Astrological Prediction 2023: ಹೊಸವರ್ಷದಲ್ಲಿ ಈ ರಾಶಿಯವರಿಗೆ ಅವಮಾನಗಳೇ ಬಹುಮಾನವಂತೆ
Pisces 2023: ಹೊಸವರ್ಷದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಇರುತ್ತದೆ. ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಮೀನಾ ರಾಶಿಯವರಿಗೆ 2023 ಹೇಗಿರಲಿದೆ ಎಂಬುದು ಇಲ್ಲಿದೆ. ಇನ್ನು ಸುಧಾಮ ಎಚ್.ಎಸ್. ಇವರು ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು
ಮೀನ ರಾಶಿಯವರಿಗೆ 2023ರಲ್ಲಿ ಮಿಶ್ರಫಲಗಳು ಸಿಗಲಿದೆ ಎನ್ನಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆಗಳು ಹಾಗೂ ಅವಮಾನಗಳು ಸಾಮಾನ್ಯ ಎನ್ನುವಂತಾದರೂ ಸಹ ಕೆಲವೆಡೆ ಜಯ ನಿಮ್ಮನ್ನ ಹುಡುಕಿ ಬರಲಿದೆ ಎಂದರೆ ತಪ್ಪಲ್ಲ.
2/ 7
ಕಳೆದ ವರ್ಷದಿಂದ ಆರಂಭವಾದ ಸಾಡೆ ಸಾತಿನ ಪ್ರಭಾವದಲ್ಲಿರುವ ಮೀನ ರಾಶಿಯವರಿಗೆ ದ್ವಿತೀಯ ಮನೆಯಲ್ಲಿರುವ ಗುರುವಿನ ಮಹಿಮೆಯಿಂದಾಗಿ ಸ್ವಲ್ಪಮಟ್ಟಿನ ಶುಭಫಲಗಳು ಅನುಭವಕ್ಕೆ ಬರಲಿದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಆದರೂ ಸಹ ಸಮಸ್ಯೆಗಳು ಸಾಮಾನ್ಯ ಎನ್ನಬಹುದು.
3/ 7
ದ್ವಾದಶದ ಶನಿಯಿಂದ ವಿಪರೀತ ಅಪವ್ಯಯ ಉಂಟಾಗುವ ಸಾಧ್ಯತೆ ಇದೆ. ಒಳ್ಳೆಯ ಸ್ಥಾನದಿಂದ ಕೆಳಗಿಳಿಯುವ ಸ್ಥಿತಿಗಳು ಸಹ ನಿಮಗೆ ಉಂಟಾಗುತ್ತದೆ. ಕಣ್ಣಿನ ಆರೋಗ್ಯದಲ್ಲಿ ಸಹ ಏರು-ಪೇರಾಗುತ್ತದೆ. ಸಾಲ ಬಾಧೆ ಸಹ ಕಾಡಬಹುದು. ಹಣದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ.
4/ 7
ಧೈರ್ಯವೇ ಇಲ್ಲದಿರುವ ಸ್ಥಿತಿ ಬಂದೊದಗುತ್ತದೆ. ಸಮಾಜದಲ್ಲಿ ತಲೆ ಬಗ್ಗಿಸುವ ಸ್ಥಿತಿಗಳು ನಿರ್ಮಾಣವಾಗಬಹುದು. ದೇಶ ಭ್ರಷ್ಟತೆ ಯೋಗವಿದ್ದು, ದೊಡ್ಡ ಮಟ್ಟಿನ ಸ್ಥಳಾಂತರ ಯೋಗವಿರುತ್ತದೆ ಎನ್ನಬಹುದು.
5/ 7
ಮಹತ್ತರವಾದ ಶತ್ರುಕಾಟ ಇದ್ದರೂ ಅಂತಿಮ ಜಯ ನಿಮ್ಮದೇ. ಇಷ್ಟೆಲ್ಲ ಅಶುಭ ಫಲಗಳ ಮಧ್ಯ ದ್ವಿತೀಯದಲ್ಲಿರುವ ಗುರುವಿನಿಂದಾಗಿ ವಾಕ್ ಚಾತುರ್ಯ ವೃದ್ಧಿಯಾಗಿ ಹಲವು ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಆದರೂ ಸಹ ಹಿತಶತ್ರುಗಳಿಂದ ನೀವು ದೂರ ಇರುವುದು ಬಹಳ ಅಗತ್ಯ ಎಂಬುದು ನೆನಪಿರಲಿ.
6/ 7
ಮನೆಯ ಯಜಮಾನಿಯ ಶಕ್ತಿ ವೃದ್ಧಿಯಾಗಿ ಸ್ವಲ್ಪಮಟ್ಟಿಗೆ ಉದ್ಯೋಗದಲ್ಲಿ ಪ್ರಗತಿ ಕಾಣಬಹುದಾಗಿದೆ. ಮುಖ ಭಾಗದಲ್ಲಿ ಸಣ್ಣಪುಟ್ಟ ಕಾಯಿಲೆಗಳು ಬಾಧಿಸಬಹುದು ಒಂದು ಕಾರ್ಯ ಸಾಧನೆಗೆ ಹತ್ತಾರು ಪ್ರಯತ್ನಗಳ ಅವಶ್ಯಕತೆ ಇರುತ್ತದೆ.
7/ 7
ಸಂಪತ್ತು ಬಂದರು ಕೂಡ ಬೇಕಾದ ಕಾಲದಲ್ಲಿ ಪ್ರಾಪ್ತವಾಗಲಿಕ್ಕಿಲ್ಲ. ಒಟ್ಟಾರೆ ಮೇಲೆ ಮುಳುಗುವವನಿಗೆ ತೃಣಾಶ್ರಯದಂತೆ ಸ್ವಲ್ಪ ಮಟ್ಟಿನ ನೆಮ್ಮದಿ ಇದ್ದೇ ಇದೆ. ಮಹಾದೇವನ ಜೊತೆಗೆ ಶನೇಶ್ಚರನನ್ನು ಆರಾಧಿಸಿ, ಕಷ್ಟಗಳಿಂದ ಮುಕ್ತರಾಗಿರಿ.