Numerology: ಈ ಸಂಖ್ಯೆಯವರಿಗೆ ದೇಶ ರಕ್ಷಣೆ ಮಾಡುವ ಅವಕಾಶ ಸಿಗಲಿದೆ, ನ್ಯೂಮರಾಲಜಿ ಈ ಬಗ್ಗೆ ಏನ್ ಹೇಳುತ್ತೆ?
Profession Selection as Per Numerology: ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟವಾದ ಕೆಲಸ ಎಂದರೆ ಇಷ್ಟ ಇರುತ್ತದೆ. ಕೆಲವರಿಗೆ ಪತ್ರಕರ್ತರಾಗಬೇಕು ಎಂದು ಆಸೆ ಇದ್ದರೆ, ಕೆಲವರಿಗೆ ಕೇಂದ್ರ ಸರ್ಕಾರಿ ಕೆಲಸ ಪಡೆಯಬೇಕು ಎಂಬ ಬಯಕೆ ಇರುತ್ತದೆ. ನ್ಯೂಮರಾಲಜಿ ಪ್ರಕಾರ ಯಾವ ಸಂಖ್ಯೆಯವರಿಗೆ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂಬುದು ಇಲ್ಲಿದೆ.
ನಿಮಗೆ ರಕ್ಷಣಾ ಕ್ಷೇತ್ರದಲ್ಲಿಕೆಲಸ ಮಾಡಲು ಆಸಕ್ತಿ ಇದ್ದರೆ, ಸಂಖ್ಯಾಶಾಸ್ತ್ರದ ಪರಿಣಿತರ ಪ್ರಕಾರ ನಿಮ್ಮ ಜನ್ಮ ದಿನಾಂಕದಲ್ಲಿ ನೀವು ನೇರವಾಗಿ ಅಥವಾ ಪರೋಕ್ಷವಾಗಿ 4,2,6 ಮತ್ತು 7 ಸಂಖ್ಯೆಗಳನ್ನು ಹೊಂದಿರಬೇಕು. ಆಗ ಮಾತ್ರ ನಿಮ್ಮ ಕನಸು ನನಸಾಗಲು ಸಾಧ್ಯವಂತೆ.
2/ 9
ಸಂಖ್ಯೆ 4 ಬಹಳ ಶಿಸ್ತಿನ ಸಂಖ್ಯೆ ಎಂದು ಹೇಳಲಾಗುತ್ತದೆ, ಅದು ನಿಮ್ಮ ಯೋಜನೆಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಮತ್ತು ಕಷ್ಟಪಟ್ಟು ಕೆಲಸ ಮಾಡುವುದರ ಸಂಕೇತ ಸಹ ಆಗಿದೆ ಎನ್ನುತ್ತಾರೆ ತಜ್ಞರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ನಿಯಮಗಳನ್ನು ಉಲ್ಲಂಘಿಸದಿರಲು ಈ ನಾಲ್ಕನೇ ಸಂಖ್ಯೆ ಬಹಳ ಮುಖ್ಯವಂತೆ.
3/ 9
ಮೊದಲೇ ಹೇಳಿದಂತೆ ಈ ನಂಬರ್ ಹೊಂದಿರುವ ಜನರು ಬಹಳ ಶಿಸ್ತಿನ ಜೀವನ ನಡೆಸುವುದರಿಂದ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವರು ಸೂಕ್ತ ಎನ್ನಬಹುದು. ಹಾಗಾಗಿ ಜನ್ಮ ದಿನಾಂಕದಲ್ಲಿ 4ನೇ ನಂಬರ್ ಹೊಂದಿರುವ ಜನರಿಗೆ ಈ ಕ್ಷೇತ್ರ ಸೂಟ್ ಆಗುತ್ತದೆ.
4/ 9
ಸಂಖ್ಯೆ 2 ನಿಮ್ಮ ಜನ್ಮ ದಿನಾಂಕದಲ್ಲಿ ಇದ್ದರೆ ಯಾವುದೇ ರೀತಿಯ ಸಂದರ್ಭಗಳನ್ನು ಹಾಗೂ ಕಷ್ಟಗಳನ್ನು ಎದುರಿಸಲು ತಾಳ್ಮೆಯನ್ನು ನೀಡುತ್ತದೆ ಎನ್ನುತ್ತದೆ ಈ ಸಂಖ್ಯಾಶಾಸ್ತ್ರ. ಈ ನಂಬರ್ ಹೊಂದಿರುವ ವ್ಯಕ್ತಿಯು ಬಹಳ ಸಕ್ರಿಯ ಜೀವನಶೈಲಿಯನ್ನು ಹೊಂದಿರುತ್ತಾರೆ.
5/ 9
ಈ ನಂಬರ್ ಹೊಂದಿರುವ ಜನರು ಉದ್ವಿಗ್ನ ಪರಿಸ್ಥಿತಿಯಲ್ಲಿ ಯೋಜನೆ, ತಂತ್ರ ಮತ್ತು ತಕ್ಷಣ ಪ್ರತಿಕ್ರಿಯೆ ನೀಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೇ, ಗುಂಪಾಗಿ ಕೆಲಸ ಮಾಡುವಾಗ ಜೊತೆಗಾರರ ಜೊತೆ ಒಳ್ಳೆಯ ಸಂಬಂಧ ಬೆಳೆಸುವ ವ್ಯಕ್ತಿತ್ವ ಈ ಸಂಖ್ಯೆಯವರದ್ದು.
6/ 9
ಜನ್ಮ ದಿನಾಂಕದಲ್ಲಿ ಸಂಖ್ಯೆ 6 ಅನ್ನು ಹೊಂದಿರುವ ಜನರು ಬಹಳ ದೃಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ಸಂಖ್ಯೆ 6 ಬಹಳ ಮುಖ್ಯವಾದ ಸಂಖ್ಯೆ. ದೃಢಸಂಕಲ್ಪದಿಂದ ಮಾತ್ರ ಕಷ್ಟಕರವಾದ ಯುದ್ಧಗಳನ್ನು ಗೆಲ್ಲಲು ಸಾಧ್ಯ ಎಂಬುದನ್ನ ಈ ಸಂಖ್ಯೆಯವರು ಸಾಬೀತು ಮಾಡುತ್ತಾರೆ.
7/ 9
ನಿಮ್ಮ ಜನ್ಮ ದಿನಾಂಕದಲ್ಲಿ ಸಂಖ್ಯೆ 7 ಅನ್ನು ಹೊಂದಿದ್ದರೆ ದೇಶದೊಳಗೆ ಮಾತ್ರವಲ್ಲದೆ ದೇಶದ ಹೊರಗೂ ಯಶಸ್ಸನ್ನು ಸಿಗುತ್ತದೆ. ಇದು ರಕ್ಷಣಾ ಕ್ಷೇತ್ರದಲ್ಲಿ ಇರುವ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ಥಳಕ್ಕೆ ವರ್ಗಾವಣೆ ಅಥವಾ ಪ್ರಯಾಣದಲ್ಲಿ ಬದಲಾವಣೆಯನ್ನು ನೀಡುವ ಸಂಖ್ಯೆ ಎನ್ನಲಾಗುತ್ತದೆ.
8/ 9
ಇನ್ನು ನಿಮ್ಮ ಜನ್ಮದಿನಾಂಕದಲ್ಲಿ ಈ ಸಂಖ್ಯೆಗಳಿಲ್ಲದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯ ಅನುಸಾರ ಈ ಸಂಖ್ಯೆಗಳನ್ನು ನೀವು ಅಳವಡಿಸಿಕೊಳ್ಳಬೇಕು ಇದರಿಂದ ನೀವು ಉತ್ತಮ ಶಕ್ತಿಯನ್ನು ಪಡೆದುಕೊಳ್ಳುತ್ತೀರಿ ಮತ್ತು ನಿಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುವುದು ಖಚಿತ.
9/ 9
ಇನ್ನು ಈ ಸಂಖ್ಯೆಯವರಿಗೆ ಅದೃಷ್ಟದ ಬಣ್ಣ ಹಸಿರಾಗಿದ್ದು, ದನಗಳಿಗೆ ಹಾಲು ಮತ್ತು ಹಸಿರು ಹುಲ್ಲನ್ನು ದಾನ ಮಾಡಿ. ಅಲ್ಲದೇ ಜೊತೆಗೆ ಸೂರ್ಯನಿಗೆ ನೀರನ್ನು ಅರ್ಪಿಸುವುದು ಉತ್ತಮ.