೆ ರಾಹು-ಕೇತು ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)