Numerology: ನಿಮ್ಮ ಜನ್ಮದಿನಾಂಕದಲ್ಲಿ ಈ ಡೇಟ್ಗಳಿದ್ರೆ ನಿಮ್ಮ ಲೆಕ್ಕ ಪಕ್ಕಾ! ನೀವು ಬ್ಯುಸಿನೆಸ್ಮೆನ್ ಆಗೇ ಆಗ್ತೀರಿ!
Profession Selection as Per Numerology: ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟವಾದ ಕೆಲಸ ಎಂದರೆ ಇಷ್ಟ ಇರುತ್ತದೆ. ಕೆಲವರಿಗೆ ಪತ್ರಕರ್ತರಾಗಬೇಕು ಎಂದು ಆಸೆ ಇದ್ದರೆ, ಕೆಲವರಿಗೆ ಸ್ವಂತ ಉದ್ಯೋಗ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ನ್ಯೂಮರಾಲಜಿ ಪ್ರಕಾರ ಯಾವ ಸಂಖ್ಯೆಯವರಿಗೆ ಸ್ವಂತ ಉದ್ಯೋಗ ಮಾಡಿ ಯಶಸ್ಸುಗಳಿಸುವ ಅವಕಾಶ ಸಿಗುತ್ತದೆ ಎಂಬುದು ಇಲ್ಲಿದೆ.
ನೀವು ವ್ಯಾಪಾರದಲ್ಲಿ ಯಶಸ್ಸುಗಳಿಸಬೇಕು ಎಂದರೆ ಹಾಗೂ ವ್ಯವಹಾರದಲ್ಲಿ ಬೆಳವಣಿಗೆ ಆಗಬೇಕು ಎಂದರೆ ನಿಮ್ಮ ಜನ್ಮ ದಿನಾಂಕದಲ್ಲಿ ನೀವು ನೇರವಾಗಿ ಅಥವಾ ಪರೋಕ್ಷವಾಗಿ 1,5,6 ಮತ್ತು 8 ಸಂಖ್ಯೆಗಳನ್ನು ಹೊಂದಿರಬೇಕು.
2/ 8
ವ್ಯವಹಾರವನ್ನು ನಡೆಸಲು ವಿವಿಧ ರೀತಿಯ ಜನರೊಂದಿಗೆ ವ್ಯವಹರಿಸುವುದು ಬಹಳ ಮುಖ್ಯ, ಕೆಲಸವನ್ನು ಪೂರ್ಣಗೊಳಿಸಲು ಮುಖ್ಯವಾಗಿ ಮಾತನಾಡುವ ಕಲೆಯನ್ನು ಹೊಂದಿರಬೇಕು ಅದು ಸಂಖ್ಯೆ 1 ರಿಂದ ಬರುತ್ತದೆ.
3/ 8
ಸಂಖ್ಯೆ 1 ಅಭಿವ್ಯಕ್ತಿ ಮತ್ತು ಕಮ್ಯೂನಿಕೇಷನ್ಗಾಗಿ ಇರುವ ನಂಬರ್ ಎಂದು ಹೇಳಲಾಗುತ್ತದೆ. ಇದು ಪರಿಣಾಮಕಾರಿಯಾಗಿ ಕಮ್ಯೂನಿಕೇಟ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಹಾಗಾಗಿ ನಿಮ್ಮ ಜನ್ಮ ದಿನಾಂಕದಲ್ಲಿ ಈ ಸಂಖ್ಯೆ ಇದ್ದರೆ ಅದೃಷ್ಟವಂತೆ.
4/ 8
ಸಂಖ್ಯೆ 5 ವ್ಯಕ್ತಿಗೆ ಪಾಸಿಟಿವ್ ವೈಬ್ ನೀಡುತ್ತದೆ, ಇದು ಜೀವನಕ್ಕೆ ಹೊಸ ದಿಕ್ಕನ್ನು ಮತ್ತು ಅದೃಷ್ಟವನ್ನು ನೀಡುತ್ತದೆ. ಯಾವುದೇ ವ್ಯಾಪಾರ ವ್ಯವಹಾರವನ್ನು ಯಶಸ್ವಿಯಾಗಿ ನಡೆಸಲು ಕಡ್ಡಾಯವಾಗಿರುವ ನಿಮ್ಮ ಅದೃಷ್ಟವನ್ನು ಬದಲಾಯಿಸುವಲ್ಲಿ ಸಂಖ್ಯೆ 5 ಮುಖ್ಯ ಪಾತ್ರವನ್ನು ವಹಿಸುತ್ತದೆ.
5/ 8
ವ್ಯಾಪಾರಕ್ಕೆ ಚಿಂತನೆ ಮಾಡುವ ಸಾಮರ್ಥ್ಯ ಮತ್ತು ಸ್ಥಿರತೆಯ ಅಗತ್ಯವಿರುತ್ತದೆ, ಜೊತೆಗೆ ಅಪಾಯವನ್ನು ಸರಿಯಾಗಿ ಎದುರಿಸುವ ಶಕ್ತಿಯನ್ನು ಸಹ ಈ ನಂಬರ್ ನೀಡುತ್ತದೆ. ಸಂಖ್ಯೆ 5 ನಿಮ್ಮನ್ನು ಆಕರ್ಷಕ ವ್ಯಕ್ತಿಯಾಗಿಸುತ್ತದೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
6/ 8
6 ನೇ ಸಂಖ್ಯೆಯು ಅವಕಾಶಗಳ ಸಂಖ್ಯೆ ಎಂದು ಪ್ರಸಿದ್ಧಿ ಪಡೆದಿದೆ. ಒಬ್ಬ ವ್ಯಕ್ತಿಯು ಪ್ರತಿಭಾವಂತನಾಗಿದ್ದರೂ ಸಹ, ಅವಕಾಶದ ಕೊರತೆಯು ಯಶಸ್ಸಿಗೆ ಒಂದು ತಡೆಗೋಡೆ ಆಗುತ್ತದೆ. ಈ ಅವಕಾಶವನ್ನು ಸಂಖ್ಯೆ 6 ರಿಂದ ಒದಗಿಸುತ್ತದೆ. ಲಾಭ ಪಡೆಯಲು ಮತ್ತು ಯಶಸ್ಸು ಪಡೆಯಲು ಸಂಖ್ಯೆ 6 ಅತ್ಯಗತ್ಯ.
7/ 8
ಸಂಖ್ಯೆ 8 ಕಠಿಣ ಪರಿಶ್ರಮದ ಸಂಖ್ಯೆ ಎನ್ನಲಾಗುತ್ತದೆ. ಜ್ಞಾನ ಮತ್ತು ಅನುಭವದಿಂದ ವ್ಯಕ್ತಿಯು ಸಾಧನೆ ಮಾಡಲು ಸಾಧ್ಯ. ಅದಕ್ಕೆ ಪರಿಶ್ರಮ ಕೂಡ ಅಗತ್ಯ. ಈ ಸಂಖ್ಯೆ ಬೇರೆಯವರನ್ನು ಸುಲಭವಾಗಿ ನಂಬಲು ಬಿಡುವುದಿಲ್ಲ, ಈ ನಂಬರ್ 8 ಅನಗತ್ಯ ಖರ್ಚು ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಸುರಕ್ಷಿತ ಹೂಡಿಕೆಯನ್ನು ಮಾತ್ರ ಪ್ರೋತ್ಸಾಹಿಸುತ್ತದೆ.
8/ 8
ಲಕ್ಕಿ ಬಣ್ಣ: ಹಸಿರು ಮತ್ತು ಕಿತ್ತಳೆ, ಅದೃಷ್ಟ ಸಂಖ್ಯೆ 5. ಈ ಸಂಖ್ಯೆಯನ್ನು ಜನ್ಮ ದಿನಾಂಕದಲ್ಲಿ ಹೊಂದಿರುವವರು ದಯವಿಟ್ಟು ಜಾನುವಾರುಗಳಿಗೆ ಹಾಲು ದಾನ ಮಾಡಿ. ಅಲ್ಲದೇ, ಕಛೇರಿಯ ಮೇಜಿನ ಮೇಲೆ ಸ್ಫಟಿಕ ಕಮಲವನ್ನು ಇಟ್ಟುಕೊಳ್ಳಿ.