Goddess Lakshmi: ಈ ರೀತಿ ಊಟ ಮಾಡಿದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟು ಹೋಗೋದೇ ಇಲ್ಲ
Food Eating Way: ನಾವು ಊಟ ಮಾಡುವಾಗ ಹೆಚ್ಚಾಗಿ ಅದರ ವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಷ್ಟ ಬಂದ ಸಮಯಕ್ಕೆ, ಇಷ್ಟ ಬಂದ ರೀತಿಯಾಗಿ ಊಟ ಮಾಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರಿಯಾದ ರೀತಿಯಲ್ಲಿ ಊಟ ಮಾಡಿದರೆ ಅದೃಷ್ಟ ಲಕ್ಷ್ಮೀ ಸದಾ ಮನೆಯಲ್ಲಿ ನೆಲೆಸಿರುತ್ತಾಳೆ. ಹಾಗಾದ್ರೆ ಊಟ ಮಾಡುವ ಸರಿಯಾದ ವಿಧಾನ ಯಾವುದು ಎಂಬುದು ಇಲ್ಲಿದೆ.
ನಮ್ಮ ಸಂಪ್ರದಾಯದಲ್ಲಿ ಊಟ ಮಾಡಲು ಕೆಲ ನಿಯಮಗಳಿಗೆ. ಅದನ್ನು ಅನುಸರಿಸುವುದರಿಂದ ಆರೋಗ್ಯ ಮಾತ್ರ ಅಲ್ಲ ನಮ್ಮ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ ಎನ್ನಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ನಾವು ಫಾಲೋ ಮಾಡುತ್ತಿಲ್ಲ ಎಂಬುದು ಸಹ ಸತ್ಯ.
2/ 8
ಒಟ್ಟಿಗೆ ಊಟ ಮಾಡಿ: ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಊಟ ಮಾಡುವುದರಿಂದ ಬಹಳಷ್ಟು ಲಾಭ ಇದೆ. ಅದರಲ್ಲೂ ಎಲ್ಲಾ ಸದಸ್ಯರೂ ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡಿದರೆ ಲಕ್ಷ್ಮೀ ದೇವಿಗೆ ಸಂತೋಷ ಆಗುತ್ತದೆ. ಅಲ್ಲದೇ ಈ ರೀತಿ ಊಟ ಮಾಡುವುದರಿಂದ ಮನೆಯಲ್ಲಿ ಆಹಾರ ಹಾಗೂ ಹಣದ ಕೊರತೆ ಬರುವುದಿಲ್ಲವಂತೆ.
3/ 8
ಕೂದಲು ಸಿಗಬಾರದು: ಆಹಾರದ ಕೂದಲು ಸಿಕ್ಕರೆ ನಮಗೆ ಊಟ ಮಾಡಲು ಮನಸ್ಸು ಬರುವುದಿಲ್ಲ. ಇದು ಆರೋಗ್ಯದ ದೃಷ್ಟಿಯಿಂದ ಸಹ ಒಳ್ಳೆಯದಲ್ಲ. ಹಾಗೆಯೇ ಈ ರೀತಿ ಕೂದಲು ಸಿಕ್ಕ ಆಹಾರ ಸೇವನೆ ಮಾಡುವುದರಿಂದ ಬಡತನ ಕಾಡಬಹುದು.
4/ 8
ದಂಪತಿಗಳು ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡಬಾರದು: ನೀವು ಕೆಲವರು ಹೇಳಿರುವುದನ್ನ ಕೇಳಿರಬಹುದು ಗಂಡ-ಹೆಂಡತಿ ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ಪ್ರೀತಿ ಹೆಚ್ಚಾಗುತ್ತದೆ ಎಂದೆಲ್ಲಾ, ಆದರೆ ಜ್ಯೋತಿಷ್ಯದ ಪ್ರಕಾರ ಇದು ತಪ್ಪು. ಇದರಿಂದ ಸಮಸ್ಯೆಗಳು ಜಾಸ್ತಿ.
5/ 8
ಆದರೆ ಈ ರೀತಿ ಗಂಡ-ಹೆಂಡತಿ ಒಟ್ಟಿಗೆ ಆಹಾರ ಸೇವನೆ ಮಾಡಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಲಕ್ಷ್ಮೀ ದೇವಿಗೆ ಕೋಪ ಸಹ ಬರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
6/ 8
ಕೆಲವೊಮ್ಮೆ ನಾವು ಊಟಕ್ಕೆ ತಟ್ಟೆ ಹಾಕುವಾಗ ಅದು ಕಾಲಿನ ಬಳಿ ಬೀಳುತ್ತದೆ ಅಥವಾ ನೆಲದ ಮೇಲೆ ತಟ್ಟೆ ಹಾಕಿದಾಗ ಕಾಲಿಗೆ ತಾಗುತ್ತದೆ. ಈ ರೀತಿ ಆದಾಗ ತಟ್ಟೆ ಬದಲಿಸಬೇಕು. ಅದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.
7/ 8
ತಟ್ಟೆ ದಾಟಬೇಡಿ: ಯಾವುದೇ ಕಾರಣಕ್ಕೂ ಊಟದ ತಟ್ಟೆಯನ್ನು ದಾಟಬಾರದು ಎಂದು ಹಿರಿಯರು ಸುಮ್ಮನೇ ಹೇಳುವುದಿಲ್ಲ. ಇದರಿಂದ ಸಮಸ್ಯೆಗಳು ಬರುತ್ತದೆ. ಆಕಸ್ಮಿಕವಾಗಿ ತಿಳಿಯದೇ ದಾಟಿದರೂ ಸಹ ಆ ತಟ್ಟೆಯಲ್ಲಿ ಆಹಾರ ಸೇವನೆ ಮಾಡಬಾರದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)